
ಬೆಳಗಾವಿ (ಜು.22): ದಕ್ಷಿಣ ಭಾರತದಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಜಿಲ್ಲೆಗಳ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ರಮಣೀಯ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಾಲಗಿದೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ..
ವಿಶ್ವಪ್ರಸಿದ್ಧ ದೂಧ್ ಸಾಗರ ಜಲಪಾತ ಅದ್ಬುತ ಪ್ರಕೃತಿ ಸೌಂದರ್ಯದ ದ್ರೋಣ ಕ್ಯಾಮರಾದಲ್ಲಿ ಸರೆ ಹಿಡಿಯಲಾಗಿದೆ. ದೇಶದಲ್ಲಿ ಮಾನ್ಸೂನ್ ಆರಂಭವಾಗ್ತಿದ್ದಂತೆ ದೂಧ್ ಸಾಗರ ಜಲಪಾತದ ರಮಣೀಯ ಸೊಬಗು ಮೈದಡವಿಕೊಂಡಿದೆ. ದಟ್ಟಡವಿಯಲ್ಲಿ ಹಾಲ್ನೋರೆಯಂತೆ ಧುಮುಕುವ ಜಲಪಾತ ನೋಡಲು ಎರಡು ಕಣ್ಣು ಸಾಲದು. ಪಶ್ಚಿಮಘಟ್ಟ ಪ್ರದೇಶದಲ್ಲಿನ ವರುಣಾರ್ಭಟಕ್ಕೆ ವಿಶ್ವಪ್ರಸಿದ್ಧ ದೂಧ್ ಸಾಗರ ಜಲಪಾತ ಧುಮುಕ್ಕುತ್ತಿದೆ. ಇನ್ನು ಕರ್ನಾಟಕ ಮತ್ತು ಗೋವಾ ರಾಜ್ಯಗಳ ವಿವಿಧೋದ್ದೇಶ ಯೋಜನೆ ಜಾರಿ ಬಗ್ಗೆ ವಿವಾದ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ, ಅಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ಮಾತ್ರ ಯಾರನ್ನೂ ಲೆಕ್ಕಿಸದೇ ಪ್ರಕೃತಿ ಮಡಿಲಿನಲ್ಲಿ ರಾರಾಜಿಸುತ್ತಾ ಹರಿಯುತ್ತಿದೆ.
ಜೀವನದ ಹೀರೋಯಿನ್ ಪರಿಚಯಿಸಿದ ತರುಣ್ ಸುಧೀರ್, ಮದುವೆ ದಿನಾಂಕವೂ ಅನೌನ್ಸ್; ಇವರಿಬ್ಬರ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?
ಮಹದಾಯಿ ನದಿಯಿಂದ ಉದ್ಭವಿಸುವ ಧೂದ್ ಸಾಗರ ಜಲಪಾತವು, ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಕಾಣಿಸುತ್ತದೆ. ಕರ್ನಾಟಕದ ಬೆಳಗಾವಿಯಿಮದ ಕೇವಲ 80 ಕಿ.ಮೀ. ದೂರದಲ್ಲಿರುವ ದೂಧ್ ಸಾಗರ ಜಲಪಾತದಲ್ಲಿ ಮಂಜಿನಾಟದ ಮನಮೋಹಕ ದೃಶ್ಯವನ್ನೂ ಡ್ರೋಣ್ ಕ್ಯಾಮೆರಾ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ದೂಧ್ ಸಾಗರ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲೊಂದಾಗಿದ್ದು, ಇದನ್ನು ನೊಡಿದವರಿಗೆ ಭೂಲೋಕದ ಸ್ವರ್ಗದಲ್ಲಿದ್ದೇವೆ ಎಂದು ಭಾಸವಾಗುತ್ತದೆ.
ಪ್ರವಾಸಿಗರ ಪ್ರಾಣ ಉಳಿಸಲು ಗೋವಾ ಸರ್ಕಾರದ ಪರದಾಟ:
ದೂಧ್ ಸಾಗರ ಜಲಪಾತವು ಗೋವಾ ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಬಂದು ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಳ್ಳುವ ಪ್ರಯಾಣಿಕರ ಬಗ್ಗೆ ಮುತುವರ್ಜಿ ವಹಿಸುತ್ತಿದೆ. ಇದರ ನಡುವೆಯೂ ಹಲವು ಜನರು ದೂಧ್ ಸಾಗರ ಜಲಪಾತದ ಅದ್ಭುತ ಸೌಂದರ್ಯವನ್ನು ನೋಡಿ ಮೈಮರೆತು ಹೆಜ್ಜೆಹಾಕಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ನೀರು ಹೆಚ್ಚಾಗಿ ಹರಿಯುತ್ತಿದ್ದು, ನಿರಂತರವಾಗಿ ಮಳೆಯೂ ಸುರಿಯುತ್ತಿದೆ.
ಐದು ದಿನದಲ್ಲಿ ಕೆಆರ್‌ಎಸ್‌ಗೆ 15 ಟಿಎಂಸಿ ನೀರು, ಆ.8ರಂದು ಸಿಎಂ ಬಾಗಿನ ಸಂಭವ
ಕೊಂಕಣ್ ರೈಲ್ವೆನಲ್ಲಿ ಮಾತ್ರ ದೃಶ್ಯ ವೀಕ್ಷಣೆಗೆ ಅವಕಾಶ:
ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರವಾಸಿಗರ ಸಂಚಾರಕ್ಕೆ ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಗೋವಾ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಇನ್ನು ಉತ್ತರ ಕನ್ನಡದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲ್ವೆಯಲ್ಲಿ ಹೋಗುವವರಿಗೆ ಮಾತ್ರ ಈ ದೂಧ್ ಸಾಗರ ಜಲಪಾತದ ಅದ್ಭುತ ರಮಣೀಯ ದೃಶ್ಯವನ್ನು ನೋಡಲು ಅವಕಾಶ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ