1960ರಲ್ಲಿ ಕಟ್ಟಿದ IIM ಪಾರಂಪರಿಕ ಕಟ್ಟಡದ 14 ವಿದ್ಯಾರ್ಥಿ ನಿಲಯ ನೆಲಸಮಕ್ಕೆ ನಿರ್ಧಾರ!

Published : Dec 25, 2020, 07:09 PM ISTUpdated : Dec 25, 2020, 07:14 PM IST
1960ರಲ್ಲಿ ಕಟ್ಟಿದ IIM ಪಾರಂಪರಿಕ ಕಟ್ಟಡದ 14 ವಿದ್ಯಾರ್ಥಿ ನಿಲಯ ನೆಲಸಮಕ್ಕೆ ನಿರ್ಧಾರ!

ಸಾರಾಂಶ

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ಅಗತ್ಯ. ಆದರೆ  ಅಹಮ್ಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಅಹಮ್ಮದಾಬಾದ್(ಡಿ.25): ಬರೋಬ್ಬರಿ 60 ವರ್ಷಗಳ ಹಿಂದೆ ಕಟ್ಟಿದ ವಿದ್ಯಾರ್ಥಿ ನಿಲಯ. ವಿಶ್ವದ ಗೌರವಾನ್ವಿತ ವಾಸ್ತುಶಿಲ್ಪಿ ಅಮೆರಿಕದ ಲೂಯಿಸ್ ಕಾನ್ ವಾಸ್ತುಶಿಲ್ಪದ ಅಹಮ್ಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ನಿಲಯ ಇದೀಗ  ನೆಲಸಮ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ.

19 ವಿದ್ಯಾರ್ಥಿ ನಿಲಯಗಳಲ್ಲಿ 14 ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.  ಪಾರಂಪರಿಕ ಕಟ್ಟ ಕಳೆದ 6 ದಶಕಗಳಿಂದ ವಿದ್ಯಾರ್ಥಿಗಳಿಗೆ ಭವನಾಗಿದೆ. ಆದರೆ ಕೆಲ ವರ್ಷಗಳಿಂತ ತೀವ್ರ ಹಾನಿಗೊಳಗಾಗಿದೆ. ಹೀಗಾಗಿ 14 ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. 

ಬೆಸ್ಟ್ ಬಿ-ಸ್ಕೂಲ್ ಪಟ್ಟ ಉಳಿಸಿಕೊಂಡ ಐಐಎಂ-ಬೆಂಗಳೂರು
 
ಪಾರಂಪರಿಕ ಕಟ್ಟಡ 14 ವಿದ್ಯಾರ್ಥಿ ನಿಲಯ ಬಹುತೇಕ ಹಾನಿಯಾಗಿದೆ. ಇದರಲ್ಲಿ ನೆಲೆಸಲು ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಹೀಗಾಗಿ ನೆಲಸಮ ಮಾಡಲು ನಿರ್ಧರಿಸಿದೆ. ಆದರೆ ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡವು ನಿರ್ಧಾರ ತೆಗೆದುಕೊಳ್ಳುವು ತುಂಬಾ ಕಠಿಣವಾಗಿತ್ತು. ಕಾರಣ ಇದನ್ನು ಸಂರಕ್ಷಿಸಿಡುವುದು ಅಗತ್ಯವಾಗಿದೆ. ಆದರೆ ಸ್ಛಳದ ಕೊರತೆಯಿಂದ ನೆಲಸಮ ಅನಿವಾರ್ಯವಾಗಿದೆ ಎಂದು IIM ನಿರ್ದೇಶಕ ಎರೋಲ್ ಡಿಸೋಜಾ ಪತ್ರದಲ್ಲಿ ಹೇಳಿದ್ದಾರೆ.

ನಮ್ಮ ಜಾಗ, ಪಾಕಿಸ್ತಾನದ ಅತಿಕ್ರಮಣ, ಚೀನಾದ ಅಣೆಕಟ್ಟು, ಬೌದ್ಧ ಶಿಲ್ಪಗಳು ಅನಾಥ!..

ವಿದ್ಯಾರ್ಥಿ ನಿಲಯ ಕಟ್ಟಡ ಶಿಥಿಲಗೊಂಡಿದೆ. ಛಾವಣಿಗಳು ಕುಸಿಯುವ ಹಂತದಲ್ಲಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಪತ್ರದಲ್ಲಿ ಡಿಸೋಜಾ ಹೇಳಿದ್ದಾರೆ. ಇದೀಗ ಹೊಸ ಕಟ್ಟಡ ವಿನ್ಯಾಸಕ್ಕೆ ಸೂಕ್ತರಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟುವ ನಿಟ್ಟಿನಲ್ಲಿ ಹಾಗೂ ಆಧುನಿಕ ಸೌಲಭ್ಯದ ಕೊಠಡಿ ನಿರ್ಮಾಣವಾಗಲಿದೆ ಎಂದು ಡಿಸೋಜಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!