ಮಾಲ್ಸ್ ಓಪನ್ ಮಾಡ್ಬೋದು, ಕೋರ್ಟ್ ಯಾಕಿಲ್ಲ..? ಕೋರ್ಟ್ ತೆರೆಯಲು ವಕೀಲರ ಒತ್ತಾಯ

By Suvarna NewsFirst Published Sep 8, 2020, 1:06 PM IST
Highlights

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕೇಸುಗಳನ್ನು ಡಿಸ್ಪೋಸ್ ಮಾಡುವ ಪ್ರಮಾಣ ಹೈಕೋರ್ಟ್‌ನಲ್ಲಿ ಶೇ 50 ಮತ್ತು, ಜಿಲ್ಲಾ, ತಾಲೂಕು ನ್ಯಾಯಾಲಯದಲ್ಲಿ ಶೇ 70ರಷ್ಟು ಇಳಿಕೆಯಾಗಿದೆ. ಕೊರೋನಾ ಸದ್ಯ ಕೊನೆಯಾಗುವ ಸಾಧ್ಯತೆ ಇಲ್ಲದೆ ಇರುವುದರಿಂದ ಕೋರ್ಟ್ ಕಲಾಪ ಪುನಾರಂಭಿಸಲು ಒತ್ತಾಯ ಹೆಚ್ಚಾಗಿದೆ.

ಜೀವನದ ಪ್ರತಿ ಭಾಗವನ್ನೂ ಕೊರೋನಾ ಬಾಧಿಸಿದೆ. ನಮ್ಮ ಕಾನೂನು ವ್ಯವಸ್ಥೆಯೂ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕೇಸ್ ಡಿಸ್ಪೋಸ್ ಮಾಡುವ ಪ್ರಮಾಣ ಹೈಕೋರ್ಟ್‌ನಲ್ಲಿ ಶೇ 50 ಮತ್ತು, ಜಿಲ್ಲಾ, ತಾಲೂಕು ನ್ಯಾಯಾಲಯದಲ್ಲಿ ಶೇ 70ರಷ್ಟು ಇಳಿಕೆಯಾಗಿದೆ.

ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‌ಡೌನ್ ಮಾಡಲಾಯಿತು. ಆ ನಂತರ ಸುಪ್ರೀಂ ಕೋರ್ಟ್ ವರ್ಚುಯಲ್ ಕಲಾಪದತ್ತ ತಿರುಗಿತು. ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳೂ ಇದನ್ನೇ ಫಾಲೋ ಮಾಡಿದವು. ವರ್ಚುಯಲ್ ಕಲಾಪದಿಂದ ಕೇಸ್ ಕೊನೆಯಾಗುವ ಪ್ರಮಾಣ ಇಳಿಕೆಯಾಗಿದೆ.

ಕೊರೋನಾ ಕೊನೆಯಲ್ಲ, ಜಗತ್ತಿಗೆ ವಕ್ಕರಿಸಲಿದೆ ಇನ್ನಷ್ಟು ಮಹಾಮಾರಿ: WHO ಎಚ್ಚರಿಕೆ

ಕೊರೋನಾಗೆ ಸದ್ಯ ಕೊನೆ ಇಲ್ಲ ಎಂಬುದನ್ನು ಅರಿತು ಹಲವರು ಕೋರ್ಟ್ ಕಲಾಪ ಆರಂಭಕ್ಕೆ ಒತ್ತಾಯಿಸಿದ್ದಾರೆ. ಆದರೆ ಕೋರ್ಟ್ ಸಿಬ್ಬಂದಿಗಳಿಗೆ ಈ ವಿಚಾರದಲ್ಲಿ ಭಿನ್ನಮತವಿದೆ. ದೆಹಲಿ ಹೈಕೋರ್ಟ್ ಈಗಾಗಲೇ ಕೋರ್ಟ್ ಕಲಾಪ ಆರಂಭವಾಗಿದೆ. ಆದರೆ ಈ ಕೋರ್ಟ್‌ಗಳಲ್ಲಿಯೂ ಕಲಾಪ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಅಭಿಪ್ರಾಯ ವ್ಯತ್ಯಾಸಗಳಿವೆ.

ಇದು ಕೇವಲ ವಕೀಲರ ಆರ್ಥಿಕ ಸ್ಥಿತಿ ಕುರಿತಾದ ವಿಚಾರವಲ್ಲ. ಪ್ರತಿದಿನ  ವಿಚಾರಣೆ ನಡೆಯುತ್ತಿಲ್ಲ. ವಿಚಾರಣೆ ತಡವಾಗಿ ವ್ಯಕ್ತಿಯೊಬ್ಬ ಜೈಲಿನಲ್ಲೇ ಉಳಿಯಬಹುದು ಎಂದು ಚೆನ್ನೈನ ವಕೀಲ ಜಿಮ್ ರಾಜ್ ಮಿಲ್ಟನ್ ಹೇಳಿದ್ದಾರೆ.

click me!