ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ

By Kannadaprabha NewsFirst Published Nov 7, 2022, 7:02 AM IST
Highlights

ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಹಿಮಾಚಲ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಲು ಟೊಂಕ ಕಟ್ಟಿನಿಂತಿರುವ ಬಿಜೆಪಿ, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಸಿಕ್ಕರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಶಿಮ್ಲಾ: ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಹಿಮಾಚಲ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಲು ಟೊಂಕ ಕಟ್ಟಿನಿಂತಿರುವ ಬಿಜೆಪಿ, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಸಿಕ್ಕರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಹಿಮಾಚಲ ಪ್ರದೇಶ (Himachal Pradesh)  ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರ ತವರು ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಸ್ವತಃ ಅವರೇ ಭಾನುವಾರ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದರು. ಇತ್ತೀಚೆಗೆ ಗುಜರಾತ್‌ ಸರ್ಕಾರ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿತ್ತು. ಇದೀಗ ಹಿಮಾಚಲ ಪ್ರದೇಶದಲ್ಲಿ ಮತ್ತೆ ಗೆಲುವು ಸಾಧಿಸಿದರೆ ಅಂತಹುದೇ ಸಮಿತಿ ರಚನೆ ಮಾಡುವ ಆಶ್ವಾಸನೆಯನ್ನು ಮತದಾರರಿಗೆ ನೀಡಲಾಗಿದೆ.

ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಮತ್ತೆ ‘ಕೈ’ ಹೊಗಳಿದ Ghulam Nabi Azad..!

ಇದೇ ವೇಳೆ, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.33 ಮೀಸಲಾತಿ (reservation for women), ಹೊಸ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, 8 ಲಕ್ಷ ಹೊಸ ಉದ್ಯೋಗ ಸೃಷ್ಟಿ, 6ರಿಂದ 12ನೇ ತರಗತಿಯ ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್‌ (free cycle for girls), ಉನ್ನತ ಶಿಕ್ಷಣ ಪಡೆವ ಹೆಣ್ಣುಮಕ್ಕಳಿಗೆ ಸ್ಕೂಟರ್‌, 5 ಹೊಸ ವೈದ್ಯಕೀಯ ಕಾಲೇಜು (medical colleges) ಸ್ಥಾಪನೆ, ಅಕ್ರಮ ಬಳಕೆ ತಪ್ಪಿಸಲು ವಕ್ಫ್ ಆಸ್ತಿಗಳ ಸರ್ವೇಗೆ ಆದೇಶಿಸುವುದಾಗಿ ತಿಳಿಸಿದೆ. ಇದೇ ವೇಳೆ, ಪಕ್ಷ ನೀಡುತ್ತಿರುವ ಭರವಸೆಗಳನ್ನು ಉಚಿತ ಕೊಡುಗೆ ಎಂದು ಭಾವಿಸಬಾರದು. ಸಬಲೀಕರಣ ಹಾಗೂ ಆಮಿಷದ ನಡುವೆ ವ್ಯತ್ಯಾಸವಿದೆ ಎಂದು ನಡ್ಡಾ ಅವರು ಸ್ಪಷ್ಟಪಡಿಸಿದರು.

ಸಂಹಿತೆ ಜಾರಿ​- ಶಾ:

ಇದೇ ವೇಳೆ, ಹಿಮಾಚಲಪ್ರದೇಶದ ಸಮಾವೇಶವೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ (Union Home Minister) ಅಮಿತ್‌ ಶಾ (Amit Shah) , ಮುಖ್ಯಮಂತ್ರಿ ಜೈರಾಂ ಠಾಕೂರ್‌ (Jairam Thakur) ಸರ್ಕಾರವನ್ನು ಮತ್ತೆ ಗೆಲ್ಲಿಸಿದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದೇ ತರುತ್ತೇವೆ. ಇದನ್ನು ಯಾರೂ ತಡೆಯಲಾಗದು ಎಂದು ಅಬ್ಬರಿಸಿದರು. ಹಿಮಾಚಲದಲ್ಲಿ ನ.12ರಂದು ಚುನಾವಣೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.

ಸ್ವತಂತ್ರ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಂ ನೇಗಿ ಇನ್ನಿಲ್ಲ

ಏನಿದು ಸಂಹಿತೆ?:

ವಿವಾಹ, ಆಸ್ತಿ ಹಂಚಿಕೆ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದು (Hindu), ಮುಸ್ಲಿಂ (Muslim), ಕ್ರೈಸ್ತ (Christian) ಸಮುದಾಯ ಪ್ರತ್ಯೇಕ ವೈಯಕ್ತಿಕ ಕಾನೂನುಗಳನ್ನು ಪಾಲನೆ ಮಾಡುತ್ತಿವೆ. ಇದರ ಬದಲಿಗೆ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.
 

click me!