'ನಾವು ಹೇಳಿದ್ರೆ ಹುಸಿ ವಿಜ್ಞಾನ, ನೀವು ಹೇಳಿದ್ರೆ ಸಂಶೋಧನೆ! ಪತಂಜಲಿ ಪಂಚ್

By Suvarna NewsFirst Published Mar 22, 2021, 4:02 PM IST
Highlights

ಪತಂಜಲಿ ವರ್ಸಸ್ ಭಾರತೀಯ ವೈದ್ಯಕೀಯ ಸಂಘ (ಐಎಂಎ)/ ಯಾವ ಆಧಾರಲ್ಲಿ ಬಣ್ಣ ಆರೋಗ್ಯ ಸ್ನೇಹಿ ಎಂದು ಅನುಮೋದನೆ ಕೊಟ್ರಿ? / ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ  ಪ್ರಶ್ನೆ/ ಕೊರೊನೀಲ್ ಬಗ್ಗೆ  ಎದ್ದಿದ್ದ ವಿವಾದ

ನವದೆಹಲಿ(ಮಾ. 22) ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.   ಆಯುರ್ವೇದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎನ್ನುವವರು  ಆರೋಗ್ಯ ಸ್ನೇಹಿ ಗೋಡೆ ಬಣ್ಣ,  ಎಲ್‌ ಇಡಿಇ ಬಲ್ಬ್ ಗಳಿಗೆ ಯಾವ ಆಧಾರದಲ್ಲಿ ಅನುಮೋದನೆ ಕೊಟ್ಟಿದ್ದಾರೆ ಎಂದು ಪ್ರಶ್ನೆ  ಇಟ್ಟಿದ್ದಾರೆ

ಆಯುರ್ವೇದವನ್ನೇ ಸದಾ ಗುರಿಯಾಗಿರಿಸಿಕೊಂಡು ಮಾತನಾಡುವ ಐಎಂಎ   ಆಯುರ್ವೇದ ಹುಸಿ ವಿಜ್ಞಾನ ಎನ್ನುತ್ತಾರೆ. ಈಗ ಶೇ.  99 ಪ್ರತಿಶತದಷ್ಟು ಬ್ಯಾಕ್ಟೀರಿಯಾಗಳನ್ನು  ಈ ಪೇಂಟ್ ಕೊಲ್ಲುತ್ತದೆ, ವೈರಲ್ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು  ಹೇಳುತ್ತಾರೆ. ಈ ಬಣ್ಣವು ಉಸಿರಾಟದ ಸೋಂಕು ಮತ್ತು ಚರ್ಮ ಸಂಬಂಧಿ ರೋಗ ನಿವಾರಣೆ ಮಾಡುತ್ತದೆ ಎನ್ನುತ್ತಾರೆ. ಇದು ಹುಸು ವಿಜ್ಞಾನ ಅಲ್ಲವೇ? ಎಂದು ಪ್ರಶ್ನೆ ಎತ್ತಿದ್ದಾರೆ.

ಪತಂಜಲಿ ಕೊರೋನಿಲ್ ಮಾತ್ರೆಗೆ ಮಾನ್ಯತೆ ಇಲ್ಲ

ಐಎಂಎ ಅಧಿಕಾರಿಗಳಿಗೆ ಆಯುರ್ವೇದ  ಔಷಧಗಳ ಬಗ್ಗೆ ಜ್ಞಾನವೇ ಇಲ್ಲ. ತಿಳಿವಳಿಕೆ ಕೊರತೆ ಇದೆ.  ಪಂತಜಲಿ ಅವರಿಗೆ ಬೇಕಾದರೆ ಸಂತಸದಿಂದಲೇ ತರಬೇತಿ ನೀಡುತ್ತದೆ ಎಂದು ಆಹ್ವಾನ ನೀಡಿದ್ದಾರೆ.

ಐಎಂಎ ಅಡಿಯಲ್ಲಿ  3.5 ಲಕ್ಷ ವೈದ್ಯರು ಕೆಲಸ ಮಾಡುತ್ತ ಆಧುನಿಕ ವೈದ್ಯ ಪದ್ಧತಿ ಅನುಸರಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಪತಂಜಲಿ ಕೊರೊನಿಲ್ ಬಗ್ಗೆ  ವಿವರಣೆ ಕೋರಿದ್ದರು, ಈ ಉತ್ಪನ್ನವನ್ನು ಆರಂಭದಲ್ಲಿ ಕೋವಿಡ್ -19 ಗೆ ಪರಿಹಾರವಾಬಹುದು ಎಂದು ಪತಂಜಲಿ ಹೇಳಿತ್ತು.  ಇದಾದ ಮೇಲೆ ಸಣ್ಣವಿವಾದವೂ ಹೊತ್ತಿಕೊಂಡಿತ್ತು.

ಪತಂಜಲಿಯ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ  ಐಎಂಎಯ ಡಾ.ಜೆ.ಎ.  ಜಯಲಾಲ್, ಐಎಂಎ ಯಾವುದೇ ಉತ್ಪನ್ನವನ್ನು ಅನುಮೋದಿಸುತ್ತಿಲ್ಲ, ಬದಲಿಗೆ ನಾವು ಹೊಸ ತಂತ್ರಜ್ಞಾನಗಳನ್ನು ಅಥವಾ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಮಾತ್ರ ಉತ್ತೇಜಿಸುತ್ತೇವೆ ಎಂದಿದ್ದಾರೆ.

ಕಳೆದ ತಿಂಗಳಿನಿಂದ ಪತಂಜಲಿ ಮತ್ತು ಐಎಂಎ ನಡುವೆ ಕಿಡಿ ಹೊತ್ತಿಕೊಂಡಿದೆ. ಕೋರೋನಿಲ್ ಹಿಂದಿನ ವಿಜ್ಞಾನದ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಾಲಕೃಷ್ಣ ಹೇಳಿದ ನಂತರ ಕಿಡಿ ಹೊತ್ತಿಕೊಂಡಿತ್ತು.  ನಮಗೆ ವೈಜ್ಞಾನಿಕ ಆಧಾರ ಇಲ್ಲ ಎನ್ನುವವರು ಈಗ ಯಾವ ಆಧಾರದಲ್ಲಿ ಪೇಂಟ್ ಮತ್ತು ಬಲ್ಬ್ ಗೆ ಅನುಮೋದನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಕಡೆ  ನಾವು ಪತಂಜಲಿ ಅಥವಾ ಪತಂಜಲಿ ಉತ್ಪನ್ನಗಳಿಗೆ ವಿರುದ್ಧವಾಗಿಲ್ಲ.  ನಾವು ವಿಜ್ಞಾನ ಮತ್ತು ಸಂಶೋಧನೆಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಐಎಂಎ ಹೇಳಿದೆ. ಒಟ್ಟಿನಲ್ಲಿ ಈ ಸಮರ ಆಯುರ್ವೇದ ವರ್ಸಸ್ ವಿಜ್ಞಾನ ಎಂಬಂತೆ ಆಗಿದೆ. 

 

click me!