ಸಿಎಂಆರ್‌ಎಲ್ ಲಂಚ ಕೇಸ್: ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಹೈಕೋರ್ಟ್ ಶಾಕ್

Published : Oct 16, 2026, 03:13 PM IST
Pinarayi Vijayan

ಸಾರಾಂಶ

ಸಿಎಂಆರ್‌ಎಲ್ ಲಂಚ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಪಿಣರಾಯಿ ವಿಜಯನ್ ಕುಟುಂಬ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ವೀಣಾ ಒಡೆತನದ ಕಂಪನಿಗೆ ಐಟಿ ಸೇವೆಗಳ ಹೆಸರಿನಲ್ಲಿ 3.28 ಕೋಟಿ ರೂ. ಅಕ್ರಮ ಪಾವತಿಯಾಗಿದೆ ಎಂದು ಇ.ಡಿ. ಆರೋಪಿಸಿದೆ.

ಕೊಚ್ಚಿ: ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್‌) ಲಂಚ ಪ್ರಕರಣದಲ್ಲಿ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪುತ್ರಿ ವೀಣಾ, ಅಳಿಯ ಮೊಹಮ್ಮದ್‌ ರಿಯಾಸ್‌ ಅವರಿಗೆ ಹಿನ್ನಡೆ ಆಗಿದೆ. ಎಫ್ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್‌ ಏಕದಸಸ್ಯ ಪೀಠ ಹೊರಡಿಸಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿ ಇವರು ಕೋರಿದ್ದ ಅರ್ಜಿಗಳನ್ನು ವಿಭಾಗೀಯ ಪೀಠ ವಜಾ ಮಾಡಿದೆ. ‘ಎಫ್‌ಐಆರ್‌ ದಾಖಲಿಸುವುದರಿಂದ ಅರ್ಜಿದಾರರ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಕೊಚ್ಚಿ ಮೂಲದ ಖನಿಜ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಆ್ಯಂಡ್‌ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಸಂಸ್ಥೆಯು, ವೀಣಾ ಮಾಲೀಕತ್ವದ ಎಕ್ಸೋಜಿಕ್ ಸಲ್ಯೂಷನ್ಸ್ ಕಂಪನಿಗೆ ಐಟಿ ಸಲಹಾ ಸೇವೆಗಳ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ರು. ಹಣ ಪಾವತಿಸಿದೆ ಎಂದು ಇ.ಡಿ. ಆರೋಪಿಸಿತ್ತು. ಈ ಸಂಬಂಧ ಕೇರಳಂ ಹಾಗೂ ಬೆಂಗಳೂರಿನ 6 ಕಡೆ ಕಳೆದ ಮೇ ನಲ್ಲಿ ದಾಳಿ ನಡೆಸಿದ್ದರು. ದುಬೈಗೆ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ವಹಿವಾಟಿನಲ್ಲಿ ಕುಟುಂಬದ ಸದಸ್ಯರ ಪಾತ್ರವಿರುವುದಾಗಿ ತನಿಖಾ ಸಂಸ್ಥೆ ತಿಳಿಸಿತ್ತು. ಈ ಬಗ್ಗೆ ಇ.ಡಿ. ಪ್ರತ್ಯೇಕ ಪ್ರಕರಣ ದಾಖಲಿಸಬೇಕು ಎಂದರೆ ಅದಕ್ಕೂ ಮುನ್ನ ಪೊಲೀಸರು ಪ್ರಕರಣ ದಾಖಲಿಸುವುದು ಅಗತ್ಯ. ಹೀಗಾಗಿ ಎಫ್‌ಐಆರ್‌ ದಾಖಲಿಸಲು ಕೇರಳ ಪೊಲೀಸರಿಗೆ ಇ.ಡಿ. ಕೋರಿತ್ತು. ಆದರೆ, ರಾಜ್ಯ ಸರ್ಕಾರವು ಇಡಿ ಶಿಫಾರಸಿನ ಮೇರೆಗೆ ನೇರವಾಗಿ ಕ್ರಮ ಕೈಗೊಳ್ಳುವ ಬದಲು, ಪ್ರಾಥಮಿಕ ತನಿಖೆ ನಡೆಸಲು SIT ರಚಿಸಿ ಆದೇಶ ಹೊರಡಿಸಿತ್ತು.

ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ತಿರುವನಂತಪುರದ ರಾಜಕೀಯ ಕಾರ್ಯಕರ್ತ ಕೆ.ಎಂ. ಶಾಜಹಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ಎಸ್‌ಐಟಿ ರಚಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ತಕ್ಷಣವೇ ವಿಜಿಲೆನ್ಸ್ ತನಿಖೆಗೆ ಎಫ್‌ಐಆರ್ ದಾಖಲಿಸುವಂತೆ ವಿಜಿಲೆನ್ಸ್ ನಿರ್ದೇಶಕರಿಗೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿಯೇ ವಿಜಯನ್ ಕುಟುಂಬವು ವಿಭಾಗೀಯ ಪೀಠದ ಮೊರೆ ಹೋಗಿತ್ತು.

3.28 ಕೋಟಿ ರೂ. ಅಕ್ರಮ ಪಾವತಿ ಆರೋಪ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರ ಒಡೆತನದಲ್ಲಿದ್ದ 'ಎಕ್ಸಲಾಜಿಕ್ ಸೊಲ್ಯೂಷನ್ಸ್' ಸಂಸ್ಥೆಗೆ ಐಟಿ ಸಲಹಾ ಸೇವೆಗಳನ್ನು ನೀಡಿದ ಸೋಗಿನಲ್ಲಿ ಖಾಸಗಿ ಖನಿಜ ಕಂಪನಿಯಾದ ಸಿಎಂಆರ್‌ಎಲ್ ಬರೋಬ್ಬರಿ 3.28 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಾವತಿಸಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಯಾವುದೇ ನೈಜ ಸೇವೆ ಒದಗಿಸದೆ ಬರೀ ರಾಜಕೀಯ ಪ್ರಭಾವ ಬಳಸಿ ಈ ಹಣ ಸ್ವೀಕರಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿಗೆ ವಿರೋಧವಿದೆ, ಹಾಗಂತ ಒಬ್ಬ ಬಿಳಿಯ ನಮ್ಮ ಮೇಲೆ ಅಧಿಕಾರ ಚಲಾಯಿಸೋಕೆ ಬಿಡಲ್ಲ: ಎಲೋನ್‌ ಮಸ್ಕ್‌ಗೆ ಓವೈಸಿ ವಾರ್ನಿಂಗ್‌
‘ನೀವು ನಮ್ಮ ಕುಟುಂಬದವರು, ನಿಮ್ಮಿಂದ ಹಣ ಪಡೆಯಲ್ಲ’… ಮೃತ ಸ್ನೇಹಿತನ ಮಗನಿಗೆ ಅಂಗಡಿ ಮಾಲೀಕ ತೋರಿದ ಪ್ರೀತಿ