ಕೇಂದ್ರ ಸಚಿವ ನಿತಿನ್‌ ಗಡ್ಕರಿಗೇ ಕ್ರೆಡಿಟ್‌ ಕಾರ್ಡ್‌ ನೀಡಲು ನಿರಾಕರಿಸಿದ್ದ ICICI Bank

Suvarna News   | Asianet News
Published : Dec 20, 2021, 11:17 AM IST
ಕೇಂದ್ರ ಸಚಿವ ನಿತಿನ್‌ ಗಡ್ಕರಿಗೇ ಕ್ರೆಡಿಟ್‌ ಕಾರ್ಡ್‌ ನೀಡಲು ನಿರಾಕರಿಸಿದ್ದ ICICI Bank

ಸಾರಾಂಶ

ಸಚಿವ ನಿತಿನ್‌ ಗಡ್ಕರಿ ಅವರಿಗೆ ಕ್ರೆಡಿಟ್‌ ಕಾರ್ಡ್‌ ನೀಡಲು ನಿರಾಕರಿಸಿದ ಐಸಿಐಸಿಐ ಬ್ಯಾಂಕ್‌ ಘಟನೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮುಂಬೈನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಗಡ್ಕರಿ ಮಾತು

ಮುಂಬೈ: ತನಗೆ ಈ ಹಿಂದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಲು ನಿರಾಕರಿಸಿತ್ತು ಎಂಬ ವಿಚಾರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೀಗ ಬಹಿರಂಗಪಡಿಸಿದ್ದಾರೆ.  ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನೀಡಲು ನಿರಾಕರಿಸಿದ ವಿಚಾರವನ್ನು ಆಗಿನ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಕಾಮತ್ ಅವರಿಗೆ ತಿಳಿಸಿದಾಗ, ಬ್ಯಾಂಕ್‌ನ ಉನ್ನತ ಅಧಿಕಾರಿಗಳು ಹೇಳಿರುವಂತೆ  ಬ್ಯಾಂಕ್‌ನ ನಿಯಮಗಳ ಪ್ರಕಾರ 'ವಕೀಲರು ಮತ್ತು ರಾಜಕಾರಣಿಗಳಿಗೆ' ಕ್ರೆಡಿಟ್ ಕಾರ್ಡ್ ನೀಡುವುದಿಲ್ಲ ಎಂದು ಹೇಳಿದರು ಎಂದು ಗಡ್ಕರಿ ಹೇಳಿದ್ದಾರೆ. 

ಈ ಹಿಂದೆಯೂ ಇಂತಹ ಸಾಕಷ್ಟು ಅನುಭವವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಕಾಮತ್ (Kamath) ಸಾಹೇಬರು ಒಮ್ಮೆ ನನ್ನೊಂದಿಗೆ ವಿಮಾನದಲ್ಲಿ ಬಂದಿದ್ದರು. ಅವರು ಐಸಿಐಸಿಐ(ICICI) ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ( Managing Director) ಆಗಿದ್ದರು. ಅವರು ನನ್ನ ಬಳಿಗೆ ಬಂದು ನನ್ನ ಕೆಲಸವನ್ನು ಹೊಗಳಿದರು. ಆಗ ನಾನು ಅವರಿಗೆ ಹೇಳಿದೆ.  ಕಾಮತ್ ಸಾಹೇಬ್ ಅವರೇ ನೀವು ನನ್ನನ್ನು ಹೊಗಳುತ್ತಿದ್ದೀರಿ. ಆದರೆ ನಿಮ್ಮ ಬ್ಯಾಂಕ್ ನನಗೆ ಕ್ರೆಡಿಟ್ ಕಾರ್ಡ್ ನೀಡಲು ನಿರಾಕರಿಸಿತು ಎಂದು ಹೇಳಿದೆ. ಆಗ ಅವರು,  ವಕೀಲರು ಮತ್ತು ರಾಜಕಾರಣಿಗಳಿಗೆ (lawyers and politicians) ಕ್ರೆಡಿಟ್ ಕಾರ್ಡ್ (credit card) ನೀಡುವುದಿಲ್ಲ ಎಂಬ ನೀತಿ ನಮ್ಮಲ್ಲಿದೆ ಎಂದು ಹೇಳಿದರು. ನಂತರ, ಅವರು ನನಗೆ ಒಂದು ಕ್ರೆಡಿಟ್‌ ಕಾರ್ಡ್‌ನ ವ್ಯವಸ್ಥೆ ಮಾಡಿದರು ಎಂದು ಗಡ್ಕರಿ ಹೇಳಿದರು. 

Highway Projects 3,600 ಕೋಟಿ ರೂ ರಸ್ತೆ, 1,600 ಕೋಟಿಗೆ ಪೂರ್ಣ, ತಮ್ಮದೆ ಸರ್ಕಾರ ಎದುರು ಹಾಕಿದ್ದ ನಿತಿನ್ ಗಡ್ಕರಿ!

ಮುಂಬೈನಲ್ಲಿ ಆಯೋಜಿಸಿದ್ದ 'ಹೂಡಿಕೆ ಅವಕಾಶಗಳು  ಹೆದ್ದಾರಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ಗಡ್ಕರಿ, ಈ ವಿಚಾರವನ್ನು ಬಹಿರಂಗಪಡಿಸಿದರು. ಮೊದಲ ಬಿಒಟಿ (ನಿರ್ಮಿಸು ನಿರ್ವಹಿಸು ವರ್ಗಾಯಿಸು) (Build operate transfer)ರಸ್ತೆಯನ್ನು ನಿರ್ಮಿಸಲು ಟಿವಿ ಅಂಗಡಿಗಳಿಂದ ತಾವು ಸ್ಫೂರ್ತಿ ಪಡೆದಿರುವುದಾಗಿಯೂ ಅವರು ಹೇಳಿದರು. ಈ ಹಿಂದೆ ಗಡ್ಕರಿ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾಗಿಯೂ ಈ ಕಾರ್ಯಕ್ರಮದಲ್ಲಿ ಹೇಳಿದರು.

Nitin Gadkari : ರಿಲಯನ್ಸ್ ಟೆಂಡರ್ ತಿರಸ್ಕರಿಸಿ 2 ಸಾವಿರ ಕೋಟಿ ಉಳಿಸಿದ್ದೆ!

ಹಾಗೆಯೇ ಒಮ್ಮೆ ಟಿವಿ ಕೊಳ್ಳಲು ಹೋದಾಗ ನಡೆದ ಘಟನೆಯನ್ನು ಅವರು ಇದೇ ವೇಳೆ ವಿವರಿಸಿದರು. ನಾನು ಟಿವಿಯನ್ನು ಕಂತು (instalment) ಗಳಲ್ಲಿ ಖರೀದಿಸಲು ಟಿವಿ ಅಂಗಡಿಗೆ ಹೋಗಿದ್ದೆ. ಆದರೆ ಆ ವ್ಯಕ್ತಿಗೆ ನಾನು ಮಂತ್ರಿ ಎಂದು ಗೊತ್ತಾದಾಗ ಸರ್ ಸ್ವಲ್ಪ ಸಮಯ ಕಾಯಿರಿ ನಿಮಗೆ ಹೊಸ ಪೀಸ್‌ ತಂದು ಕೊಡುತ್ತೇನೆ ಎಂದು ಹೇಳಿದರು. ಆದರೆ ಆ  ಹೊಸ ಟಿವಿ ಬರಲೇ  ಇಲ್ಲ.  ಬಹುಶಃ ಅವರು ರಾಜಕಾರಣಿಯೊಬ್ಬರು ಟಿವಿಯನ್ನು ಕಂತುಗಳಲ್ಲಿ ಖರೀದಿಸುತ್ತಾರೆ ಎಂದರೆ ಹಣ ವಾಪಸ್‌ ಎಂದಿಗೂ ಬರುವುದಿಲ್ಲ ಎಂದು ಭಾವಿಸಿರಬಹುದು ಎಂದರು. ಟಿವಿಯನ್ನು ಕಂತುಗಳಲ್ಲಿ ಖರೀದಿಸಬಹುದಾದರೆ, ಹೆದ್ದಾರಿಗಳು ಮತ್ತು ಸುರಂಗಗಳನ್ನು ಏಕೆ ಕಂತುಗಳಲ್ಲಿ ನಿರ್ಮಿಸಬಾರದು ಎಂಬ ಯೋಚನೆ ನನಗೆ ಬಂತು. ಇದುವೇ ಬಿಒಟಿ ರಸ್ತೆಗಳನ್ನು ನಿರ್ಮಿಸಲು ನನಗೆ ಸ್ಫೂರ್ತಿ ನೀಡಿತು ಎಂದು ಕೇಂದ್ರ ಸಚಿವರು ಹೇಳಿದರು.

1990ರಲ್ಲಿ ಮಹಾರಾಷ್ಟ್ರದಲ್ಲಿ ತಾವು ಲೋಕೋಪಯೋಗಿ ಸಚಿವರಾಗಿದ್ದಾಗ ರಿಲಯನ್ಸ್‌ ಟೆಂಡರ್‌ ಅನ್ನು ತಿರಸ್ಕರಿಸಿದ್ದೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕಾಗಿ ರಿಲಯನ್ಸ್‌ ಸಲ್ಲಿಸಿದ್ದ ಟೆಂಡರ್‌ ತಿರಸ್ಕರಿಸಿದ್ದೆ. ಇದು ಧೀರುಭಾಯ್‌ ಅಂಬಾನಿಗೆ ಮಾತ್ರವಲ್ಲದೇ, ಆಗಿನ ಮಹಾ ಸಿಎಂ ಮನೋಹರ್‌ ಜೋಶಿ, ಹಲವು ಸಚಿವರ ಸಿಟ್ಟಿಗೆ ಕಾರಣವಾಗಿತ್ತು. ಜೊತೆಗೆ ಬಾಳಾ ಸಾಹೇಬ್‌ ಠಾಕ್ರೆ ಅವರೇ ಟೆಂಡರ್‌ ಏಕೆ ತಿರಸ್ಕರಿಸಿದೆ ಎಂದು ನನ್ನ ಪ್ರಶ್ನಿಸಿದ್ದರು.

ನನ್ನ ಲೆಕ್ಕಾಚಾರದಲ್ಲಿ ಟೆಂಡರ್‌ಗೆ ನಿಗದಿ ಪಡಿಸಿದ ಮೊತ್ತ ಹೆಚ್ಚಾಗಿತ್ತು. ಹೀಗಾಗಿ ನಮ್ಮ ಇಲಾಖೆ ಮೂಲಕ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ಎಕ್ಸ್‌ಪ್ರೆಸ್‌ ಹೆದ್ದಾರಿ, ನಗರದಲ್ಲಿನ ವರ್ಲಿ-ಬಾಂದ್ರಾ ಸೀಲಿಂಕ್‌ ಮತ್ತು ಇತರೆ 52 ಮೇಲ್ಸೇತುವೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದೆ. ಇದಕ್ಕೆ ಅವರೆಲ್ಲಾ ನಕ್ಕಿದ್ದರು. ಜತೆಗೆ ರಿಲಯನ್ಸ್‌ ಎಕ್ಸ್‌ಪ್ರೆಸ್‌ ಹೆದ್ದಾರಿಗೆ 3600 ಕೋಟಿ ರೂ. ಬೇಡಿಕೆ ಇಟ್ಟಿತ್ತು. ಆದರೆ ಸರ್ಕಾರಿ ಸ್ವಾಮ್ಯದ ಎಂಎಸ್‌ಆರ್‌ಡಿಸಿ ಈ ಯೋಜನೆಯನ್ನು ರಿಲಯನ್ಸ್‌ ಕೋಟ್‌ ಮಾಡಿದ್ದ ಅರ್ಧ ಹಣಕ್ಕಿಂತ ಕಡಿಮೆ ಮೊತ್ತಕ್ಕೆ  1600 ಕೋಟಿಗೆ ಪೂರ್ಣಗೊಳಿಸಿತ್ತು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ