
ಉತ್ತರ ಪ್ರದೇಶದಲ್ಲಿ ನಡೆದ ಮಹಾಕುಂಭ ಮೇಳದ ಮೂಲಕ ಜನಪ್ರಿಯತೆಗೆ ಬಂದಿದ್ದ ಐಐಟಿ ಬಾಬಾ ಕುರಿತು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಐಐಟಿ ಬಾಬಾ ಅಭಯ್ ಸಿಂಗ್ ಗ್ರೇವಾಲ್ ಹಿಸಾರ್ನ ಅವರು ಮಲಗುವ ಕೋಣೆಯಲ್ಲಿ ಮೃತದೇಹ ಪತ್ತೆ ಆಗಿದೆ ಎಂಬ ಸುದ್ದಿ ಹರಡಿತ್ತು. ಇನ್ನು, ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್ಗಳು, ಐಐಟಿ ಬಾಬಾ ಮೃತಪಟ್ಟಿದ್ದಾರೆ ಎಂದು ಹೇಳಿವೆ.
ಬೆನ್ನಲ್ಲೇ ಐಐಟಿ ಬಾಬಾ ಕುರಿತು ಆತಂಕ ಸೃಷ್ಟಿಯಾಗಿತ್ತು. ಆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಿಸಾರ್ನ PLA ಪ್ರದೇಶದ ಮನೆಯಲ್ಲಿ ಪತ್ತೆಯಾಗಿರುವ ಮೃತದೇಹ ಐಐಟಿ ಬಾಬಾ ಅವರದ್ದಲ್ಲ. ರಾಹುಲ್ ಜೈನ್ ಎಂಬ ವ್ಯಕ್ತಿಯದ್ದು. 35 ವರ್ಷದ ಜೈನ್, ಹಿಸಾರ್ ನಿವಾಸಿಯಾಗಿದ್ದು, ಐಐಟಿ ರೂರ್ಕಿಯಲ್ಲಿ ಅಧ್ಯಯನ ಮಾಡಿದ್ದ. ಅವರು ಆನ್ಲೈನ್ ತರಬೇತಿ ತೊಡಗಿಸಿಕೊಂಡಿದ್ದರು. ಅವರ ಐಐಟಿ ಸಂಪರ್ಕವೇ ಅವರ ಸಾವಿಗೆ ಕಾರಣ ಎಂದು ವರದಿಯಾಗಿದೆ. ಈತನ ಮೃತದೇಹವನ್ನು ಐಐಟಿ ಬಾಬಾಗೆ ಹೋಲಿಸಿ ತಪ್ಪಾಗಿ ಸುದ್ದಿ ಹರಡುತ್ತಿದ್ದಾರೆ.
Hisar, Haryana: On reports of IIT Baba (Abhay Singh)'s body being found, Hisar Police social media in-charge Amarinder Singh says, “Around three days ago, the body of a man named Rahul Jain, a resident of Hisar, was found at his house in the PLA area. Following this, misleading reports are being circulated on social media claiming that the body of IIT Baba was found in a bedroom. This news is completely false. We urge the public not to spread or make such misleading news viral...”
— IANS (@ians_india) October 14, 2026
ಐಐಟಿ ಬಾಬಾ ಕುರಿತ ವದಂತಿಯನ್ನ ಹಿಸಾರ್ ಪೊಲೀಸರು ಅಲ್ಲಗಳೆದಿದಿದ್ದಾರೆ. ಮೃತ ರಾಹುಲ್ ಜೈನ್ ಮತ್ತು ಅಭಯ್ ಸಿಂಗ್ ಗ್ರೆವಾಲ್ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಸುಮಾರು ಮೂರು ದಿನಗಳ ಹಿಂದೆ, ಹಿಸಾರ್ ನಿವಾಸಿ ರಾಹುಲ್ ಜೈನ್ ಎಂಬ ವ್ಯಕ್ತಿಯ ಶವ ಪಿಎಲ್ಎ ಪ್ರದೇಶದ ಮನೆಯಲ್ಲಿ ಪತ್ತೆಯಾಗಿತ್ತು. ನಂತರ.. ಐಐಟಿ ಬಾಬಾ ಅವರ ಶವ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ವರದಿಗಳು ಹರಡುತ್ತಿವೆ. ಈ ಸುದ್ದಿ ಸಂಪೂರ್ಣ ಸುಳ್ಳು. ಇಂತಹ ದಾರಿತಪ್ಪಿಸುವ ಸುದ್ದಿಗಳನ್ನು ಹರಡಬೇಡಿ. ವೈರಲ್ ಮಾಡಬೇಡಿ. ಒಂದು ವೇಳೆ ನೀವು ಸುಳ್ಳು ಸುದ್ದಿಯನ್ನು ಹಬ್ಬಿಸಿದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಝಜ್ಜರ್ ಮೂಲದ ಅಭಯ್ ಸಿಂಗ್ ಗ್ರೆವಾಲ್.. ಕೆನಡಾ ಮತ್ತು ಇತರೆಡೆ ಕೆಲಸ ಮಾಡಿದ್ದಾರೆ. ಇವರು ಓದಿರೋದು ಐಐಟಿ ಬಾಂಬೆಯಲ್ಲಿ. ನಂತರ ಅವರು ಆಧ್ಯಾತ್ಮಿಕತೆಯ ಕಡೆಗೆ ವಾಲಿದರು. ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಹೆಚ್ಚು ಜನಪ್ರಿಯತೆ ಪಡೆದರು.
ಇನ್ನು, ಐಐಟಿ ಬಾಬಾ ಸೋಶಿಯಲ್ ಮೀಡಿಯಾಗಳನ್ನ ಬಳಸಿಕೊಂಡು ತಮ್ಮ ಆಧ್ಯಾತ್ಮಿಕ ವಿಚಾರಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ವರದಿಗಳ ಪ್ರಕಾರ.. ಅಭಯ್ ಸಿಂಗ್ ಮಥುರಾ ಮತ್ತು ವೃಂದಾವನದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಅವರು ಹಿಮಾಚಲ ಪ್ರದೇಶದ ಅಂಜಂಘರ್ ಮಹಾದೇವ್ ದೇವಸ್ಥಾನದಲ್ಲಿ ಕರ್ನಾಟಕದ ಮಹಿಳೆಯನ್ನು ವಿವಾಹವಾದರು. ಇದೀಗ ಅವರ ಲುಕ್ನಲ್ಲಿ ಬದಲಾಗಿದೆ. ಉದ್ದನೆಯ ಕೂದಲನ್ನು ಕಟ್ ಮಾಡಿಸಿಕೊಂಡು ತುಂಬಾ ಸ್ಲಿಮ್ ಆಗಿ ಕಾಣ್ತಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ