
ನವದೆಹಲಿ (ಜ. 09): ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂ) ಬೆಂಗಳೂರಿನ ವಿದ್ಯಾರ್ಥಿಗಳು (Students) ಹಾಗೂ ಸಿಬ್ಬಂದಿ ಸೇರಿದಂತೆ ದೇಶದಲ್ಲಿನ ವಿವಿಧ ಐಐಎಂನವರು, ದೇಶದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸಾಚಾರ, ದ್ವೇಷದ ಭಾಷಣದ ವಿರುದ್ಧ ಮಾತನಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ (Narendra Modi) ಬಹಿರಂಗ ಪತ್ರ (Letter) ಬರೆದಿದ್ದಾರೆ.
‘ಪ್ರಧಾನಿಗಳೇ ನಿಮ್ಮ ಮೌನವು ದ್ವೇಷ ಬಿತ್ತುವ ಧ್ವನಿಗಳಿಗೆ ಧೈರ್ಯ ತುಂಬುತ್ತದೆ. ನಮ್ಮನ್ನು ವಿಭಜಿಸಿ ದೇಶದ ಏಕತೆ ಸಮಗ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಹರಿದ್ವಾರ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕೆಲವು ಹಿಂದೂ ನಾಯಕರು ಮುಸ್ಲಿಂರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದರಲ್ಲದೇ ಸಾರ್ವಜನಿಕವಾಗಿ ನರಮೇಧಕ್ಕೆ ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ‘ಸಂವಿಧಾನ ನಮಗೆಲ್ಲ ಧಾರ್ಮಿಕ ಸ್ವಾತಂತ್ರ್ಯ ನೀಡಿದರೂ ಈ ಕುರಿತು ದೇಶದಲ್ಲೀಗ ಭಯದ ಭಾವನೆಯಿದೆ. ಪೂಜಾ ಸ್ಥಳ, ಚಚ್‌ರ್‍ಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಯಾವುದೇ ಭಯವಿಲ್ಲದೇ ಮುಕ್ತವಾಗಿ ಮುಸ್ಲಿಂ ಸಹೋದರ, ಸಹೋದರಿಯರ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಿ, ಮೋದಿಗೆ ಪ್ರಿಯಾಂಕಾ ಗಾಂಧಿ ಪತ್ರ!
ಮೋದಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರ: ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಧಾನಿ ಮೋದಿಯವರ ಘೋಷಣೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರವನ್ನೂ ಬರೆದಿರುವ ಅವರು, ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಘೋಷಣೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ರೈತ ಬಂಧುಗಳು ಧರಣಿ ಮುಗಿಸಿ ಗೌರವಯುತವಾಗಿ ಮನೆಗೆ ಮರಳುವಂತೆ ಎಂಎಸ್‌ಪಿ (MSP) ಮತ್ತಿತರ ವಿಷಯಗಳ ಕುರಿತು ಕಾನೂನು ರೂಪಿಸುವ ಬೇಡಿಕೆಯನ್ನು ಕೂಡ ತಕ್ಷಣವೇ ತೀರ್ಮಾನಿಸಬೇಕೆಂಬುದು ನನ್ನ ವಿನಮ್ರ ವಿನಂತಿ.
ಈ ಪತ್ರದಲ್ಲಿ ಲಖಿಂಪುರ ಖೇರಿ ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಬರೆದಿದ್ದಾರೆ. ಈ ಸಂಬಂಧ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ರಾಷ್ಟ್ರದ ಹಿತದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ನೀಡಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಈ ಚಳವಳಿಯಲ್ಲಿ 700 ರೈತರು ಹುತಾತ್ಮರಾಗಿದ್ದು, ಅವರ ಕುಟುಂಬಕ್ಕೂ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮತ್ತೆ ಬೆಳಗಾವಿ ಗಡಿ ಕ್ಯಾತೆ ತೆಗೆದ ಶಿವಸೇನೆ, ಎಂಇಎಸ್: ಪ್ರಧಾನಿಗೆ ಪತ್ರ ಚಳವಳಿ
ಏನಿದು C2+50% ಫಾರ್ಮುಲಾ?: ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ರೈತರ ರಾಷ್ಟ್ರೀಯ ಆಯೋಗವು ತನ್ನ ವರದಿಯಲ್ಲಿ C2+50% ಸೂತ್ರದ ಅಡಿಯಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡಬೇಕು ಎಂದು ಶಿಫಾರಸು ಮಾಡಿದೆ. ಇದರರ್ಥ ಬೆಳೆಯ ಒಟ್ಟು ವೆಚ್ಚ (C2) ಮತ್ತು ಅದರ ಮೇಲೆ 50 ಪ್ರತಿಶತ ಲಾಭ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ