Covid 19: ಮಹಾರಾಷ್ಟ್ರದಲ್ಲಿ ಫೆಬ್ರವರಿ 15ರವರೆಗೂ ಶಾಲೆ ಬಂದ್‌

Kannadaprabha News   | Asianet News
Published : Jan 09, 2022, 10:23 AM ISTUpdated : Jan 09, 2022, 11:07 AM IST
Covid 19: ಮಹಾರಾಷ್ಟ್ರದಲ್ಲಿ ಫೆಬ್ರವರಿ 15ರವರೆಗೂ ಶಾಲೆ ಬಂದ್‌

ಸಾರಾಂಶ

ಕೋವಿಡ್‌ ಸೋಂಕು ಸ್ಫೋಟಗೊಳ್ಳುತ್ತಿರುವ ಕಾರಣ ಫೆ.15ರ ವರೆಗೆ ಶಾಲೆ, ಕಾಲೇಜು ಮತ್ತು ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚಲು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಈಜುಕೊಳ, ಜಿಮ್‌, ಸ್ಪಾ, ಬ್ಯೂಟಿ ಸಲೂನ್‌, ಮೃಗಾಲಯ, ವಸ್ತುಸಂಗ್ರಹಾಲಯಗಳನ್ನೂ ಮುಚ್ಚಲು ಸೂಚಿಸಿದೆ. 

ಮುಂಬೈ (ಜ. 09): ಕೋವಿಡ್‌ ಸೋಂಕು (Covid) ಸ್ಫೋಟಗೊಳ್ಳುತ್ತಿರುವ ಕಾರಣ ಫೆ.15ರ ವರೆಗೆ ಶಾಲೆ, ಕಾಲೇಜು ಮತ್ತು ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚಲು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಈಜುಕೊಳ, ಜಿಮ್‌, ಸ್ಪಾ, ಬ್ಯೂಟಿ ಸಲೂನ್‌, ಮೃಗಾಲಯ, ವಸ್ತುಸಂಗ್ರಹಾಲಯಗಳನ್ನೂ ಮುಚ್ಚಲು ಸೂಚಿಸಿದೆ. 

ಇದೇ ವೇಳೆ ಕಟಿಂಗ್‌ ಶಾಪ್‌, ಮಾಲ್‌, ಹೋಟೆಲ್‌, ರೆಸ್ಟೋರೆಂಟ್‌, ಸಿನಿಮಾ ಥಿಯೇಟರ್‌, ಆಡಿಟೋರಿಯಂಗಳು ಶೇ.50ರಷ್ಟುಆಸನ ಸಾಮರ್ಥ್ಯದಲ್ಲಿ ಮಾತ್ರ ಕಾರಾರ‍ಯಚರಣೆ ನಡೆಸುವಂತೆ ತಿಳಿಸಿದೆ. ರಾತ್ರಿ 11ರಿಂದ ಮುಂಜಾನೆ 5ರ ವರೆಗೂ ರಾತ್ರಿ ಕರ್ಫ್ಯೂ (Night Curfew) ಜಾರಿ ಮಾಡಿದೆ. ಗುಂಪಾಗಿ 5ಕ್ಕಿಂತ ಹೆಚ್ಚಿನ ಜನರು ಓಡಾಡುವಂತಿಲ್ಲ ಎಂದು ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಮಹಾರಾಷ್ಟ್ರದ 10 ಮಹಾ ಸಚಿವರು, 20 ಶಾಸಕರಿಗೆ ಸೋಂಕು: ರಾಜ್ಯದಲ್ಲಿ ಈವರೆಗೆ 10ಕ್ಕೂ ಹೆಚ್ಚು ಸಚಿವರು ಹಾಗೂ ಕನಿಷ್ಠ 20 ಶಾಸಕರು ಕೊರೋನಾ ಸೋಂಕಿಗೆ (Covid Positive) ತುತ್ತಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ (Ajit Pawar) ತಿಳಿಸಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರತಿಯೊಬ್ಬರೂ ಹೊಸ ವರ್ಷ, ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಸಂಭ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳಲು ಬಯಸುತ್ತಾರೆ. 

Maharastra Corona Alert: 'ಮಹಾ'3ನೇ ಅಲೆ: 80 ಲಕ್ಷ ಕೇಸು, 80,000 ಸಾವು ಸಾಧ್ಯತೆ

ಆದರೆ ಒಮಿಕ್ರೋನ್‌ (Omicron) ಪ್ರಭೇದ ಹೆಚ್ಚು ವೇಗವಾಗಿ ಹಬ್ಬುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಯಾರೂ ಮರೆಯಬಾರದು. ಕೊರೋನಾ (Corona) ಕಾರಣಕ್ಕೆ ಇತ್ತೀಚೆಗೆ ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಈಗಾಗಲೇ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಸೋಂಕಿಗೆ ತುತ್ತಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟುಹೆಚ್ಚಳವಾದರೆ, ರಾಜ್ಯಾದ್ಯಂತ ಕಠಿಣ ನಿರ್ಬಂಧಗಳನ್ನು ಹೇರುವ ಅನಿವಾರ್ಯತೆ ಎದುರಾಗಲಿದೆ’ ಎಂದು ಹೇಳಿದ್ದಾರೆ.

ಕೊರೋನಾ ಹಳೇ ತಳಿಗಿಂತ ವಿಭಿನ್ನ ಒಮಿಕ್ರಾನ್‌ನ ಈ ಎರಡು ಲಕ್ಷಣಗಳು: ಕೊರೋನಾ ವೈರಸ್‌ನ ಅಪಾಯಕಾರಿ ರೂಪಾಂತರವಾದ ಓಮಿಕ್ರಾನ್ ವಿಶ್ವದಲ್ಲಿ ಮತ್ತು ಭಾರತದಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ದೇಶದಲ್ಲಿ ಇದುವರೆಗೆ 976 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ, ಈ ಕಾರಣದಿಂದಾಗಿ, ದೇಶದಲ್ಲಿ ಕೊರೋನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ, ಇದರಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳಿವೆ.

Corona Spike in Maharastra: ಮಹಾರಾಷ್ಟ್ರ, ದಿಲ್ಲಿಯಲ್ಲಿ ಕೋವಿಡ್‌ ಭಾರೀ ಸ್ಫೋಟ

ಆರೋಗ್ಯ ತಜ್ಞರು ಸಹ ಒಮಿಕ್ರಾನ್ ರೋಗಲಕ್ಷಣಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತಿದ್ದಾರೆ ಮತ್ತು ಯಾರಿಗಾದರೂ ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ತಜ್ಞರನ್ನು ಸಂಪರ್ಕಿಸಿ ಮತ್ತು ನಿಮ್ಮನ್ನು ಪ್ರತ್ಯೇಕಿಸಿ ಎಂದು ಎಚ್ಚರಿಸುತ್ತಿದ್ದಾರೆ. ಕೊರೋನಾ ಸೋಂಕಿನ ಕೊನೆಯ ಎರಡು ಅಲೆಗಳಲ್ಲಿ, ಜ್ವರ, ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳು ಕಂಡುಬಂದಿವೆ. ಆದರೆ ಲಂಡನ್‌ನ ಸಂಶೋಧಕರೊಬ್ಬರು ಓಮಿಕ್ರಾನ್‌ನಿಂದ ಕೆಟ್ಟದಾಗಿ ಪ್ರಭಾವಿತಗೊಳಿಸುವ, ಎರಡು ಹೊಸ ರೋಗಲಕ್ಷಣಗಳನ್ನು ಗುರುತಿಸಿದ್ದಾರೆ. ಈ ರೋಗಲಕ್ಷಣಗಳು ಈ ಹಿಂದೆ ದಾಳಿ ಇಟ್ಟಿದ್ದ ಕೊರೋನಾ ಹಳೇ ತಳಿಗಳಲ್ಲಿ ಕಂಡು ಬಂದಿಲ್ಲ ಎಂಬುವುದು ಮತ್ತೊಂದು ವಿಶೇಷ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ