Covid Cases: 6 ತಿಂಗಳಲ್ಲೇ ಅತೀ ಹೆಚ್ಚು ಪ್ರಕರಣ, ಒಮಿಕ್ರಾನ್ ಮಧ್ಯೆ ಹೆಚ್ಚಿದ ಆತಂಕ!

Published : Dec 20, 2021, 08:28 AM IST
Covid Cases: 6 ತಿಂಗಳಲ್ಲೇ ಅತೀ ಹೆಚ್ಚು ಪ್ರಕರಣ, ಒಮಿಕ್ರಾನ್ ಮಧ್ಯೆ ಹೆಚ್ಚಿದ ಆತಂಕ!

ಸಾರಾಂಶ

* ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಯ್ತು ಆರು ತಿಂಗಳ ಗರಿಷ್ಠ ಪ್ರಕರಣ * ಒಮಿಕ್ರಾನ್ ಮಧ್ಯೆ ಹೆಚ್ಚಿದ ಆತಂಕ * ಹತ್ತು ದಿನಗಳಲ್ಲಿ ಮೊದಲ ಸಾವು  

ನವದೆಹಲಿ(ಡಿ,20): ದೆಹಲಿಯಲ್ಲಿ ಭಾನುವಾರ 100 ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿವೆ, ಇದು ಕಳೆದ ಆರು ತಿಂಗಳಲ್ಲಿ ದಾಖಲಾದ ಅತ್ಯಂತ ಗರಿಷ್ಠ ಪ್ರಕರಣಗಳಾಗಿವೆ. ದೆಹಲಿ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 107 ಪ್ರಕರಣಗಳು ಬಂದಿವೆ ಮತ್ತು ಕೊರೋನಾ ಸೋಂಕಿನ ಪ್ರಮಾಣವು 0.17 ಪ್ರತಿಶತಕ್ಕೆ ಏರಿದೆ. ಅಲ್ಲದೇ ಕಳೆದ 6 ತಿಂಗಳ ಅವಧಿಯಲ್ಲಿ, ಒಂದೇ ದಿನದಲ್ಲಿ ವರದಿಯಾದ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಮತ್ತು ಅತಿ ಹೆಚ್ಚು ಸೋಂಕಿನ ಪ್ರಮಾಣ ದಾಖಲಾಗಿದೆ. ಈ ಹಿಂದೆ ಜೂನ್ 25 ರಂದು ಒಂದು ದಿನದಲ್ಲಿ 115 ಕೊರೋನಾ ಪ್ರಕರಣಗಳು ಬಂದಿದ್ದವು ಮತ್ತು ಜೂನ್ 22 ರಂದು ಸೋಂಕಿನ ಪ್ರಮಾಣವು ಶೇಕಡಾ 0.19 ರಷ್ಟಿತ್ತು.

ದೆಹಲಿಯಲ್ಲಿ 10 ದಿನಗಳ ನಂತರ, ಕೊರೋನಾದಿಂದ ಯಾವುದೇ ಸಾವು ಸಂಭವಿಸಿಲ್ಲ (Delhi Covid Deaths). ಕಳೆದ 24 ಗಂಟೆಗಳಲ್ಲಿ ಒಬ್ಬ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 25,101 ಕ್ಕೆ ಏರಿದೆ. ರಾಜಧಾನಿಯಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 540 ಕ್ಕೆ ಏರಿದೆ. 255 ರೋಗಿಗಳು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಸಕ್ರಿಯ ಕೊರೋನಾ ರೋಗಿಗಳ ಪ್ರಮಾಣ ಶೇಕಡಾ 0.037 ಕ್ಕೆ ಏರಿದೆ. ಚೇತರಿಕೆಯ ಪ್ರಮಾಣವು ಶೇ 98.22 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 107 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 14,42,197ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ 50 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಒಟ್ಟು ಸಂಖ್ಯೆ 14,16,556 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 61,905 ಪರೀಕ್ಷೆಗಳು ನಡೆದಿವೆ. ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 3,00,03,931 ಕ್ಕೆ ಏರಿದೆ. ಇನ್ನು 57,435 RTPCR ಪರೀಕ್ಷೆ ನಡೆದಿದ್ದರೆ, 4470 ಆಂಟಿಜನ್ ಪರೀಕ್ಷೆಯನ್ನು ಮಾಡಲಾಗಿದೆ. ದೆಹಲಿಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 157. ಕೊರೋನಾ ಸಾವಿನ ಪ್ರಮಾಣ ಶೇ 1.74 ರಷ್ಟಿದೆ. 

ಇನ್ನು ದೇಶದ ಅನೇಕ ದೊಡ್ಡ ನಗರಗಳಲ್ಲಿ, ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬುವುದು ಗಮನಾರ್ಹ ವಿಚಾರ. ಹೀಗಾಗಿ ಹೊಸ ವರ್ಷದ ಆಚರಣೆಗೆ ಸಂಬಂಧಿಸಿದಂತೆ ಎಲ್ಲಾ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ದೆಹಲಿ ಸರ್ಕಾರ ಕೂಡ ಅಗತ್ಯಬಿದ್ದರೆ ಮಾಡಲು ಸಿದ್ಧ ಎಂದು ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ