IAF ಚೆನ್ನೈ ಏರ್‌ಶೋನ ಭೀಕರ ಕಾಲ್ತುಳಿತಕ್ಕೆ ನಾಲ್ವರು ಸಾವು, 96 ಮಂದಿಗೆ ಗಾಯ

By Chethan KumarFirst Published Oct 6, 2024, 10:24 PM IST
Highlights

ಭಾರತೀಯ ವಾಯುಸೇನಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಚೆನ್ನೈ ಏರ್ ಶೋದಲ್ಲಿ ಭಾರಿ ಅವಘಡ ಸಂಭವಿಸಿದೆ. ಕಳಪೆ ಜನ ದಟ್ಟಣೆ ನಿರ್ವಹಣೆ ಹಾಗೂ ಗೊಂದಲದಿಂದ ಭಾರಿ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದರೆ, 96ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. 

ಚೆನ್ನೈ(ಅ.06) ವಾಯುಸೇನಾ ದಿನಾಚರಣೆ ಅಂಗವಾಗಿ ಚೆನ್ನೈನ ಮರೀನಾ ಬೀಚ್ ಬಳಿ ಭಾರತೀಯ ವಾಯುಸೇನೇ ಏರ್ ಶೋ ಆಯೋಜಿಸಿತ್ತು. ಆದರೆ ಪ್ರೇಕ್ಷಕರ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ ಕಾಲ್ತುಳಿತ ಸಂಭವಿಸಿದೆ. ಭೀಕರ ಕಾಲ್ತುಳಿತದಲ್ಲಿ ನಾಲ್ವರು ಮೃತಪಟ್ಟಿದ್ದರೆ, 96ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಚೆನ್ನೈ ಏರ್‌ಶೋಗೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಆದರೆ ಸರಿಯಾದ ನಿರ್ವಹಣೆ, ಪೂರ್ವ ಸಿದ್ಧತೆ ಇಲ್ಲದ ಕಾರಣ ಗೊಂದಲದ ಗೂಡಾಗಿತ್ತು. ಇದು ಕಾಲ್ತುಳಿತಕ್ಕೆ ಕಾರಣವಾಗಿದೆ. 

ಮೃತರನ್ನು ಶ್ರೀನಿವಾಸನ್ (48), ಕಾರ್ತಿಕೇಯನ್ (34), ಜಾನ್ ಬಾಬು (56) ಮತ್ತು ದಿನೇಶ್ ಎಂದು ಗುರುತಿಸಲಾಗಿದೆ. ಇತ್ತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರ ಆರೋಗ್ಯ ಪರಿತ್ಥಿತಿ ಗಂಭೀರವಾಗಿದೆ. ಭಾರತೀಯ ವಾಯುಸೇನೆಯ 92ನೇ ವಾರ್ಷಿಕೋತ್ಸವ ಪ್ರಯುಕ್ತ ಈ ಏರ್ ಶೋ ಆಯೋಜಿಸಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಬರೋಬ್ಬರಿ 13 ಲಕ್ಷ ಮಂದಿ ಆಗಮಿಸಿದ್ದರು. ತಮಿಳನಾಡು ಸೇರಿದಂತೆ ಇತರ ರಾಜ್ಯಗಳಿಂದಲೂ ಜನರು ಆಗಮಿಸಿದ್ದಾರೆ. ಕಾರು,ಮೆಟ್ರೋ, ಬಸ್ ಸೇರಿದಂತೆ ವಿವಿದ ಸಾರಿಗೆ ವ್ಯವಸ್ಥೆಗಳ ಮೂಲಕ ಮರೀನಾ ಬೀಚ್‌ ಬಳಿ ಏರ್ ಶೋ ಬಳಿ ಆಗಮಿಸಿದ್ದಾರೆ. ಅತೀ ಹೆಚ್ಚು ಮಂದಿ ಏರ್ ಶೋಗೆ ಆಗಮಿಸಿದ ಹೆಗ್ಗಳಿಕೆಗೆ ಚೆನ್ನೈ ಏರ್ ಶೋ ಪಾತ್ರವಾಗಿತ್ತು. ಇಷ್ಟೇ ಅಲ್ಲ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲಾಗಿತ್ತು.  

Latest Videos

ಏರ್‌ ಶೋದಲ್ಲಿ ಫೈಟರ್ ಜೆಟ್ ಕ್ರ್ಯಾಶ್‌: ಇಬ್ಬರು ಪೈಲಟ್‌ಗಳು ಸಾವು: ಕೊನೆ ಕ್ಷಣದ ವೀಡಿಯೋ 

ಬೆಳಗ್ಗೆ 7 ಗಂಟೆ ವೇಳೆ ಲಕ್ಷ ಲಕ್ಷ ಮಂದಿ ಜಮಾಯಿಸಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಏರ್ ಶೋ ಮುಕ್ತಾಯವಾಗಿತ್ತು.ಈ ವೇಳೆ ಜನರು ಏಕಾಏಕಿ ನಿರ್ಗಮಿಸಲು ಮುಂದಾಗಿದ್ದಾರೆ. ಕಿಕ್ಕಿರಿದು ತುಂಬಿದ ಜನಸಂದಣಿಯಲ್ಲಿ ಕಾಲ್ತುಳಿತ ಸಂಭವಿಸಿದೆ. ಇದು ದುರಂತಕ್ಕೆ ಕಾರಣವಾಗಿದೆ. ಬರೋಬ್ಬರಿ 21 ವರ್ಷದ ಬಳಿಕ ಚೆನ್ನೈನಲ್ಲಿ ವಾಯುಸೇನೆಯ ಏರ್ ಶೋ ಆಯೋಜನೆಗೊಂಡಿತ್ತು. ಆದರೆ 2 ದಶಕಗಳ ಬಳಿಕ ಆಯೋಜನೆ ಗೊಂಡ ಏರ್ ಶೋನಲ್ಲಿ ಭಾರಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲದ ಕಾರಣ ಹಲವರು ಉರಿ ಬಿಸಿಸಿನಲ್ಲಿ ಬಳಲಿ ಅಸ್ವಸ್ಥರಾಗಿದ್ದಾರೆ.

ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಜನರು ಹೊರಹೋಗಲು ಯತ್ನಿಸಿದ್ದಾರೆ. ಧಾವಂತದಲ್ಲಿ ಕಾಲ್ತುಳಿತ ನಡೆದಿದೆ. ಪೊಲೀಸರು ಲಕ್ಷ ಲಕ್ಷ ಜನಸಂದಣಿ ನಿಯಂತ್ರಿಸಲು ವಿಫಲರಾಗಿದ್ದಾರೆ. ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿರಲಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ವೀಕ್ಷಕರ ನಿಯಂತ್ರಣಕ್ಕೆ ಯಾವುದೇ ವ್ಯವಸ್ಥೆ ಇಲ್ಲದಿರುವುದೇ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಫೈನಲ್‌ ಮ್ಯಾಚ್‌ಗೂ ಮುನ್ನ ಮೋದಿ ಸ್ಟೇಡಿಯಂನಲ್ಲಿ ಅತ್ಯಾಕರ್ಷಕ ಏರ್‌ಶೋ: ಬೆರಗಾದ ಪ್ರೇಕ್ಷಕರು

click me!