Women Marriage Age: '18ನೇ ವಯಸ್ಸಿಗೆ ಪ್ರಧಾನಿ ಆಯ್ಕೆ ಮಾಡಬಹುದು, ಆದರೆ ಮದುವೆಯಾಗಬಾರದು'

By Suvarna News  |  First Published Dec 18, 2021, 10:03 AM IST

* ಭಾರತದಲ್ಲಿ ಹೆಣ್ಣು ಮಕ್ಕಳ ಮದುವೆಯಾಗುವ ಮಿತಿ ಏರಿಕೆ

* ಸರ್ಕಾರದ ನಿರ್ಧಾರದ ವಿರುದ್ಧ ಓವೈಸಿ ಕಿಡಿ

* 18ನೇ ವಯಸ್ಸಿಗೆ ಪ್ರಧಾನಿ ಆಯ್ಕೆ ಮಾಡಬಹುದು, ಆದರೆ ಮದುವೆಯಾಗಬಾರದು


ನವದೆಹಲಿ(ಡಿ.18): ಮಹಿಳೆಯರ ಕನಿಷ್ಠ ವಿವಾಹ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಮತ್ತು ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಶುಕ್ರವಾರ ಟೀಕಿಸಿದ್ದಾರೆ, ಅಲ್ಲದೇ ಇದೊಂದು ಹಾಸ್ಯಾಸ್ಪದವೆಂದು ಕರೆದಿದ್ದಾರೆ. ಇತರ ಎಲ್ಲಾ ಉದ್ದೇಶಗಳಿಗಾಗಿ ಕಾನೂನಿನಿಂದ  18 ವರ್ಷವಾದವರನ್ನು ವಯಸ್ಕರೆಂದು ಗುರುತಿಸಲ್ಪಡಲಾಗುತ್ತದೆ. ಆದರೆ ಪುರುಷ ಮತ್ತು ಮಹಿಳೆ ಇಬ್ಬರೂ 18 ನೇ ವಯಸ್ಸಿನಲ್ಲಿ ಮದುವೆಯಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ಬದಲಾಗಬೇಕು ಎಂದು ಓವೈಸಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.

"ಮೋದಿ ಸರ್ಕಾರವು ಮಹಿಳೆಯರ ಮದುವೆಯ ವಯಸ್ಸನ್ನು 21 ಕ್ಕೆ ಏರಿಸಲು ನಿರ್ಧರಿಸಿದೆ. ಇದು ಪಿತೃಪ್ರಭುತ್ವವಾಗಿದೆ, ನಾವು ಸರ್ಕಾರದಿಂದ ಇಷ್ಟೇ ನಿರೀಕ್ಷಿಸಲು ಸಾಧ್ಯ. 18 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಒಪ್ಪಂದಗಳಿಗೆ ಸಹಿ ಮಾಡಬಹುದು, ವ್ಯವಹಾರವನ್ನು ಪ್ರಾರಂಭಿಸಬಹುದು, ಪ್ರಧಾನಿಯನ್ನು ಆಯ್ಕೆ ಮಾಡಬಹುದು ಮತ್ತು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಬಹುದು, ಆದರೆ ಮದುವೆಯಾಗಲು ಸಾಧ್ಯವಿಲ್ಲವೇ? ಅವರು ಲೈಂಗಿಕ ಸಂಬಂಧಗಳು ಮತ್ತು ಲಿವ್-ಇನ್ ಸಂಬಂಧಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಬಹುದು, ಆದರೆ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲವೇ? ಇದು ಹಾಸ್ಯಾಸ್ಪದ' ಎಂದಿದ್ದಾರೆ.

Tap to resize

Latest Videos

ದೇಶದಲ್ಲಿ 1.2 ಕೋಟಿ ಮಕ್ಕಳಿಗೆ 10 ವರ್ಷಕ್ಕಿಂತ ಮುಂಚೆಯೇ ಮದುವೆ ಮಾಡಲಾಗುತ್ತದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಕಾನೂನಿನ ಹೊರತಾಗಿಯೂ ಬಾಲ್ಯವಿವಾಹಗಳು ನಡೆಯುತ್ತಿವೆ, ಭಾರತದಲ್ಲಿ ಪ್ರತಿ ನಾಲ್ಕನೇ ಮಹಿಳೆಯು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದರು, ಆದರೆ ಬಾಲ್ಯ ವಿವಾಹದ 785 ಅಪರಾಧ ಪ್ರಕರಣಗಳು ಮಾತ್ರ ದಾಖಲಾಗಿವೆ, ಮದುವೆಗಳು ಕಡಿಮೆಯಾಗಿವೆ, ಆದ್ದರಿಂದ ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯೇ ಕಾರಣ. ಕ್ರಿಮಿನಲ್ ಕಾನೂನಿನಿಂದಲ್ಲ ಎಂದು ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

"ಮೋದಿಯವರು ಪ್ರಾಮಾಣಿಕರಾಗಿದ್ದರೆ, ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದರು. ಆದರೂ 2005 ರಲ್ಲಿ 26 ಪ್ರತಿಶತದಿಂದ 2020 ರವರೆಗೆ ಉದ್ಯೋಗಿಗಳಲ್ಲಿ ಮಹಿಳೆಯರ ಪಾಲು ಕಡಿಮೆಯಾಗುತ್ತಿರುವ ಏಕೈಕ ದೇಶ ಭಾರತವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಗೆ ಸರ್ಕಾರ ಏನು ಮಾಡಿದೆ? 446.72 ಬೇಟಿ ಬಚಾವೋ ಬೇಟಿ ಪಢಾವೋ 79 ರಷ್ಟು ಬಜೆಟ್‌ನಲ್ಲಿ ಜಾಹೀರಾತುಗಳಿಗೆ ಖರ್ಚು ಮಾಡಲಾಗಿದೆ, ಈ ಸರ್ಕಾರದ ಉದ್ದೇಶಗಳು ಪ್ರಾಮಾಣಿಕವಾಗಿವೆ ಎಂದು ನೀವು ನಂಬುತ್ತೀರಾ?' ಎಂದೂ ಪ್ರಶ್ನಿಸಿದ್ದಾರೆ.

ಪ್ರಮುಖ ವಿಷಯಗಳಿಗಾಗಿ, ಪುರುಷರು ಮತ್ತು ಮಹಿಳೆಯರನ್ನು 18 ನೇ ವಯಸ್ಸಿನಲ್ಲಿ ವಯಸ್ಕರಂತೆ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು. "ಮದುವೆ ಏಕೆ ವಿಭಿನ್ನವಾಗಿದೆ? ಕಾನೂನು ವಯಸ್ಸು ನಿಜವಾಗಿಯೂ ಮಾನದಂಡವಲ್ಲ, ಶಿಕ್ಷಣ, ಆರ್ಥಿಕ ಪ್ರಗತಿ ಮತ್ತು ಮಾನವ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಗುರಿಯಾಗಿರಬೇಕು" ಎಂದು ಅವರು ಹೇಳಿದರು. ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂಬುವುದು ಉಲ್ಲೇಖನೀಯ. 

click me!