ಅಂಗನವಾಡಿ ಕಾರ್ಯಕರ್ತೆ ಬಳಿ 4 ಕೋಟಿ ಅಕ್ರಮ ಆಸ್ತಿ

By Kannadaprabha NewsFirst Published Sep 17, 2021, 10:21 AM IST
Highlights
  • ಭುವನೇಶ್ವರದ ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬಳಿ  ಬರೋಬ್ಬರಿ 4 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆ
  • ಭುವನೇಶ್ವರದ ಕೊರಾಡಾಕಾಂತಾ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಬಿತಾ ಮಥಾನ್‌

ಭುವನೇಶ್ವರ (ಸೆ.17):  ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರದಿಂದ ಬರುವ ಸಂಬಳದಲ್ಲಿ ಕುಟುಂಬ ಸಾಗಿಸುವುದೇ ಕಷ್ಟ.

 ಅಂಥದ್ದರಲ್ಲಿ ಭುವನೇಶ್ವರದ ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬಳಿ ವಿಚಕ್ಷಣಾ ನಿರ್ದೇಶನಾಲಯದ ದಾಳಿಯ ವೇಳೆ ಬರೋಬ್ಬರಿ 4 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆ ಆಗಿವೆ. 

ಭುವನೇಶ್ವರದ ಕೊರಾಡಾಕಾಂತಾ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಬಿತಾ ಮಥಾನ್‌ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ವಿಚಕ್ಷಣಾ ದಳದ ಅಧಿಕಾರಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.

ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ!

 ಈ ವೇಳೆ 4 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳು ಪತ್ತೆ ಆಗಿವೆ. ಅಲ್ಲದೇ ಆಕೆಯ ಹೆಸರಿನಲ್ಲಿ 7 ಕಟ್ಟಡಗಳು, 14 ನಿವೇಶನಗಳು, 6.36 ಲಕ್ಷ ರು. ಮೌಲ್ಯದ ಚಿನ್ನಾಭರಣಗಳು ಪತ್ತೆ ಆಗಿದ್ದು, ಶೋಧ ಕಾರ್ಯ ಕೈಗೊಂಡ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

click me!