ಕರೆನ್ಸಿ ನೋಟುಗಳಲ್ಲಿ ಬರೆಯುವುದು ಕಾನೂನು ಬಾಹಿರವಾಗಿದೆ. ಹಾಗೆಂದ ಮಾತ್ರಕ್ಕೆ ಜನರು ನೋಟುಗಳಲ್ಲಿ ಬರೆಯುವುದನ್ನು ನಿಲ್ಲಿಸಿಲ್ಲ. ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ತನ್ನನ್ನು ಕರೆದುಕೊಂಡು ಓಡಿಹೋಗುವಂತೆ 10 ರೂಪಾಯಿ ನೋಟಿನಲ್ಲಿ ಬರೆದಿದ್ದಳು. ಈ ನೋಟಿನ ಚಿತ್ರ ಇದೀಗ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಹಲವು ಜೋಕ್‌ಗಳನ್ನು ಹುಟ್ಟು ಹಾಕಿದೆ.
ಭಾರತದಲ್ಲಿ ಪ್ರೇಮ ವಿವಾಹಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆಂದು ತೋರುತ್ತದೆಯಾದರೂ, ಪ್ರತಿಯೊಬ್ಬರೂ ಮುಕ್ತವಾಗಿ ಆಯ್ಕೆ ಮಾಡುವ ಆಯ್ಕೆ ಇದಾಗಿಲ್ಲ. ಹೀಗಾಗಿ, ಕುಸುಮ್ ಎಂಬ ಮಹಿಳೆ ತನ್ನನ್ನು ಇದೇ ರೀತಿಯ ಸಂಕಷ್ಟದಿಂದ ಪಾರು ಮಾಡುವಂತೆ ತನ್ನ ಪ್ರೇಮಿ ವಿಶಾಲ್‌ಗೆ ಈ ಹತ್ತು ರೂಪಾಯಿ ನೋಟಿನಲ್ಲಿ ವಿನಂತಿಯ ಓಲೆ ಕಳುಹಿಸಿದ್ದಾಳೆ. ವಿಶಾಲ್, ಮೇರಿ ಶಾದಿ 26 ಎಪ್ರಿಲ್ ಕೋ ಹೈ. ಮುಝೇ ಭಾಗ ಕೇ ಲೇ ಜಾನಾ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ತುಮ್ಹಾರಿ ಕುಸುಮ್ (ವಿಶಾಲ್, ನನ್ನ ಮದುವೆಯನ್ನು ಏಪ್ರಿಲ್ 26 ಕ್ಕೆ ನಿಗದಿಪಡಿಸಲಾಗಿದೆ. ನನ್ನನ್ನು ಕರೆದುಕೊಂಡು ಓಡಿಹೋಗು ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಕುಸುಮ್) ಎಂದು ಸಂದೇಶವನ್ನು ನೋಟಿನಲ್ಲಿ ಬರೆಯಲಾಗಿದೆ.
ಈ 1ರೂ. ನಾಣ್ಯ ನಿಮ್ಮ ಬಳಿಯಿದ್ರೆ 10 ಕೋಟಿ ರೂ.ಗಳಿಸಬಹುದು; ಹೇಗೆ ಅಂತೀರಾ? ಇಲ್ಲಿದೆ ವಿವರ
ತನ್ನ ಗೆಳೆಯನನ್ನು ತಲುಪಲು ವಧುವಿನ ಹತಾಶ ಪ್ರಯತ್ನದ ಭಾಗವಾದ ಈ ನೋಟು ಈಗ ಇಂಟರ್‌ನೆಟ್‌ನಲ್ಲಿ ಸುತ್ತು ಹೊಡೆಯುತ್ತಿದ್ದು, ಟ್ವಿಟ್ಟರ್ ಬಳಕೆದಾರರು ಯಾರೆಲ್ಲಾ ವಿಶಾಲ್ ಎಂಬುವವರು ಇದ್ದಾರೋ ಅವರೆಲ್ಲರಿಗೂ ಈ ನೋಟನ್ನು ಟ್ಯಾಗ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಿನ್ನ ಶಕ್ತಿಯನ್ನು ತೋರಿಸು 26 ಏಪ್ರಿಲ್ ಕೆ ಪೆಹ್ಲೆ ಕುಸುಮ್ ಕಾ ಯೇ ಸಂದೇಶ ವಿಶಾಲ್ ತಕ್ ಪಹುಚಾನಾ ಹೈ.. ದೋನೊ ಪ್ಯಾರ್ ಕರ್ನೆ ವಾಲೇ ಕೋ ಮಿಲನಾ ಹೈ (ಏಪ್ರಿಲ್ 26 ರ ಮೊದಲು ಕುಸುಮ್‌ನ ಈ ಸಂದೇಶವನ್ನು ವಿಶಾಲ್‌ಗೆ ತಲುಪಿಸಬೇಕು ... ಪ್ರೀತಿಯಲ್ಲಿರುವ ಇಬ್ಬರು ಒಂದಾಗಬೇಕು), ಎಂದು ಬಳಕೆದಾರರು ಬರೆದಿದ್ದಾರೆ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಅನ್ನು ಟ್ಯಾಗ್ ಮಾಡಿ.." ಎಂದು ನೆಟ್ಟಿಗರು ಬರೆದುಕೊಂಡು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಫೋಟೋ ವಿಶಾಲ್‌ನ ಸರ್‌ನೇಮ್ ಅನ್ನು ಅಳಿಸಲಾಗಿದ್ದು, ಆ ಸರ್‌ನೇಮ್ ಅನ್ನು ಬಹಿರಂಗಪಡಿಸುವಂತೆ ನೆಟ್ಟಿಗರು ವಿನಂತಿಸಿದರು. ಅಲ್ಲದೇ ಯಾರೆಲ್ಲಾ ವಿಶಾಲ್ ಎಂಬ ಹೆಸರಿನವರಿದ್ದಾರೋ ಅವರೆಲ್ಲರಿಗೂ ಈ ಟ್ವಿಟ್ ಅನ್ನು ಟ್ಯಾಗ್ ಮಾಡಿದರು.
ನೀರಿನ ಟ್ಯಾಂಕ್ ಒಳಗೆ ಹಣದ ರಾಶಿ... ನೋಟು ಒಣಗಿಸಲು Hair Dryer ಬಳಸಿದ ಐಟಿ ಅಧಿಕಾರಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ