ಬಳಕೆದಾರರ ಮಾಹಿತಿ ಗೌಪ್ಯತೆಯ ಹಕ್ಕು ಮತ್ತು ಅದರ ರಕ್ಷಣೆ ಹೇಗೆ?

By Suvarna NewsFirst Published Jun 25, 2021, 4:33 PM IST
Highlights

* ಬಳಕೆದಾರರ ಡೇಟಾ ಪ್ರೈವೆಸಿ ಭಾರತದಲ್ಲಿ ಬಹುದೊಡ್ಡ ಸವಾಲು

* ಗ್ರಾಹಕರ ಮಾಹಿತಿ ದುರುಪಯೋಗಪಡಿಸುತ್ತಿವೆ ಕಂಪನಿಗಳು

* ಕಂಪನಿಗಳಿಗೆ ಕಡಿವಾಣ ಹಾಕಲು ಸರ್ಕಾರದ ನೀತಿ

*  IAMAIನ #PubVision21ನಲ್ಲಿ ಆರ್‌ಸಿ ಮಾತು

ನವದೆಹಲಿ(ಜೂ.25): ಆನ್‌ಲೈನ್ ಮಾಧ್ಯಮ ಎಂಬುವುದು ಇಮೇಲ್‌ ಮೂಲಕ ಆರಂಭವಾಯ್ತು. ಇದಾದ ಬಳಿಕ ಮಾಹಿತಿ ನೀಡುವ ಹಾಗೂ ಸೇವೆಗಳನ್ನೊದಗಿಸುವ ಕಾರ್ಯವೂ ಆರಂಭವಾಯತ್ತು. ಇದೇ ಮತ್ತಷ್ಟು ಅಭಿವೃದ್ಧಿಯಾಗಿ ಆರೋಗ್ಯ, ಆರ್ಥಿಕ ಸೌಲಭ್ಯ ನೀಡುವವರೆಗೂ ತಲುಪಿದ್ದು, ಇನ್ನೂ ಸಾಕಷ್ಟು ಸೌಲಭ್ಯಗಳನ್ನೊದಗಿಸುವ ಬಗ್ಗೆ ಆವಿಷ್ಕಾರ ನಡೆಯುತ್ತಿದೆ. ಆದರೆ ಈ ನಡುವೆ ಬಳಕೆದಾರರ ಮನಸ್ಥಿತಿಯೂ ಬದಲಾಗಿದೆ. ಆರಂಭದಲ್ಲಿ ಅಗತ್ಯಕ್ಕಷ್ಟೇ ಬಳಕೆಯಾಗುತ್ತಿದ್ದ ಈ ಆನ್‌ಲೈನ್ ಮಾಧ್ಯಮ ಹಾಗೂ ಸೇವೆ ಈಗ ದುರ್ಬಳಕೆಯೇ ಹೆಚ್ಚಾಗುತ್ತದೆ. ಬಳಕೆದಾರರ ಹೊರೆ ಕಡಿಮೆ ಮಾಡಲು ಪ್ರತಿನಿತ್ಯ ಹೊಸ ಬಗೆಯ ಆಯ್ಕೆಗಳನ್ನೂ ತಂದರೂ ಲಾಭಕ್ಕಿಂತ ಹೆಚ್ಚು ಹಾನಿಯಾಗುತ್ತಿದೆ. 

ಇವೆಲ್ಲದರ ಮಧ್ಯೆ ಬಳಕೆದಾರರ ಮಾಹಿತಿಯನ್ನು ಹೇಗೆ ಗೌಪ್ಯವಾಗಿಟ್ಟುಕೊಳ್ಳುವುದೆಂಬ ಸವಾಲು ಕೂಡಾ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಭದ್ರತೆಗೂ ಅಪಾಯವಾಗುತ್ತಿದ್ದು, ಅನೇಕ ಬಗೆಯ ದೂರುಗಳೂ ಕೇಳಿ ಬಂದಿವೆ. ಹೀಗಿರುವಾಗ ಸರ್ಕಾರ ಸೋಶಿಯಲ್ ಮೀಡಿಯಾ ಬಳಕೆದಾರರ ಮಾಹಿತಿಯನ್ನು ಪಡೆಯಲು ನಿಯಮಗಳನ್ನು ಜಾರಿಗೊಳಿಸಿದೆ. ಬಳಕೆದಾರರ ಮಾಹಿತಿ ಗೌಪ್ಯವಾಗಿರಿಸುವ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆಗಳನ್ನಿರಿಸುತ್ತಿದೆ. ಹೀಗಿರುವಾಗ ಭಾರತದಂತಹ ದೇಶದಲ್ಲಿ ಡೇಟಾ ಪ್ರೊಟೆಕ್ಷನ್ ಎಷ್ಟು ಮುಖ್ಯ? ಇದರ ರಕ್ಷಣೆ ಹೇಗೆ? ಸರ್ಕಾರಕ್ಕೆ ಇದು ಹೇಗೆ ಸವಾಲಾಗುತ್ತದೆ ಎಂಬಿತ್ಯಾದಿ ವಿಚಾರದ ಬಗ್ಗೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್  IAMAIನ #PubVision21ನಲ್ಲಿ ಮಾತನಾಡಿದ್ದಾರೆ. ಜಾಗರಣ್ ನ್ಯೂಸ್‌ ಮೀಡಿಯಾ ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಭರತ್ ಗುಪ್ತಾ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಸಂವಾದದಲ್ಲಿ ಆರ್‌ಸಿ ಉಲ್ಲೇಖಿಸಿದ ಪ್ರಮುಖ ವಿಚಾರಗಳು.

- Keynote: Building a Data Privacy Ecosystem in India https://t.co/bMicOvGtyC

— IAMAI (@IAMAIForum)

ತನ್ನ ಮೂಲ ಉದ್ದೇಶ ಮರೆತ ಅಂತರ್ಜಾಲ: 

ಇಂಟರ್ನೆಟ್‌ ಎನ್ನುವುದನ್ನು ಆರಂಭದಲ್ಲಿ ಜನರ ನಡುವೆ ಒಡನಾಟ, ಸಂವಹನ ಹೆಚ್ಚಿಸುವ ಸಲುವಾಗಿ ಡಿಸೈನ್ ಮಾಡಲಾಗಿತ್ತು. ಆದರೆ ಒಂದು ಉತ್ತಮ ಉದ್ದೇಶದಿಂದ ಆರಂಭವಾದ ಅಂತರ್ಜಾಲ ನೋಡ ನೋಡುತ್ತಿದ್ದಂತೆಯೇ ತಪ್ಪು ಹಾದಿ ಹಿಡಿಯಿತು. ಸಾಮಾಜಿಕ ಜಾಲತಾಣದಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳು ಇದಕ್ಕೆ ಸೂಕ್ತ ಉದಾಹರಣೆ. ಇಂದು ಇಂಟರ್ನೆಟ್‌ ಎನ್ನುವುದು ವಾಣಿಜ್ಯ ಶೋಷಣೆಗೊಳಪಟ್ಟಿದೆ. ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಇಂತಹ ಸಮಸ್ಯೆ ಕಂಡುಬರುವುದು ಸಹಜ. ಹೀಗಾಗಿ ನಾವು ಇಂಟರ್ನೆಟ್‌ನ್ನು ಅಂದಿನ ದಿನಗಳಲ್ಲಿ ಹೇಗಿತ್ತು ಎನ್ನುವುದಕ್ಕಿಂತ ಇಂದು ಹೇಗಿದೆ ಎಂದಷ್ಟೇ ನೋಡಬೇಕು. 

ಆಧಾರ್‌ ಬಗ್ಗೆ ಇದ್ದ ಆತಂಕ

ಇಂಟರ್ನೆಟ್‌ ವಿಚಾರವನ್ನು ಉಲ್ಲೇಖಿಸಿದ ಸಂಸದ ರಾಜೀವ್ ಚಂದ್ರಶೇಖರ್ ಇನ್ನು ದೇಶದಲ್ಲಿ Data Protection Bill ಯಾಕೆ ಜಾರಿಗೊಳಿಸಲಾಗುತ್ತದೆ ಎಂಬ ಪ್ರಶ್ನೆ ಉತ್ತರಿಸುವುದಾದರೆ, ಕಳೆದ ಹತ್ತು ವರ್ಷಗಳಿಂದ ಅನೇಕರು ವೈಯಕ್ತಿಕ ಗೌಪ್ಯತೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ನಾನೇ ಹನ್ನೊಂದು ವರ್ಷದ ಹಿಂದೆ 2010ರಲ್ಲಿ ಸಂಸತ್ತಿನಲ್ಲಿ ಪ್ರೈವೆಸಿ ಬಿಲ್ ಬಗ್ಗೆ ಚರ್ಚಿಸಿದ್ದೆ. ಇದಕ್ಕೆ ಕಾರಣವಾಗಿದ್ದು ಆಧಾರ್. ಇದು ನಿಜಕ್ಕೂ ರಾಜ್ಯ ಸರ್ಕಾರ ನಡೆಸಿದ್ದ ಅತೀ ದೊಡ್ಡ ಪಬ್ಲಿಕ್ ಡೊಮೈನ್ ಡೇಟಾ ಕಲೆಕ್ಷನ್ ಆಗಿತ್ತು. ಇದನ್ನು ಒಂದೊಳ್ಳೇ ಉದ್ದೇಶದಿಂದಲೇ ಆರಂಭಿಸಲಾಗುತ್ತು. ಆದರೆ ಇಲ್ಲಿ ಡೇಟಾ ನೀಡುವವರ ಬಗ್ಗೆ ಯಾವುದೇ ಗೌರವ ಇಲ್ಲ ಎಂಬುವುದು ಸ್ಪಷ್ಟವಾಗಿತ್ತು. ಇಲ್ಲಿ ಜನರ ಮಾಹಿತಿ ಇತರ ಜೊತೆ ಶೇರ್ ಮಾಡುವುದಿಲ್ಲ ಎಂಬ ಗ್ಯಾರಂಟಿ ಇರಲಿಲ್ಲ. ಈ ಬಗ್ಗೆ ಹೆಚ್ಚಿನವರಿಗೆ ಕಾಳಜಿ ಇತ್ತೆಂದೂ ನನಗನಿಸಿರಲಿಲ್ಲ, 

ಸುಳ್ಸುದ್ದಿಗಳ ಹಾವಳಿ ಮಧ್ಯೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸವಾಲು!

ಈ ನಿಟ್ಟಿನಲ್ಲಿ ನಾನೂ ಸೇರಿದಂತೆ ಅನೇಕ ಮಂದಿ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. 2016ರಲ್ಲಿ ಸುಒಪ್ರಿಂ ಕೋರ್ಟ್ ಆರ್ಟಿಕಲ್ 21ರಡಿ ಪ್ರೈವೆಸಿ ಕೂಡಾ ಜನರ ಮೂಲಭೂತನ ಹಕ್ಕಿನಡಿ ಬರುತ್ತದೆ ಎಂದು ಆದೇಶಿಸಿತು. ಹೀಗಾಗಿ ಸರ್ಕಾರ ಡೇಟಾ ಪ್ರೊಟೆಕ್ಷನ್ ಬಿಲ್ ಜಾರಿಗೊಳಿಸಬೇಕಾದ ಅನಿವಾರ್ಯತೆ ಬಂತು ಎಂದಿದ್ದಾರೆ ಆರ್‌ಸಿ.

ಬಳಕೆದಾರರಿಗೆ ಗೌಪ್ಯತೆಯ ಹಕ್ಕು

Data Protection Bill ಬಗ್ಗೆ ಮಾಥನಾಡಿದ ಆರ್‌ಸಿ  ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ಸೇವೆಯೊಂದನ್ನು ನೀಡಿ ಅದಕ್ಕೆ ಪ್ರತಿಯಾಗಿ ಬಳಕೆದಾರರ ಮಾಹಿತಿ ಸಂಗ್ರಹಿಸುತ್ತವೆ. ಇದು ಸೋಶಿಯಲ್ ಮೀಡಿಯಾಗಳು ಪಾಲಿಸುತ್ತಿರುವ ಮೂಲ ನಿಯಮ. ಆದರೆ ಸಂಗ್ರಹಿಸಿದ ಈ ಮಾಹಿತಿಯನ್ನು ಕೆಲ ನಿರ್ದಿಷ್ಟ ವಿಚಾರಗಳಲ್ಲಿ ಬಳಸಲಾಗುತ್ತಿತ್ತು. ಇದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ, ಅವರು ತಮಗೆ ಬೇಕಾದಂತೆ ಇದನ್ನು ಬಳಸುತ್ತಿದ್ದರು. ಆದರೆ ಈ ವಿಚಾರದಲ್ಲಿ ಕೊಂಚ ಮಾರ್ಪಾಡಾಗಿ ಬಳಕೆದಾರರ ಮಾಹಿತಿಯನ್ನು ಬಳಸುವ ಮುನ್ನ ಯಾವ ಕಾರಣಕ್ಕಾಗಿ ಬಳಸಲಾಗುತ್ತಿದೆ. ಇದಕ್ಕೆ ಒಪ್ಪಿಗೆ ಇದೆಯೇ ಎಂಬುವುದನ್ನು ಅವರಿಂದ ಖಳಚಿತಪಡಿಸಿಕೊಳ್ಳಬೇಕು. ಈ ಹಕ್ಕು ಸರ್ಕಾರ ಗ್ರಾಹಕರಿಗೆ ನೀಡಲಿದ್ದಾರೆ ಎಂದಿದ್ದಾರೆ.  

ಯಾಕೆಂದರೆ ಇತ್ತೀಚೆಗೆ ಗ್ರಾಹಕರ ಮಾಹಿತಿಯನ್ನು ಕೆಲ ಜಾಹೀರಾತುದಾರರಿಗೆ ಹಾಗೂ ಕೆಲ ಕಂಪನಿಗಳಿಗೆ ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ. ಹೀಗಿರುವಾಗ ಬಳಕೆದಾರರ ಅನುಮತಿ ಪಡೆಯಬೇಕು. ಇದು ಕೇವಲ ಒಂದು ಬಾರಿ ಮಾತ್ರವಲ್ಲ, ಬಳಕೆದಾರರ ಮಾಹಿತಿ ಎಷ್ಟು ಬಾರಿ ಇತರರಿಗೆ ಹಂಚಲಾಗುತ್ತದೋ ಆವಾಗೆಲ್ಲಾ ಅನುಮತಿ ಪಡೆಯುವ ಕ್ರಮ ಕಾರಿಯಾಗಬೇಕು.

ಗೌಪ್ಯತೆ ಎಂಬ ಹಕ್ಕು ಸಂವಿಧಾನವೇ ನೀಡುತ್ತದೆ

ಗೌಪ್ಯತೆ ಎಂಬ ಹಕ್ಕು ಸಂವಿಧಾನವೇ ನಮಗೆ ನೀಡುತ್ತಿದೆ. ಹೀಗಿದ್ದರೂ ಅನೇಕ ಬಳಕೆದಾರರ ವೈಯುಕ್ತಿಕ ಮಾಹಿತಿ ಹಂಚಿಕೆಯಾಗುತ್ತಿದೆ. ಹೀಷ್ಟಾದರೂ ಹೆಚ್ಚಿನವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾವುದೇ ದೂರಿ ನೀಡಿಲ್ಲ ಎಂಬುವುದು ಅಚ್ಚರಿಪಡಿಸುವ ವಿಚಾರ. ಹೀಗಿರುವಾಗ ಡೇಟಾ ಪ್ರೈವೆಸಿ ಬಿಲ್ ಮೂಲಕ ಕಂಪನಿಗಳಿಗೆ ದೂರಿನ ಹೊರೆಯಲ್ಲಿ ಮುಳುಗಿಸುವಂತೆ ಮಾಡುವ ಉದ್ದೇಶನಮ್ಮದಲ್ಲ. ಆದರೆ ಬಳಕೆದಾರರ ಅವರ ಹಕ್ಕನ್ನು ಒದಗಿಸುವ ಕೆಲಸ ನಮ್ಮದು. ತಂತ್ರಜ್ಞಾನದಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿರುವ ಸಂದರ್ಭದಲ್ಲಿ ಬಳಕರೆದಾರರ ಮಾಹಿತಿಯೂ ಸುರಕ್ಷಿತವಾಗದೆ ಎಂಬ ಭರವಸೆ ನೀಡಬೇಕಾಗುತ್ತದೆ. ಇದನ್ನು ಮೀರಿ ವರ್ತಿಸುವ ಕಂಪನಿಗಳಿಗೆ ಅವರ ನಡೆ ಬಹಳ ನೋವು ನೀಡಲಿದೆ. 

ಹೀಗಿರುವಾಗ ಗ್ರಾಹಕರ ಮಾಹಿತಿ ದುರುಪಯೋಗವಾಗದಂತೆ ತಡೆಯುವಂತಹ ಕ್ರಮ ಜಾರಿಗೊಳಿಸುವುದು, ಗ್ರಾಹಕರಿಗೆ ಅವರ ಮಾಹಿತಿ ಸುರಕ್ಷಿತವಾಗಿದೆ ಎಂಬ ಭರವಸೆ ನೀಡುವ ನಡೆ ಜಾರಿಗೊಳಿಸುವುದು ಸರ್ಕಾರದ ಪಾಲಿಗೆ ಬಹುದೊಡ್ಡ ಸವಾಲಾಗಿದೆ. ಹೀಗಿರುವಾಗ ಡೇಟಾ ಪ್ರೊಟೆಕ್ಷನ್ ಅಥಾರಿಟಿ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡರೆ ಒಂದು ಪ್ರಯೋಗವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇಲ್ಲಿ ಒಗ್ಗಟ್ಟಿಲ್ಲದಿದ್ದರೆ, ಬಿಲ್ ಅದೆಷ್ಟೇ ಕಟ್ಟು ನಿಟ್ಟಾಗಿದ್ದರೂ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ. 

click me!