ಡಾ ಪ್ರದೀಪ್ ಗವಾಂಡೆ ಜೊತೆ ಹಸೆಮಣೆಯೇರಿದ ಐಎಎಸ್‌ ಟೀನಾ ದಾಬಿ

By Anusha KbFirst Published Apr 20, 2022, 7:47 PM IST
Highlights
  • ಎರಡನೇ ಬಾರಿ ಹಸೆಮಣೆಯೇರಿದ ಐಎಎಸ್‌ ಟೀನಾ ದಾಬಿ
  • 2018 ರಲ್ಲಿ ಐಎಎಸ್ ಅಥರ್ ಅಮೀರ್‌ ಖಾನ್ ಅವರನ್ನು ವಿವಾಹವಾಗಿದ್ದ ಟೀನಾ
  • 2021ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು

ಹೊಸದಿಲ್ಲಿ: 2015ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತೀಯ ಆಡಳಿತ ಸೇವೆಯ ಅಧಿಕಾರಿ ಟೀನಾ ದಾಬಿ ಅವರು ಇಂದು ಸಹ ಅಧಿಕಾರಿ ಡಾ.ಪ್ರದೀಪ್ ಗವಾಂಡೆ ಅವರನ್ನು ವರಿಸಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಡಾ ಗಾವಂಡೆ 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.

ವರದಿಗಳ ಪ್ರಕಾರ, ಇದು ಕುಟುಂಬ ಮತ್ತು ನಿಕಟ ಸ್ನೇಹಿತರನ್ನೊಳಗೊಂಡ ಖಾಸಗಿ ಸಮಾರಂಭವಾಗಿದೆ. ಏಪ್ರಿಲ್ 22 ರಂದು ರಾಜಸ್ಥಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇಬ್ಬರೂ, ಟೀನಾ ದಾಬಿ ಮತ್ತು ಡಾ ಪ್ರದೀಪ್‌ ಗವಾಂಡೆ ರಾಜಸ್ಥಾನ ಕೇಡರ್‌ನ ಅಧಿಕಾರಿಗಳಾಗಿದ್ದಾರೆ. ದಾಬಿ ಪ್ರಸ್ತುತ ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ (Finance Department of Rajasthan)ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಡಾ ಗವಾಂಡೆ ಅವರು ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ನಿರ್ದೇಶಕರಾಗಿದ್ದಾರೆ.

2015 UPSC ಟಾಪರ್ ತಂಗಿಗೂ ರ‍್ಯಾಂಕ್..! ದಲಿತ ಸಹೋದರಿಯರ ಸಾಧನೆ
 

ಈ ಐಎಎಸ್‌ ಅಧಿಕಾರಿಗಳು ಕಳೆದ ತಿಂಗಳು ತಮ್ಮ ನಿಶ್ಚಿತಾರ್ಥವನ್ನು  Instagram ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಘೋಷಿಸಿದ್ದರು. ತನ್ನೊಂದಿಗೆ ನಿಶ್ಚಿತಗೊಂಡ ವರ ಪ್ರದೀಪ್‌ಗೆ ಇದನ್ನು ಟ್ಯಾಗ್ ಮಾಡುವ ಮೂಲಕ,' ನೀವು ನೀಡಿದ ನಗುವನ್ನು ನಾನು ಧರಿಸಿದ್ದೇನೆ' ಎಂದು ಬರೆದಿದ್ದರು. ಸಾಂಕ್ರಾಮಿಕ ಸಮಯದಲ್ಲಿ ಈ ಜೋಡಿ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು ನಂತರ ಟೀನಾ ದಾಬಿ ಅವರಿಗೆ ಡಾ ಪ್ರದೀಪ್‌ ಗವಾಂಡೆ ಪ್ರೇಮ ನಿವೇದನೆ ಮಾಡಿದ್ದರು. ಪ್ರದೀಪ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು. 

ಈ ಹಿಂದೆ ಟೀನಾ ದಾಬಿ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ (Athar Aamir Khan) ಅವರನ್ನು ಮದುವೆಯಾಗಿದ್ದರು. ಖಾನ್ 2015ರ UPSC ಪರೀಕ್ಷೆಯಲ್ಲಿ ಎರಡನೇ Rank ಗಳಿಸಿದ್ದರು.  ಟೀನಾ ದಾಬಿ ಮತ್ತು ಅಥರ್ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ನಡೆದ, ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು. 2021ರಲ್ಲಿ ಈ ದಂಪತಿಗಳು ವಿಚ್ಛೇದನ ಪಡೆದರು. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ದಲಿತ ಮಹಿಳೆ ಟೀನಾ ದಾಬಿ (Tina Dabi) ಆಗಿದ್ದು, ತನ್ನ  ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.

ಮತ್ತೆ ಮದುವೆಯಾಗಲಿದ್ದಾರೆ IAS ಟೀನಾ ದಾಬಿ, ವರ ಪ್ರದೀಪ್ ಇವರೇ ನೋಡಿ!
 

ಟೀನಾ ದಾಬಿ ಮೂಲತಃ ದೆಹಲಿಯವರು. ಕಳೆದ ವರ್ಷ ಅವರ ಸಹೋದರಿ ರಿಯಾ ದಾಬಿ ಕೂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು. ಯುಪಿಎಸ್‌ಸಿ ತೇರ್ಗಡೆಯಾದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ರಿಯಾ ಕೂಡ ಒಬ್ಬರು. ಅವರು 23 ನೇ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಟೀನಾ ಸಹೋದರಿ. ತನ್ನ ವೈಯಕ್ತಿಕ ಜೀವನದ ಜೊತೆಗೆ, ಟೀನಾ ದಾಬಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತನ್ನ ಸೌಂದರ್ಯದಿಂದಾಗಿಯೂ ಇವರು ಚರ್ಚೆಯಲ್ಲಿರುತ್ತಾರೆ. ಟೀನಾ ಆಗಾಗ್ಗೆ ತನ್ನ ಫೋಟೋ ಮತ್ತು ರೀಲ್‌ಗಳನ್ನು ಹಂಚಿಕೊಳ್ಳುತ್ತಾಳೆ ಅದು ತುಂಬಾ ವೈರಲ್ ಆಗಿದೆ.

click me!