ಐಎಎಸ್ ಗಂಡನನ್ನು ಬಿಟ್ಟು ತನ್ನೂರಿನ ಗ್ಯಾಂಗ್‌ಸ್ಟಾರ್ ಜೊತೆ ಓಡಿ ಹೋಗಿದ್ದ ಗುಜರಾತ್‌ನ ಐಎಎಸ್ ಅಧಿಕಾರಿಯೊಬ್ಬರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾಳೆ.
ಅಹ್ಮದಾಬಾದ್: ಐಎಎಸ್ ಗಂಡನನ್ನು ಬಿಟ್ಟು ತನ್ನೂರಿನ ಗ್ಯಾಂಗ್‌ಸ್ಟಾರ್ ಜೊತೆ ಓಡಿ ಹೋಗಿದ್ದ ಗುಜರಾತ್‌ನ ಐಎಎಸ್ ಅಧಿಕಾರಿಯೊಬ್ಬರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ನಿನ್ನೆ ಆಕೆ ಗುಜರಾತ್‌ನ ಗಾಂಧಿನಗರದಲ್ಲಿ ಐಎಎಸ್ ಅಧಿಕಾರಿಯ ಮನೆ ಮುಂದೆಯೇ ವಿಷ ಸೇವಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ.
ತನ್ನ ಊರಾದ ತಮಿಳುನಾಡಿನಲ್ಲಿ ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ, ಕ್ರಿಮಿನಲ್ ಜೊತೆ ಕೆಲ ತಿಂಗಳ ಹಿಂದೆ ಈಕೆ ಓಡಿ ಹೋಗಿದ್ದಳು. ಆದರೆ ನಿನ್ನೆ ಆಕೆ ಗುಜರಾತ್‌ನಲ್ಲಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು 45 ವರ್ಷ ಪ್ರಾಯದ ಸೂರ್ಯ ಜೆ ಎಂದು ಗುರುತಿಸಲಾಗಿದೆ.
undefined
ಪೊಲೀಸರು ಹೇಳುವ ಪ್ರಕಾರ ಗುಜರಾತ್‌ನ ಇಲೆಕ್ಟ್ರಸಿಟಿ ರೆಗ್ಯುಲೆಟರ್ ಕಮೀಷನ್ (GERC)ಕಾರ್ಯದರ್ಶಿ ಆಗಿರುವ ಐಎಎಸ್ ಅಧಿಕಾರಿಯ ರಜನೀತ್ ಕುಮಾರ್ ಶನಿವಾರ ಬೆಳಗ್ಗೆ, ಗಾಂಧಿನಗರದ ಸೆಕ್ಟರ್ 19ರಲ್ಲಿ ಇರುವ ತನ್ನ ಮನೆಯತ್ತ ಬಂದ ಮಾಜಿ ಪತ್ನಿ ಸೂರ್ಯ ಜೆಯನ್ನು ಒಳಗೆ ಬಿಡದಂತೆ ಅಲ್ಲಿದ್ದ ತಮ್ಮ ಸಹಾಯಕರಿಗೆ ಹೇಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಆಕೆ ಮನೆ ಮುಂದೆಯೇ ವಿಷ ಸೇವಿಸಿದ್ದಾಳೆ.
ವಿದೇಶಾಂಗ ಕಾರ್ಯದರ್ಶಿ ನೇಮಿಸಿ ಕೇಂದ್ರಕ್ಕೆ ಕೇರಳ ಸರ್ಕಾರ ಸೆಡ್ಡು! ಸಂವಿಧಾನ ವಿರೋಧಿ ಎಂದ ಬಿಜೆಪಿ
ಇದೇ ವೇಳೆ ರಜನೀತ್ ಕುಮಾರ್, ಸೂರ್ಯ ಜೊತೆಗಿನ ತಮ್ಮ ವಿವಾಹವನ್ನು ರದ್ದುಗೊಳಿಸುವಂತೆ ವಿಚ್ಛೇದನ ಅರ್ಜಿಯ ಅಂತಿಮ ವಿಚಾರಣೆಗೆ ಹೋಗಿದ್ದರು. ಇದೇ ವೇಳೆ ಮನೆಯ ಬಳಿ ಬಂದ ಪತ್ನಿ ಸೂರ್ಯ ತನ್ನನ್ನು ಒಳಗೆ ಬಿಡದಕ್ಕೆ ಅಲ್ಲಿದ್ದ ಸಿಬ್ಬಂದಿ ಜೊತೆ ಜಗಳ ಮಾಡಿ, ಬಳಿಕ ವಿಷ ಸೇವಿಸಿದ್ದಾಳೆ. ನಂತರ ಅವಳೇ 108ಗೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿನಗರ ಎಸ್ಪಿ ರವಿತೇಜ ವಸಮಸೆಟ್ಟಿ, ಮಾತನಾಡಿದ್ದು, ತಮಿಳು ಭಾಷೆಯಲ್ಲಿ ಬರೆದಿದ್ದ ಡೆತ್‌ನೋಟ್ ಸಿಕ್ಕಿದೆ ಎಂದು ಹೇಳಿದ್ದಾರೆ ಆದರೆ ಅದರಲ್ಲಿ ಏನಿತ್ತು ಎಂಬ ಬಗ್ಗೆ ವಿವರ ನೀಡಲು ನಿರಾಕರಿಸಿದ್ದಾರೆ. ಇತ್ತ ಪೊಲೀಸರು ಮೂಲಗಳ ಪ್ರಕಾರ, ಮಧುರೈನಲ್ಲಿ ನಡೆದ 14 ವರ್ಷದ ಬಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈಕೆ ತನ್ನ ಗಂಡನ ಮನೆಗೆ ಆಗಮಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.
ವಿವಾದಿತ ಐಎಎಸ್ ಅಧಿಕಾರಿ ಪೂಜಾ ನೇಮಕಾತಿ ರದ್ದು ಸಾಧ್ಯತೆ; ಇತ್ತ ತಾಯಿಯ ಕಂಪನಿಗೆ ಬಿತ್ತು ಬೀಗ
ಸೂರ್ಯಳ ಬಾಯ್‌ಫ್ರೆಂಡ್ ಹಾಗೂ ಹೈಕೋರ್ಟ್ ಮಹಾರಾಜ ಎಂದು ಕರೆಯಲ್ಪಡುವ ಸ್ಥಳೀಯ ರೌಡಿ ಹಾಗೂ ಆತನ ಸಹಾಯಕ ಸೆಂಥಿಲ್‌ಕುಮಾರ್, ಜುಲೈ 11ರಂದು ಬಾಲಕನೋರ್ವನನ್ನು ಅಪಹರಿಸಿದ್ದರು. ಈ ಪ್ರಕರಣದಲ್ಲಿ ಸೂರ್ಯಳ ಹೆಸರು ಕೂಡ ಕೇಳಿ ಬಂದಿತ್ತು. ಬಾಲಕನ ತಾಯಿಯ ಜೊತೆ ಹಣದ ವಿಚಾರಕ್ಕೆ ವೈಷಮ್ಯ ಉಂಟಾಗಿ ಬಾಲಕನನ್ನು ಅಪಹರಿಸಿದ ಈ ದುರುಳರು ಬಾಲಕನ ಬಿಡುಗಡೆ ಮಾಡಲು 2 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದರು. ಆದರೆ ಮಧುರೈ ಪೊಲೀಸರು ಬಾಲಕನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಈ ಪ್ರಕರಣದಲ್ಲಿ ಭಾಗಿಯಾದ ಖದೀಮರ ಪತ್ತೆಗೆ ಜಾಲ ಬೀಸಿದ್ದರು. ಈ ಪ್ರಕರಣದಲ್ಲಿ ಸೂರ್ಯ ಕೂಡ ಭಾಗಿಯಾಗಿದ್ದಳು ಎನ್ನಲಾಗಿದೆ.
ಸುಮಾರು 9 ತಿಂಗಳ ಹಿಂದೆ ಸೂರ್ಯ ತನ್ನ ಪತಿ ಐಎಎಸ್ ಅಧಿಕಾರಿ ರಜನೀತ್ ಕುಮಾರ್ ಅವರನ್ನು ಬಿಟ್ಟು ಹೈಕೋರ್ಟ್ ಮಹರಾಜ ಎಂದು ಕರೆಯಲ್ಪಡುತ್ತಿದ್ದ ರೌಡಿಯ ಜೊತೆ ಓಡಿ ಹೋಗಿದ್ದಳು. ಈಗ ಮಧುರೈ ಅಪಹರಣ ಪ್ರಕರಣದಲ್ಲಿ ಆಕೆ ಆರೋಪಿಯಾಗಿದ್ದು, ಇದೇ ಕಾರಣಕ್ಕೆ ಅಲ್ಲಿಂದ ಗುಜರಾತ್‌ಗೆ ಬಂದ ಆಕೆ ಇಲ್ಲಿ ಗಂಡ ಮನೆ ಹತ್ತಿಸಿಕೊಳ್ಳಲು ನಿರಾಕರಿಸಿದಾಗ ಅದೇ ಎಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವೆನು ಎಂಬ ಭಯದಲ್ಲಿ ಸಾವಿನ ದಾರಿ ಹಿಡಿದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಐಎಎಸ್ ಅಧಿಕಾರಿಗೆ ಇರುವ ಗೌರವವೇ ಬೇರೆ, ಇದೇ ಕಾರಣಕ್ಕೆ ಅನೇಕರು ಐಎಎಸ್ ಅಧಿಕಾರಿಗಳನ್ನು ಮದುವೆಯಾಗಲು ಹಾತೊರೆಯುತ್ತಾರೆ. ಅನೇಕ ವಿಐಪಿ, ವಿವಿಐಪಿಗಳು ಐಎಎಸ್ ಅಧಿಕಾರಿಗೆ ಪುತ್ರಿಯರನ್ನು ಕೊಡಲು ಬಯಸುತ್ತಾರೆ. ಆದರೆ ಈಕೆ ಮಾತ್ರ ಸಿಕ್ಕ ಐಎಎಸ್ ಗಂಡನನ್ನು ಬಿಟ್ಟು ರೌಡಿಯೊಂದಿಗೆ ಓಡಿ ಹೋಗಿ ಜೀವನವನ್ನೇ ಅಂತ್ಯ ಮಾಡಿಕೊಂಡಿರುವುದು ಮಾತ್ರ ವಿಪರ್ಯಾಸ.