Tejashwi Yadav Engagement: ಲಾಲೂ ಕಿರಿಯ ಪುತ್ರನ ನಿಶ್ಚಿತಾರ್ಥ, ಮಾಜಿ ಸಿಎಂ ಸೊಸೆಯಾಗುವಾಕೆ ಯಾರು ಗೊತ್ತಾ?

Published : Dec 08, 2021, 12:53 PM IST
Tejashwi Yadav Engagement: ಲಾಲೂ ಕಿರಿಯ ಪುತ್ರನ ನಿಶ್ಚಿತಾರ್ಥ, ಮಾಜಿ ಸಿಎಂ ಸೊಸೆಯಾಗುವಾಕೆ ಯಾರು ಗೊತ್ತಾ?

ಸಾರಾಂಶ

* ಬಿಹಾರ ಮಾಜಿ ಸಿಎಂ ಮನೆಯಲ್ಲಿ ಮದುವೆ ಕಾರ್ಯಕ್ರಮ * ತೇಜಸ್ವಿ ಯಾದವ್ ನಿಶ್ಚಿತಾರ್ಥ, ಶೀಘ್ರದಲ್ಲಢ ಮದುವೆ * ಲಾಲೂ ಯಾದವ್ ಮನೆ ಸೊಸೆಯಾಗುವಾಕೆ ಯಾರು ಗೊತ್ತಾ?

ಪಾಟ್ನಾ(ಡಿ.08): ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರ ವಿವಾಹವನ್ನು ದೃಢಪಟ್ಟಿದೆ. ಇಂದು ಅಥವಾ ನಾಳೆ ದೆಹಲಿಯಲ್ಲಿ ನಿಶ್ಚಿತಾರ್ಥ ನಡೆಯುವ ಸಾಧ್ಯತೆ ಇದೆ ಎಬ್ಬಲಾಗಿದೆ. ಲಾಲು ಇಡೀ ಕುಟುಂಬ ಸದ್ಯ ದೆಹಲಿಯಲ್ಲಿದೆ. ತೇಜಸ್ವಿ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿದ್ದು, ಶೀಘ್ರದಲ್ಲೇ ಅವರು ವಿವಾಹವಾಗಲಿದ್ದಾರೆ.

ತೇಜಸ್ವಿ ತೇಜ್ ಪ್ರತಾಪ್ ಪ್ರಸ್ತುತ ದೆಹಲಿಯಲ್ಲಿ ಲಾಲು ಜೊತೆಯಲ್ಲಿದ್ದಾರೆ. ತಾಯಿ ರಾಬ್ರಿ ದೇವಿ ಮತ್ತು ಸಹೋದರಿ ಮಿಸಾ ಭಾರತಿ ಕೂಡ ತಲುಪಿದ್ದಾರೆ. ನಿಶ್ಚಿತಾರ್ಥದಲ್ಲಿ 40-50 ಆಪ್ತ ಸಂಬಂಧಿಕರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ತೇಜಸ್ವಿ ನಿಶ್ಚಿತಾರ್ಥ ಯಾರೊಂದಿಗೆ ಮತ್ತು ಅವರ ವಧು ಯಾರು ಎಂಬುದು ಇಲ್ಲಿಯವರೆಗೂ ರಹಸ್ಯವಾಗಿಯೇ ಇತ್ತು. ಮೂಲಗಳನ್ನು ನಂಬುವುದಾದರೆ, ತೇಜಸ್ವಿ ಯಾದವ್ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಹುಡುಗಿ ಅವರ ಸ್ನೇಹಿತೆ ಎನ್ನಲಾಗಿದೆ. ತೇಜಸ್ವಿ ಹಲವು ವರ್ಷಗಳ ಗೆಳತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲಿದ್ದಾರೆ. ಮಾಹಿತಿಯ ಪ್ರಕಾರ, ಲಾಲು ಅವರ ಕಿರಿಯ ಸೊಸೆ ಮೂಲತಃ ಹರಿಯಾಣದವರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂದೂ ಹೇಳಲಾಗುತ್ತಿದೆ. ಸದ್ಯ ನಿಶ್ಚಿತಾರ್ಥಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಲಾಲು ಮನೆಯಲ್ಲಿ ಮತ್ತೆ ಮೊಳಗಲಿದೆ ಶಹನಾಯಿ

ಕಳೆದ ಹಲವು ದಿನಗಳಿಂದ ತೇಜಸ್ವಿ ಅವರ ಮದುವೆಯ ಬಗ್ಗೆ ಊಹಾಪೋಹಗಳು ಇದ್ದವು, ಆದರೆ ಅವರು 2020 ರ ಚುನಾವಣೆಯ ಬಳಿಕ ಹಾಗೂ ತಂದೆಗೆ ಜಾಮೀನು ಸಿಕ್ಕ ನಂತರ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸುವ ಸೂಚನೆ ನೀಡಿದ್ದರು. ತೇಜ್ ಪ್ರತಾಪ್ ಮದುವೆಯ ಸುದೀರ್ಘ ಗ್ಯಾಪ್ ನಂತರ ಇದೀಗ ಲಾಲು ಕುಟುಂಬದಲ್ಲಿ ಮತ್ತೆ ಶಹನಾಯಿ ಬಾರಿಸಲಿದೆ. ತೇಜಸ್ವಿಯವರ ಮದುವೆಗೆ ಸಂಬಂಧಿಸಿದಂತೆ ಲಾಲು ಮತ್ತು ರಾಬ್ರಿ ದೇವಿ ಅವರನ್ನೂ ಹಲವು ಬಾರಿ ಪ್ರಶ್ನಿಸಲಾಯಿತು, ಅವರು ಮುಂದೂಡುತ್ತಲೇ ಇದ್ದರು. ಇನ್ನು ಯಾದವ್ ಇದರ ಜವಾಬ್ದಾರಿ ತಮ್ಮ ತಾಯಿಗೆ ನೀಡಿದ್ದರೆಂಬುವುದು ಉಲ್ಲೇಖನೀಯ.

ತೇಜಸ್ವಿ ಬಗ್ಗೆ ಕೆಲ ಮಾಹಿತಿ

ಲಾಲು ಯಾದವ್ ಅವರಿಗೆ 7 ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ತೇಜಸ್ವಿ ಯಾದವ್ (32 ವರ್ಷ) ಅತ್ಯಂತ ಕಿರಿಯ. ಆದಾಗ್ಯೂ, ತೇಜಸ್ವಿ ಅವರನ್ನು ಲಾಲು ಯಾದವ್ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಲಾಲು ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ತೇಜಸ್ವಿ ಬಿಹಾರದ ವಿರೋಧ ಪಕ್ಷದ ನಾಯಕನೂ ಆಗಿದ್ದಾರೆ. ತೇಜಸ್ವಿ ರಾಘೋಪುರ ಕ್ಷೇತ್ರದಿಂದ ಶಾಸಕರಾಗಿದ್ದಾರೆ ಮತ್ತು 2015 ರಿಂದ 2017 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ತೇಜಸ್ವಿ ಅವರು ಕ್ರಿಕೆಟ್‌ ಕ್ಷೇತ್ರದಲ್ಲೂ ಸಾಧನೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಆಡಿದ್ದಾರೆ. ಅಲ್ಲದೇ ಜಾರ್ಖಂಡ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು

ಹಿರಿಯ ಸಹೋದರ ತೇಜ್ ಪ್ರತಾಪ್ ವಿಚ್ಛೇದನ ಪಡೆದರು

ತೇಜಸ್ವಿಯವರ ಹಿರಿಯ ಸಹೋದರ ತೇಜ್ ಪ್ರತಾಪ್ 2018 ರಲ್ಲಿ ವಿವಾಹವಾಗಿದ್ದರು. ಅವರು ದರೋಗಾ ರೈ ಅವರ ಮೊಮ್ಮಗಳು ಮತ್ತು ಚಂದ್ರಿಕಾ ರೈ ಅವರ ಮಗಳು ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ತೇಜ್ ಪ್ರತಾಪ್ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ಪರಸ್ಪರ ಗಂಭೀರ ಆರೋಪ ಮಾಡಿದ್ದರು. ಹೈವೋಲ್ಟೇಜ್ ನಾಟಕದ ನಂತರ ಇಬ್ಬರೂ ಈಗ ವಿಚ್ಛೇದನ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌