ಅರಬ್ಬಿ ಸಮುದ್ರದಲ್ಲಿ ತೇಜ್‌ ಚಂಡಮಾರುತ : ಪಥ ಬದಲಿಸಿದರೆ ಭಾರತಕ್ಕೆ ಅಪಾಯ : ಐಎಂಡಿ

By Kannadaprabha News  |  First Published Oct 21, 2023, 7:00 AM IST

ಆಗ್ನೇಯ ಮತ್ತು ನೈಋತ್ಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶವು ವಾಯುಭಾರ ಕುಸಿತವಾಗಿ ರೂಪಾಂತರಗೊಂಡಿದೆ. ಇದು ಅ.21ರ (ಶನಿವಾರ) ಅಂದರೆ ಇಂದು  ಚಂಡಮಾರುತದ ರೂಪ ತಾಳಿ ತೀವ್ರಗೊಳ್ಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.


ನವದೆಹಲಿ:  ಆಗ್ನೇಯ ಮತ್ತು ನೈಋತ್ಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶವು ವಾಯುಭಾರ ಕುಸಿತವಾಗಿ ರೂಪಾಂತರಗೊಂಡಿದೆ. ಇದು ಅ.21ರ (ಶನಿವಾರ) ಅಂದರೆ ಇಂದು  ಚಂಡಮಾರುತದ ರೂಪ ತಾಳಿ ತೀವ್ರಗೊಳ್ಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.

ಈ ವರ್ಷ ಅರಬ್ಬಿ ಸಮುದ್ರದಲ್ಲಿ (Arabian Sea) ಇದು 2ನೇ ಚಂಡಮಾರುತವಾಗಿದೆ. ಹಿಂದೂ ಮಹಾಸಾಗರ (Indian Ocean region) ಪ್ರದೇಶದಲ್ಲಿ ಚಂಡಮಾರುತಗಳನ್ನು ಹೆಸರಿಸಲು ಅನುಸರಿಸಿದ ಸೂತ್ರದ ಪ್ರಕಾರ ಇದನ್ನು ''ತೇಜ್'' (ವೇಗ) ಎಂದು ಕರೆಯಲಾಗಿದೆ. ಸದ್ಯ ಒಮಾನ್ ಮತ್ತು ಪಕ್ಕದ ಯೆಮೆನ್‌ನ (Yemen) ದಕ್ಷಿಣ ಕರಾವಳಿಯ ಕಡೆಗೆ ಇದು ಚಲಿಸುತ್ತದೆ. ಆದರೆ ಭಾರತದ ಗುಜರಾತ್‌ ಕರಾವಳಿಯಲ್ಲಿ ಸಾಕಷ್ಟು ವಿನಾಶ ಉಂಟು ಮಾಡಿದ ಬಿಪೊರ್‌ಜೊಯ್‌ ಚಂಡಮಾರುತದ ರೀತಿ ಈ ಚಂಡಮಾರುತ ಕೂಡ ಪಥ ಬದಲಿಸಿ ಸಾಗಬಹುದು. ಆಗ ಇದು ಭಾರತದ ಕರಾವಳಿಗೂ ಅಪಾಯವಾಗಬಲ್ಲದು ಎಂದು ಹವಾಮಾನ ಇಲಾಖೆ ಹೇಳಿದೆ.

Tap to resize

Latest Videos

ಆದರೆ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್, ಹೆಚ್ಚಿನ ಮಾದರಿಗಳು ಚಂಡಮಾರುತವು ಯೆಮೆನ್-ಒಮಾನ್ ಕರಾವಳಿಯತ್ತ ಸಾಗುತ್ತಿದೆ ಎಂದು ಸೂಚಿಸುತ್ತದೆ ಎಂದಿದೆ.

 

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

click me!