ಜೈಲಿನಲ್ಲಿ ಉಗ್ರರ ವಾರ್ಡ್‌ಗೆ ಹಾಕಿ ಪ್ರತಿ ದಿನ 17 ಗಂಟೆ ಟಾರ್ಚರ್, ಕರಾಳ ಅಧ್ಯಾಯ ತೆರೆದಿಟ್ಟ ಶ್ರೀಶಾಂತ್!

By Suvarna News  |  First Published Jul 2, 2020, 8:12 PM IST

ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಜೈಲು ಶಿಕ್ಷೆ, ಬಳಿಕ ಕ್ರಿಕೆಟ್‌ಗೆ ನಿಷೇಧ ಶಿಕ್ಷೆಗೆ ಗುರಿಯಾದ ಕ್ರಿಕೆಟಿಗ. ಶ್ರೀ ಮೇಲಿನ ಆರೋಪಗಳಿಗೆ ಕೋರ್ಟ್ ಕ್ಲಿನ್ ಚಿಟ್ ನೀಡಿದೆ. ಅಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಲಾಗಿದೆ. ಇದೀಗ ಮುಂದಿನ ತಿಂಗಳು ಶ್ರೀ ನಿಷೇಧ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಶ್ರೀಶಾಂತ್ ತಮ್ಮ ಜೈಲುವಾಸದ ಕಠಿಣ ದಿನಗಳನ್ನು ತೆರದಿಟ್ಟಿದ್ದಾರೆ.


ಕೊಚ್ಚಿ(ಜು.02): ಅದು 2013ರ ಐಪಿಎಲ್ ಟೂರ್ನಿ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ವೇಗಿ ಶ್ರೀಶಾಂತ್ ಎಲ್ಲಾ ಕ್ರಿಕೆಟಿಗರಂತೆ ಪಂದ್ಯ ಬಳಿಕ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ತಡರಾತ್ರಿ ಹೊಟೆಲ್ ರೂಂಗೆ ತೆರಳಿ ಮಲಗಿದ್ದಾರೆ. ಮುಂಜಾನೆ 5 ಗಂಟೆ ಸಮಯಕ್ಕೆ ಶ್ರೀಶಾಂತ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಶ್ರೀಶಾಂತ್ ಜೈಲು ಸೇರಿದ್ದರು. ಜೈಲಿನಲ್ಲಿ ಶ್ರೀಶಾಂತ್ ಅನುಭವಿಸಿದ ಯಾತನೆ ಎಲ್ಲೂ ಸುದ್ದಿಯಾಗಿಲ್ಲ. ಕಾರಣ ಶ್ರೀ ಹೆಚ್ಚಾಗಿ ಜೈಲುವಾಸ ದಿನಗಳ ಕುರಿತು ಹೇಳಿಕೊಂಡಿಲ್ಲ. ಇದೀಗ ಶ್ರೀಶಾಂತ್ ತಮ್ಮ ಕರಾಳ ಅಧ್ಯಾಯವನ್ನು ನೋವಿನಿಂದ ತೆರೆದಿಟ್ಟಿದ್ದಾರೆ.

ಆಗಸ್ಟ್‌ಗೆ ಮುಗಿಯಲಿದೆ ನಿಷೇಧ; ಕ್ರಿಕೆಟ್‌ಗೆ ಮರಳಲು ಶ್ರೀಶಾಂತ್ ಅಭ್ಯಾಸ ಶುರು!.

Tap to resize

Latest Videos

undefined

ಫಿಕ್ಸಿಂಗ್ ಆರೋಪ, ಅರಸ್ಟ್, ಬಳಿಕ ಕೋರ್ಟ್, ಜಾಮೀನು, ನಿಷೇಧ, ಟೀಕೆ, ನಿಂದನೆ ಎಲ್ಲವನ್ನು ಎದುರಿಸದ ಶ್ರೀಶಾಂತ್ ಇದೀಗ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ.   ಆಗಸ್ಟ್ ತಿಂಗಳಲ್ಲಿ ಶ್ರೀಶಾಂತ್ ಮೇಲಿನ ನಿಷೇಧದ ಶಿಕ್ಷೆ ಅಂತ್ಯವಾಗಲಿದೆ.  ಇದರ ಬೆನ್ನಲ್ಲೇ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಂಧಿಸಿದ ಪೊಲೀಸರು ತನ್ನನ್ನು ಜೈಲಿನಲ್ಲಿ ಉಗ್ರರಿರುವ ವಾರ್ಡ್‌ಗೆ ಹಾಕಲಾಯಿತು. ಪ್ರತಿ ದಿನ 16 ರಿಂದ 17 ಗಂಟೆ ಟಾರ್ಚರ್ ನೀಡಿದರು ಎಂದು ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.

ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!..

ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ನಾನು ಜೈಲು ಸೇರಿದ್ದೆ. ಭಯೋತ್ಪಾದಕರನ್ನು ನೋಡುವಂತೆ ನನ್ನನ್ನು ನೋಡಿಕೊಳ್ಳಲಾಯಿತು. ನನಗೆ ನನ್ನ ಪೋಷಕರು, ಕುಟುಂಬದ್ದೆ ಚಿಂತೆಯಾಗಿತ್ತು. ಕೆಲ ದಿನಗಳ ಬಳಿಕ ನನ್ನ ಸಹೋದರ ಜೈಲಿಗೆ ಆಗಮಿಸಿದ್ದ. ನನ್ನ ಕುಟುಂಬದ ಮಾಹಿತಿ ಕೇಳಿದಾಗ ಕೊಂಚ ಸಮಾಧಾನ ಆಗಿತ್ತು. ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತ್ತು. ಇದು ನನ್ನಲ್ಲಿ ಆತ್ಮವಿಶ್ವಾಸ ತುಂಬಿತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ.

ಆತ್ಮಹತ್ಯೆಗೂ ಯತ್ನಿಸಿದ್ದೆ. ಆದರೆ ಕುಟುಂಬದವರನ್ನು ಆಲೋಚಿಸಿ ನಿರ್ಧಾರದಿಂದ ಹಿಂದೆ ಸರಿದೆ. ನನ್ನ ಬದುಕಿನ ಕರಾಳ ಅಧ್ಯಾಯವನ್ನ ನೆನಪಿಸಿಕೊಳ್ಳಲೂ ಬಯಸುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

ಅದೃಷ್ಟವಶಾತ್ ನಾನು ಜೈಲಿಗೆ ಹೋಗುವ ಹಾಗೂ ಜೈಲಿನಿಂದ ಹೊರಬರುವ ಫೋಟೋವನ್ನು ಯಾರು ತೆಗಿದಿಲ್ಲ. ಕಾರಣ ಈ ಫೋಟೋ ನನ್ನ ಮಕ್ಕಳು ನೋಡಿದರೆ ಅವರ ಹಾಗೂ ನನ್ನ ಪರಿಸ್ಥಿತಿ ಊಹಿಸಿಕೊಳ್ಳಿ ಎಂದು ಶ್ರೀಶಾಂತ್ ಹೇಳಿದ್ದಾರೆ. 

click me!