
ಪಾಕಿಸ್ತಾನದ ಗೂಢಚಾರನೊಬ್ಬ ಹಾಕಿದ್ದ ಬಲೆಗೆ ಸಿಲುಕಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಿಲಿಟರಿ ರಹಸ್ಯಗಳನ್ನು ಪಾಕ್‌ಗೆ ರವಾನಿಸಿದ IAF ಅಧಿಕಾರಿಯೊಬ್ಬರ ದೇಶದ್ರೋಹ ಕೃತ್ಯಕ್ಕೆ ಸಂಬಂಧಿಸಿದಂತೆ ಒಂದೊಂದಾಗಿ ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಿವೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಈ ಪ್ರಕರಣದ ಆರೋಪಿಯಾಗಿರುವ ಐಎಎಫ್ ವಿಂಗ್ ಕಮಾಂಡರ್ ಮನೋರತ್ ಸಿಂಗ್ ಸಭರ್ವಾಲ್(IAF Wing Commander Manorath Singh Sabharwal) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆದ ನಂತರ ನ್ಯಾಯಾಲಯವು ಚಾರ್ಜ್‌ಶೀಟ್ ಅನ್ನು ಸಂಪೂರ್ಣವಾಗಿ ಪರಿಗಣಿಸುವ ಸಾಧ್ಯತೆಯಿದೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮೃದುಲ್ ಗುಪ್ತಾ ಈ ಪ್ರಕರಣದಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.
ಆರೋಪಿ ಮನೋರತ್ ಸಿಂಗ್ ಸಭರ್ವಾಲ್ ಅವರನ್ನು ಮುಂದಿನ ತಿಂಗಳು 5 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಮತ್ತು ಅವರ ವಿಚಾರಣೆಗೆ ಅನುಮತಿ ಪಡೆಯುವ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.
ನ ಗ್ನ ಫೋಟೋಗಳನ್ನ ನೋಡುವ ವಿಕೃತ ಆಸೆಗಾಗಿ ದೇಶದ ಭದ್ರತೆಯನ್ನೇ ಪಣಕ್ಕಿಟ್ಟಿದ್ದಾನೆ ಐಎಎಫ್ ಅಧಿಕಾರಿ! IAF ಅಧಿಕಾರಿ ಮನೋರತ್ ಸಿಂಗ್ ಸಭರ್ವಾಲ್ ಅತ್ಯಂತ ನೀಚ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪಾಕಿಸ್ತಾನಿ ಗೂಢಚಾರರಿಂದ ಪಡೆದ ಪ್ರತಿಯೊಂದು ನ ಗ್ನ ಫೋಟೋಗೆ ಬದಲಾಗಿ, ನಮ್ಮ ದೇಶದ ಯುದ್ಧ ತಂತ್ರಗಳು, ಮಿಲಿಟರಿಗೆ ಸಂಬಂಧಿಸಿದ ಸೂಕ್ಷ್ಮ, ರಹಸ್ಯ ಮಾಹಿತಿಗಳನ್ನ ಲೀಕ್ ಮಾಡಲು ಒಪ್ಪಿಕೊಂಡಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಸ್ವತಃ ಆರೋಪಿ ಐಎಎಫ್ ಅಧಿಕಾರಿಯೇ ಪ್ರತಿ ನ ಗ್ನ ಫೋಟೋ ಕಳಿಸಿದರೆ ಅದಕ್ಕೆ ಪ್ರತಿಯಾಗಿ ಯುದ್ಧ ತಂತ್ರಕ್ಕೆ ಸಂಬಂಧಿಸಿದ ಹೊಸ ಪುಟವನ್ನು ಕಳುಹಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.
ದೇಶದ ಭದ್ರತೆ ಜವಾಬ್ದಾರಿ ಹೊತ್ತ ಐಎಎಫ್ ವಿಂಗ್ ಕಮಾಂಡರ್ ಮನೋರತ್ ಸಿಂಗ್ ಸಭರ್ವಾಲ್ ಎಂಥ ವಿಕೃತ ಎಂದರೆ ಯುವತಿಯ ಫೋಟೋಗಳಿಗಾಗಿ ದೇಶದ ಭದ್ರತೆಯನ್ನೇ ಪಣಕ್ಕಿಟ್ಟಿದ್ದ. ಪಾಕಿಸ್ತಾನಿ ಗೂಢಚಾರರು ಇದೇ ವರ್ಷದ ಜನವರಿ 12 ರಿಂದ ಏಪ್ರಿಲ್ 1 ರವರೆಗೆ ನಿಯಮಿತವಾಗಿ ವಾಟ್ಸಾಪ್‌ನಲ್ಲಿ ಚಾಟ್ ಮಾಡುತ್ತಿದ್ದರು. ಅವರ ನಡುವೆ 3,000 ಕ್ಕೂ ಹೆಚ್ಚು Text messeges, 65 ಫೋಟೋಗಳು, 42 ವಾಯ್ಸ್ ಕಾಲ್, 4 ವೀಡಿಯೊ ಕಾಲ್ ಮತ್ತು 6 URL ಗಳನ್ನು ಹಂಚಿಕೊಳ್ಳಲಾಗಿದೆ. ದೇಶದ ಡ್ರೋನ್ ಸಾಮರ್ಥ್ಯಗಳು, ರಹಸ್ಯ ಡ್ರೋನ್ ಯುನಿಟ್, ದೇಶದ ಪ್ರಮುಖ ಮಿಲಿಟರಿ ನೆಲೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಅಧಿಕಾರಿ ಪಾಕಿಸ್ತಾನಿ ಗೂಢಚಾರರೊಂದಿಗೆ ಹಂಚಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ವರ್ಷದ ಮೇ ತಿಂಗಳಲ್ಲಿ ಐಎಎಫ್ ಅಧಿಕಾರಿಯ ದೇಶದ್ರೋಹದ ಕೃತ್ಯ ಬೆಳಕಿಗೆ ಬಂದಿತ್ತು. ತಕ್ಷಣ ಎಚ್ಚೆತ್ತ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ತಿಹಾರ್ ಜೈಲಿನಲ್ಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಅಲ್ಲದೆ ತನಿಖೆ ಶೀಘ್ರ ಮುಗಿಸುವ ಸಾಧ್ಯತೆಯಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಅತ್ಯುನ್ನತ ಜವಾಬ್ದಾರಿಗಳನ್ನ ಹೊತ್ತಿದ್ದ ಅಧಿಕಾರಿಯೊಬ್ಬರು ಸ್ವಾರ್ಥಕ್ಕಾಗಿ ಶತ್ರು ದೇಶಕ್ಕೆ ರಹಸ್ಯಗಳನ್ನು ರವಾನಿಸಿದ್ದಾರೆ ಎಂಬ ಘಟನೆ ಆಘಾತಕಾರಿಯಾಗಿದೆ. ಈ ಘಟನೆಯೀಗ ದೇಶಾದ್ಯಂತ ಚರ್ಚೆಯ ವಿಷವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ