ಹೆಣ್ಣುಮಕ್ಕಳ ಮೇಲೆ ಆ್ಯಸಿಡ್ ದಾಳಿ ನಡೆಸಿದ ಹಲವು ಘಟನೆಗಳು ವರದಿಯಾಗಿದೆ. ಇದೀಗ ಮೋಸ ಮಾಡಿದ್ದು ಮಾತ್ರವಲ್ಲ, ಬ್ಲಾಕ್‌ಮೇಲ್ ಮಾಡುತ್ತಿದ್ದ ಬಾಯ್‌ಫ್ರೆಂಡ್ ಮೇಲೆ ಗೆಳತಿ ಆ್ಯಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.
ಲಖನೌ(ಅ.06) ಮದುವೆಯಾಗುವುದಾಗಿ ನಂಬಿಸಿ ಇದೀಗ ಹಣ ಸೇರಿದಂತೆ ಇತರ ಕಾರಣ ಮುಂದಿಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದ ಬಾಯ್‌ಫ್ರೆಂಡ್, ಗೆಳತಿ ಆ್ಯಸಿಡಿ ಎರಚಿದ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ. ಘಟನೆಯಲ್ಲಿ ಪ್ರಿಯಕರ ಗಂಭೀರ ಸುಟ್ಟಗಾಯಗಳಿಂದ ಬಳಲಿದ್ದಾನೆ. ಆದರೆ ಆ್ಯಸಿಡ್ ದಾಳಿ ನಡೆದ ಬೆನ್ನಲ್ಲೇ ಪ್ರಿಯಕರ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿವೇಕ್ ಅನ್ನೋ ಯುವಕನ ಜೊತೆ ಮಹಿಳೆಗೆ ಪ್ರೀತಿ ಶುರುವಾಗಿದೆ. ಆದರೆ ಮದುವೆಯಾಗುವ ವಿಚಾರ ಬಂದಾಗ ಮುಂದೂಡಿಕೆ ಮಾಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಇದೀಗ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಕಳೆದ 6 ತಿಂಗಳಿಂದ ಈತನ ಕಾಟಕ್ಕೆ ಬೇಸತ್ತಿದ್ದೇನೆ. ಹೀಗಾಗಿ ಆತನ ಮುಖದ ಮೇಲೆ ಆ್ಯಸಿಡ್ ದಾಳಿ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ವಿವಾಹಿತ ಪ್ರಿಯತಮೆ ಬಾಗಿಲು ತೆರೆಯದ್ದಕ್ಕೆ ಆ್ಯಸಿಡ್ ಎರಚಿದ ಕಿರಾತಕ!
ಈ ಘಟನೆ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಬೆಳಗ್ಗೆ ಬೇಗನೆ ರೆಸ್ಟೋರೆಂಟ್ ಸಮೀಪಕ್ಕೆ ಆಗಮಿಸಿದ ಮಹಿಳೆ, ಕಾಯುತ್ತಾ ಕುಳಿತಿದ್ದಾಳೆ. ಈ ವೇಳೆ ರೆಸ್ಟೋರೆಂಟ್ ಆಗಷ್ಟೆ ತೆರೆಯಲಾಗಿತ್ತು. ರೆಸ್ಟೋರೆಂಟ್ ಕಾರ್ಯಾರಂಬಿಸುತ್ತಿದ್ದಂತೆ ಮಹಿಳೆ ಒಳಗೆ ಬಂದಿದ್ದಾರೆ. 5 ನಿಮಿಷ ಬಳಿಕ ವ್ಯಕ್ತಿಯೊಬ್ಬರು ಆಗಮಿಸಿದ್ದಾರೆ. ಇಬ್ಬರು ಕುಳಿತುಕೊಂಡು ಮಾತನಾಡಲು ಆರಂಭಿಸಿದ್ದಾರೆ. ಈ ವೇಳೆ ದೋಸೆ ಆರ್ಡರ್ ಮಾಡಿದ್ದಾರೆ. ಆಹಾರ ಸೇವಿಸುತ್ತಿದ್ದಂತೆ ಮಹಿಳೆ ಏಕಾಏಕಿ ಬಾಟಲಿ ತೆಗೆದು ವ್ಯಕ್ತಿಯ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ.
ಆ್ಯಸಿಡ್ ದಾಳಿಯಿಂದ ವ್ಯಕ್ತಿಗೆ ಸುಟ್ಟ ಗಾಯಗಳಾಗಿವೆ. ಇತ್ತ ವ್ಯಕ್ತಿ ಶರ್ಟು ಬಿಚ್ಚಿ ಚೀರಾಡುತ್ತಾ ಓಡಿ ಹೋಗಿದ್ದಾನೆ. ರೆಸ್ಟೋರೆಂಟ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುವ ವೇಳೆ ಆ್ಯಸಿಡ್ ದಾಳಿಯಿಂದ ಸುಟ್ಟ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಮಹಿಳೆ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಿಳೆ ಹಾಗೂ ವಿವೇಕ್ ಅನ್ನೋ ವ್ಯಕ್ತಿ ಕೆಲ ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ಕೆಲ ಭಿನ್ನಾಭಿಪ್ರಾಯ ಎದುರಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ಆರೋಪದ ಪ್ರಕಾರ, ವಿವೇಕ್ ವಂಚಿಸಿದ್ದಾನೆ. ಕೆಲ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಅನ್ನೋ ಆರೋಪವಿದೆ. ವಿವೇಕ್ ಹಣಕ್ಕಾಗಿ ಹಲವು ಬಾರಿ ಬ್ಲಾಕ್‌ಮೇಲ್ ಮಾಡಿರುವ ಮಾಹಿತಿಯನ್ನು ಮಹಿಳೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿ ವಿವೇಕ್ ಪರಾರಿಯಾಗಿದ್ದಾನೆ. ಆತನ ಹುಡುಕಾಟ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳ ಪರೀಶೀಲನೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ಮನೆಯಲ್ಲಿ ಹೆಂಡ್ತಿ ಗಲಾಟೆ ಮಾಡ್ತಾಳೆ ಅಂತಾ, ಮುಖಕ್ಕೆ ಆಸಿಡ್ ಎರಚಿದ ಗಂಡ!