ಭಯ ಬೇಡ, ಎಐ ಹೊಸ ಉದ್ಯೋಗ ಸೃಷ್ಟಿಸುತ್ತೆ : ಮೋದಿ

Kannadaprabha News   | Kannada Prabha
Published : Feb 18, 2026, 04:25 AM IST
Narendra modi

ಸಾರಾಂಶ

ಎಐ ಇದೀಗ ದಾಪುಗಾಲಿಡುತ್ತಾ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡು, ನಿರುದ್ಯೋಗದ ಆತಂಕವನ್ನು ಹೆಚ್ಚಿಸಿರುವ ಹೊತ್ತಿನಲ್ಲಿ, ‘ಈ ಭಯಕ್ಕೆ ತಯಾರಿಯೊಂದೇ ಮದ್ದು. ಎಐನಿಂದ ಹೊಸ ಉದ್ಯೋಗಗಳು ಸೃಷ್ಟಿ ಆಗಲಿದ್ದು, ರೂಪಾಂತರಗೊಳ್ಳುವ ಕೆಲಸಗಳನ್ನು ಕಲಿತು ಅವನ್ನು ಬಾಚಿಕೊಳ್ಳಬೇಕು’ ಎಂದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೆಲ ವರ್ಷಗಳ ಹಿಂದೆ ಅಂಬೆಗಾಲಿಡುತ್ತಿದ್ದ ಎಐ ಇದೀಗ ದಾಪುಗಾಲಿಡುತ್ತಾ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಂಡು, ನಿರುದ್ಯೋಗದ ಆತಂಕವನ್ನು ಹೆಚ್ಚಿಸಿರುವ ಹೊತ್ತಿನಲ್ಲಿ, ‘ಈ ಭಯಕ್ಕೆ ತಯಾರಿಯೊಂದೇ ಮದ್ದು. ಎಐನಿಂದ ಹೊಸ ಉದ್ಯೋಗಗಳು ಸೃಷ್ಟಿ ಆಗಲಿದ್ದು, ರೂಪಾಂತರಗೊಳ್ಳುವ ಕೆಲಸಗಳನ್ನು ಕಲಿತು ಅವನ್ನು ಬಾಚಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ

ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಇತಿಹಾಸವನ್ನು ನೋಡಿದರೆ, ತಂತ್ರಜ್ಞಾನವು ಕೆಲಸ ಕಸಿಯುವ ಬದಲು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಈಗ ಅದನ್ನು ಮಾಡುತ್ತಿರುವ ಎಐ, ಕೆಲ ಕೆಲಸಗಳ ರೂಪವನ್ನು ಬದಲಿಸುತ್ತಿದೆ’ ಎಂದು ಅಭಯ ನೀಡಿದರು. ಜತೆಗೆ, ‘ಎಐ ಚಾಲಿತ ವ್ಯವಸ್ಥೆಯನ್ನು ಭವಿಷ್ಯವೆಂದು ಪರಿಗಣಿಸುವ ಬದಲು ವರ್ತಮಾನದ ಸಮಸ್ಯೆಯೆಂದು ನೋಡಿ, ಅದಕ್ಕೆ ಅಗತ್ಯವಾದ ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ’ ಎಂದು ಹೇಳಿದರು.

ಭಾರತೀಯ ಎಐ ಹೇಗಿರಲಿದೆ?:

‘ಎಐ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರ ಸಾಧಿಸಲು, ಎಐ ಬಳಸುವುದಷ್ಟೇ ಅಲ್ಲ, ಅದನ್ನು ಸೃಷ್ಟಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ. ಸಾರ್ವಭೌಮತ್ವ, ಒಳಗೊಳ್ಳುವಿಕೆ ಮತ್ತು ನಾವೀನ್ಯತೆಯ ಆಧಾರದಲ್ಲಿ ಇದನ್ನು ಸಾಧಿಸಲಾಗುತ್ತಿದ್ದು, ವಿಶ್ವದ ಟಾಪ್‌ 3 ಎಐ ದೈತ್ಯ ರಾಷ್ಟ್ರಗಳ ಪೈಕಿ ಭಾರತ ನಿಲ್ಲಬೇಕು ಎಂಬುದು ನನ್ನ ಗುರಿಯಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನು ಸಾಧಿಸುವ ಬಗೆಯನ್ನು ವಿವರಿಸುತ್ತಾ, ‘ಭಾರತದ ಎಐ ಮಾದರಿಯು ವಿಶ್ವಾದ್ಯಂತ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಲಿದೆ. ಎಐ ನವೋದ್ಯಮಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಕೋಟಿಗಳಷ್ಟು ಬೆಲೆಬಾಳುವಂಥವಾಗಲಿವೆ. ನಮ್ಮ ಎಐ ಆಧರಿತ ಸಾರ್ವಜನಿಕ ಸೇವೆಗಳ ಅಧ್ಯಯನ ಜಗತ್ತಿನಾದ್ಯಂತ ನಡೆಯಲಿದೆ. ಭಾರತೀಯರು ಎಐಅನ್ನು ಹೊಸ ಅವಕಾಶ ಸೃಷ್ಟಿಸುವ, ಸಾಮರ್ಥ್ಯ ಹೆಚ್ಚಿಸುವ ಸೇವಕನಾಗಿ ಕಾಣಬೇಕು. ವೈದ್ಯರು, ಶಿಕ್ಷಕರು ಮತ್ತು ವಕೀಲರು ಈ ಸಾಧನಗಳನ್ನು ಬಳಸಿಕೊಂಡು ನಿಖರತೆ ಮತ್ತು ದಕ್ಷತೆಯೊಂದಿಗೆ ಅನೇಕರಿಗೆ ಸೇವೆ ನೀಡಬಹುದು’ ಎಂದು ಕಿವಿಮಾತು ಹೇಳಿದರು.

ನಿಯಂತ್ರಣ ಹೇಗೆ?:

ಕ್ಷಿಪ್ರವಾಗಿ ಆವರಿಸಿಕೊಳ್ಳುತ್ತಿರುವ ಎಐಅನ್ನು ನಿಯಂತ್ರಿಸುವ ಬಗ್ಗೆ ವಿಶ್ವ ಚರ್ಚಿಸುತ್ತಿದ್ದರೆ, ಭಾರತ ಮಾತ್ರ ನಾವೀನ್ಯತೆಯನ್ನು ಉತ್ತೇಜಿಸುತ್ತಲೇ ರಕ್ಷಣೆಯನ್ನೂ ನೀಡಬಹುದು ಎಂಬುದನ್ನು ತೋರಿಸುತ್ತಿದೆ ಎಂದು ಮೋದಿ ಹೇಳಿದರು. ‘ಎಐ ಬೆಳೆಯುತ್ತಾ ಸಾಗಿದಂತೆ ಅದನ್ನು ಜವಾಬ್ದಾರಿಯುತವಾಗಿ ಬಳಸುವ ವಿವೇಚನೆಯೂ ನಮ್ಮಲ್ಲಿ ಬರಬೇಕು. ಭಾರತದ ಇದರತ್ತ ಗಮನ ಹರಿಸುತ್ತಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ, ಮಕ್ಕಳು ಮತ್ತು ಮಹಿಳೆಯರ ಘನತೆಗೆ ಕುತ್ತು ತರುವ ಡೀಪ್‌ಫೇಕ್‌ನಂತಹ ತಂತ್ರಜ್ಞಾನದ ಮೌಲ್ಯಮಾಪನ ಮಾಡಲಾಗುತ್ತಿದೆ’ ಎಂದರು.

ಮೋದಿ ಹೇಳಿದ್ದೇನು?

- ತಂತ್ರಜ್ಞಾನ ಕೆಲಸ ಕಸಿಯಲ್ಲ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ

- ಎಐ ಪರಿಣಾಮದಿಂದ ಹಲವು ಕೆಲಸಗಳು ರೂಪಾಂತರ ಆಗುತ್ತವೆ

- ರೂಪಾಂತರಗೊಳ್ಳವ ಹೊಸ ಹೊಸ ಕೆಲಸಗಳನ್ನು ಕಲಿಯಬೇಕು

- ಇದರಿಂದ ಆ ಹೊಸ ಉದ್ಯೋಗಾವಕಾಶಗಳ ಬಾಚಿಕೊಳ್ಳಬಹುದು

- ಜವಾಬ್ದಾರಿಯುತವಾಗಿ ಎಐ ಬಳಕೆಯ ವಿವೇಚನೆ ತೀರಾ ಅಗತ್ಯ

- ವಿಶ್ವದ ಟಾಪ್‌ 3 ಎಐ ದೈತ್ಯ ದೇಶಗಳ ಸಾಲಲ್ಲಿ ಭಾರತ ನಿಲ್ಲಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್​ ಶಾಕ್​ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?
2014ರಲ್ಲಿ ಸೋನಿಯಾ ನಾನು ಸಿಎಂ ಆಗಬೇಕೆಂದು ಬಯಸಿದ್ದರು ಆದರೆ ರಾಹುಲ್ ಅಡ್ಡಿಯಾದರು : ಅಸ್ಸಾಂ ಸಿಎಂ