ವಾರ್ಷಿಕ 2.5 ಕೋಟಿ ಪ್ಯಾಕೇಜ್‌ನ ಉದ್ಯೋಗ ಪಡೆದ ಐಐಟಿ ಹೈದರಾಬಾದ್ ವಿದ್ಯಾರ್ಥಿ

Published : Jan 02, 2026, 04:28 PM IST
IIT Hyderabad student bags Rs 2.5 crore package

ಸಾರಾಂಶ

ಹೈದರಾಬಾದ್‌ ಐಐಟಿಯ ಕೊನೆಯ ವರ್ಷದ ವಿದ್ಯಾರ್ಥಿಯೊಬ್ಬರು ಡಚ್‌ ಟ್ರೇಡಿಂಗ್ ಕಂಪನಿಯೊಂದರಲ್ಲಿ 2.5 ಕೋಟಿ ಮೌಲ್ಯದ ವೇತನದ ಕೆಲಸ ಗಿಟ್ಟಿಸಿದ್ದಾರೆ.

ಹೈದರಾಬಾದ್‌ ಐಐಟಿಯ ಕೊನೆಯ ವರ್ಷದ ವಿದ್ಯಾರ್ಥಿಯೊಬ್ಬರು ಡಚ್‌ ಟ್ರೇಡಿಂಗ್ ಕಂಪನಿಯೊಂದರಲ್ಲಿ 2.5 ಕೋಟಿ ಮೌಲ್ಯದ ವೇತನದ ಕೆಲಸ ಗಿಟ್ಟಿಸಿದ್ದಾರೆ. ಡಚ್‌ ಟ್ರೇಡಿಂಗ್ ಕಂಪನಿ ಒಪ್ಟಿವೆರ್‌ನಲ್ಲಿ ಭಾರತೀಯ ಐಐಟಿ ವಿದ್ಯಾರ್ಥಿ ಎಡ್ವರ್ಡ್‌ ನಾಥನ್ ವರ್ಗೀಸ್, ಅವರು ಈ ಭಾರಿ ಮೊತ್ತದ ವೇತನದ ಕೆಲಸ ಪಡೆದಿದ್ದಾರೆ. ಇದು ಹೈದರಾಬಾದ್ ಐಐಟಿಯ ಸ್ಥಾಪನೆಯಾದ ನಂತರ ವಿದ್ಯಾರ್ಥಿಯೊಬ್ಬರು ಪಡೆದಂತಹ ಅತ್ಯಂತ ದುಬಾರಿ ಮೊತ್ತದ ವೇತನವಾಗಿದೆ.

ಎಡ್ವರ್ಡ್ ನಾಥನ್ ವರ್ಗೀಸ್ ಐಐಟಿ ಹೈದರಾಬಾದ್‌ಗೆ ಕಂಪ್ಯೂಟರ್ ಸೈನ್ಸ್ ಪದವಿಪೂರ್ವ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಾಗ ಇತರ ಸಾವಿರಾರು ವಿದ್ಯಾರ್ಥಿಗಳು ಮಾಡುವಂತೆಯೇ , ಕೋಡಿಂಗ್, ತರಗತಿಗಳು ಮತ್ತು ಸ್ಪರ್ಧೆಗಳತ್ತ ಗಮನ ಹರಿಸಿದರು. ಆದರೆ ನಾಲ್ಕು ವರ್ಷಗಳ ನಂತರ ಅವರು 2.5 ಕೋಟಿ ರೂ.ಗಳ ಉದ್ಯೋಗವನ್ನು ಪಡೆಯುತ್ತಾರೆ ಎಂದು ಸ್ವತಃ ಅವರಿಗೂ ತಿಳಿದಿರಲಿಲ್ಲ. ಇದು 2008 ರಲ್ಲಿ ಹೈದರಾಬಾದ್‌ ಐಐಟಿ ಸ್ಥಾಪನೆಯಾದಾಗಿನಿಂದ ಇಲ್ಲಿನ ವಿದ್ಯಾರ್ಥಿಯೊಬ್ಬರು ಪಡೆದ ಅತ್ಯಂತ ದೊಡ್ಡ ಮೊತ್ತದ ವೇತನದ ಪ್ಯಾಕೇಜ್ ಆಗಿದೆ.

21 ವರ್ಷದ ಎಡ್ವರ್ಡ್ ನಾಥನ್ ವರ್ಗೀಸ್ ಅವರು ನೆದರ್ಲ್ಯಾಂಡ್ಸ್ ಮೂಲದ ಜಾಗತಿಕ ವ್ಯಾಪಾರ ಸಂಸ್ಥೆಯಾದ ಆಪ್ಟಿವರ್‌ನಿಂದ ಈ ಆಫರ್ ಪಡೆದಿದ್ದಾರೆ. ಎರಡು ತಿಂಗಳ ಬೇಸಿಗೆ ಇಂಟರ್ನ್‌ಶಿಪ್ ಅನ್ನು ಪೂರ್ವ ನೇಮಕಾತಿ ಕೊಡುಗೆಯಾಗಿ ಪರಿವರ್ತಿಸಿದ ನಂತರ, ಎಡ್ವರ್ಡ್ ಜುಲೈನಲ್ಲಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಲಿದ್ದಾರೆ.

ಹಾಗಂತ ಈ ಉದ್ಯೋಗದ ಅವಕಾಶ ಸಿಗುವ ಮೊದಲು ಎಡ್ವರ್ಡ್ ಅವರು ಬೇರೆ ಯಾವುದೇ ಸಂದರ್ಶನಗಳನ್ನು ಎದುರಿಸಿಲ್ಲ. ಅವರು ಎದುರಿಸಿದ ಮೊದಲ ಸಂದರ್ಶನ ಹಾಗೂ ಮೊದಲ ಕಂಪನಿ ಆಪ್ಟಿವರ್ ಆಗಿದೆ. ಕಂಪನಿಯ ಬೇಸಿಗೆಯ ಇಂಟರ್ನ್‌ಶಿಪ್‌ಗೆ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಎಡ್ವರ್ಡ್ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಬಾಯ್‌ಫ್ರೆಂಡ್‌ನ ಮನೆಗೆ ಕರೆಸಿ ಪ್ರೈವೇಟ್ ಪಾರ್ಟ್‌ಗೆ ಕತ್ತರಿ ಹಾಕಿದ ಪ್ರೇಯಸಿ

ಅವರು ತಮ್ಮ ಈ ಯಶಸ್ಸಿಗೆ ಐಐಟಿ ಟ್ಯಾಗ್, ಹೊಂದಿಕೊಳ್ಳುವ ಶೈಕ್ಷಣಿಕ ಪಠ್ಯಕ್ರಮ ಮತ್ತು ಎಂಜಿನಿಯರಿಂಗ್‌ನ ಮೊದಲ ವರ್ಷದಿಂದಲೇ ಕೋಡಿಂಗ್ ಮತ್ತು ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್‌ಗೆ ಬಲವಾದ ಒತ್ತು ನೀಡಿದು ಕಾರಣ ಎಂದಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಎಡ್ವರ್ಡ್ ನಂತರ ಬೆಂಗಳೂರಿಗೆ ಶಿಫ್ಟ್ ಆಗಿದ್ದು, ಅಲ್ಲಿ ಅವರು 7 ನೇ ತರಗತಿಯಿಂದ 12 ನೇ ತರಗತಿಯವರೆಗೆ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರ ಸಾಧನೆ ನಿರಂತರವಾಗಿ ಉತ್ತಮವಾಗಿದೆ ಎಂದು ತಿಳಿದು ಬಂದಿದೆ. ಅವರು 2022 ರಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಏರ್‌ 1100 ಮತ್ತು JEE ಅಡ್ವಾನ್ಸ್ಡ್‌ನಲ್ಲಿ AIR 558 ಗಳಿಸಿ ಐಐಟಿ ಹೈದರಾಬಾದ್‌ಗೆ ಪ್ರವೇಶ ಪಡೆದರು. ಇದರ ಜೊತೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (CAT)ಗೆ ಸಹ ಹಾಜರಾಗಿ, 2025 ರಲ್ಲಿ 99.96 ಶೇಕಡಾವಾರು ಅಂಕಗಳನ್ನು ಗಳಿಸಿ 120 ನೇ ರಾಂಕ್ ಪಡೆದಿದ್ದಾರೆ.

ಇದನ್ನೂ ಓದಿ: ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಿದ್ದ ಭಾರತೀಯ ಯುವಕ ಕಟ್ಟಡದಿಂದ ಬಿದ್ದು ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಿಯಾಂಕ ಗಾಂಧಿ ಮಗನ ನಿಶ್ಚಿತಾರ್ಥದಿಂದ ಕ್ಯಾನ್ಸಲ್ ಆಗಿದ್ದ ಟ್ರಿಪ್, ಮತ್ತೆ ವಿದೇಶಕ್ಕೆ ಹಾರಿದ ರಾಹುಲ್‌ ಗಾಂಧಿ!
ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಿದ್ದ ಭಾರತೀಯ ಯುವಕ ಕಟ್ಟಡದಿಂದ ಬಿದ್ದು ಸಾವು