
ವೆಲ್ಲಿಂಗ್ಟನ್(ಡಿ.08): ಸಿಡಿಎಸ್ ಜನರಲ್ ಬಿಪಿನ್ ರಾವತ್ (Chief of Defence Staff, General Bipin Rawat), ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 14 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ (Indian Air Force helicopter Crash) ತಮಿಳುನಾಡಿನ ಕೂನೂರಿನಲ್ಲಿ (Tamil Nadu's Coonoor) ಬುಧವಾರ ಪತನಗೊಂಡಿದೆ. ಈ ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ ವರದಿ ತಿಳಿಸಿದೆ. ದುರ್ಘಟನೆಯಲ್ಲಿ ಗಾಯಗೊಂಡ ಮೂವರನ್ಉ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಸಿಡಿಎಸ್ ಬಿಪಿನ್ ರಾವತ್ ಆರೋಗ್ಯ ಚಿಂತಾಜನಕವಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಾದೃಷ್ಟವಶಾತ್ ಅವರ ಪತ್ನಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister rajnath Singh) ದೆಹಲಿಯಿಂದ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ತುರ್ತು ಸಚಿವ ಸಂಪುಟ (Emergency Cabinet Meet) ಸಭೆಯನ್ನೂ ಕರೆದಿದ್ದಾರೆ.
ಹವಮಾನ ವೈಪರೀತ್ಯ ಹಿನ್ನೆಲೆ ಇಂಜಿನ್ ನಿಷ್ಕ್ರಿಯಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ದುರಂತ ಎಷ್ಟು ತೀವ್ರವಾಗಿತ್ತು ಎಂದರೆ ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಊಟಿ ಸ್ಟಾಫ್ ಕಾಲೇಜಿನಲ್ಲಿ ಸಿಡಿಎಸ್ ರಾವತ್ ಉಪನ್ಯಾಸ ಕಾರ್ಯಕ್ರಮವಿತ್ತು. ಇಲ್ಲಿಂದ ಸೂರೂರಿಗೆ ಹೋಗಿ ಅಲ್ಲಿಂದ ದೆಹಲಿಗೆ ಮರಳಬೇಕಿತ್ತು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು. ಯಾರನ್ನೆಲ್ಲಾ ಈವರೆಗೆ ರಕ್ಷಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹೆಲಿಕಾಪ್ಟರ್‌ನಲ್ಲಿ ಜನರಲ್ ರಾವತ್ ಕೂಡ ಇದ್ದರು ಎಂದು ಹೇಳಲಾಗುತ್ತಿದೆ.
ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರ ಪಟ್ಟಿ
ಎಂಐ-17 ಹೆಲಿಕಾಪ್ಟರ್ ಅನ್ನು ವಿವಿಐಪಿ ಚಲನೆಯಲ್ಲಿ ಬಳಸಲಾಗುತ್ತದೆ
ಸೇನಾ ಅಧಿಕಾರಿಗಳು ಹೋಗುವ ಹೆಲಿಕಾಪ್ಟರ್ ಟ್ವಿನ್ ಇಂಜಿನ್ ಹೊಂದಿದೆ. ಅಪಘಾತ ನಡೆದ ಎಂಐ 17ರಲ್ಲಿ ಪ್ರಧಾನಿ, ರಕ್ಷಣಾ ಸಚಿವರಂತಹ ವಿವಿಐಪಿಗಳೂ ಸವಾರಿ ಮಾಡುತ್ತಾರೆ. ಸೇನೆ ಮತ್ತು ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ವಿವಿಐಪಿಗಾಗಿ ಬಳಸುತ್ತವೆ. ಇದರಲ್ಲಿ ಎರಡು ಎಂಜಿನ್ ಗಳಿದ್ದು, ಯಾವುದೇ ಸಂದರ್ಭದಲ್ಲೂ ಮತ್ತೊಂದು ಎಂಜಿನ್ ಬಳಸಿ ಸರಿಯಾದ ಜಾಗಕ್ಕೆ ತರಬಹುದು ಎನ್ನಲಾಗಿದೆ.
ಹೆಲಿಕಾಪ್ಟರ್ ಪತನವನ್ನು ವಾಯುಪಡೆ ಖಚಿತಪಡಿಸಿದೆ
ಎಂಐ-17 ಹೆಲಿಕಾಪ್ಟರ್ ಪತನವಾಗಿರುವುದನ್ನು ಭಾರತೀಯ ವಾಯುಪಡೆ ಖಚಿತಪಡಿಸಿದೆ. ಈ ಅಪಘಾತದ ಬಗ್ಗೆ ವಾಯುಪಡೆ ಟ್ವೀಟ್‌ನಲ್ಲಿ ಮಾತ್ರ ಮಾಹಿತಿ ನೀಡಿದೆ. ಅದನ್ನು ಬಿಟ್ಟರೆ ಯಾವುದೇ ಮಾಹಿತಿ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ