ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ; ಆರೋಪಗಳಿಗೆ CRPF ಪ್ರತಿಕ್ರಿಯೆ!

By Suvarna NewsFirst Published 2, Jul 2020, 5:17 PM
Highlights

ಉಗ್ರರ ಸದ್ದಡಗಿಸುತ್ತಿರುವ ಸೇನೆ ಪ್ರತಿ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಚ್ ಆಪರೇಶನ್ ನಡೆಸುತ್ತಿದೆ. ಕುಪ್ವಾರದಲ್ಲಿ CRPF ನಡೆಸಿದ ಕಾರ್ಯಚರಣೆ ವೇಳೆ ಮೊಮ್ಮಗನೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ 65ರ ವೃದ್ಧ ಗುಂಡಿಗೆ ಬಲಿಯಾಗಿದ್ದರು. ಈ ಘಟನೆ ಬಳಿಕ CRPF ವಿರುದ್ಧ ಆರೋಪಗಳು ಕೇಳಿ ಬಂದಿದೆ. ಇದೀಗ CRPF ಆರೋಪಗಳಿಗೆ ಪ್ರತಿಕ್ರಿಯೆ ನೀಡಿದೆ.

ಸೊಪೊರ್(ಜು.02): ಭಾರತೀಯ ಸೇನೆ, CRPF ಹಾಗೂ ಜಮ್ಮ-ಕಾಶ್ಮೀರ ಪೊಲೀಸ್ ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಚರಣೆ ಚುರುಕುಗೊಳಿಸಿದೆ. ಕುಪ್ವಾರದಲ್ಲಿ CRPF ನಡೆಸಿದ ಕಾರ್ಯಚರಣೆ ಇದೀಗ ಟೀಕಿಗೆ ಗುರಿಯಾಗಿದೆ. ನಾಗರೀಕರನ್ನು ಗುರಿಯಾಗಿಸಿ CRPF ದಾಳಿ ಮಾಡುತ್ತಿದೆ ಅನ್ನೋ ಆರೋಪಕ್ಕೆ ಇದೀಗ CRPF ಪ್ರತಿಕ್ರಿಯೆ ನೀಡಿದೆ. ಈ ಆರೋಪಗಳಲ್ಲಿ ಸತ್ಯವಿಲ್ಲ. ಭಾರತದ ನಾಗರೀಕರ ರಕ್ಷಣೆಗಾಗಿಯೇ CRPF ಹೋರಾಡುತ್ತಿದೆ ಎಂದಿದೆ.

ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ, ತಪ್ಪಿತು ಮತ್ತೊಂದು ದುರಂತ!..

ಕುಪ್ವಾರದಲ್ಲಿ CRPF ಉಗ್ರರ ವಿರುದ್ಧ ಸರ್ಚ್ ಆಪರೇಶನ್ ನಡೆಸಿದೆ. ಈ ವೇಳೆ ಉಗ್ರರು CRPF ಮೇಲೆ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ CRPF ಗುಂಡಿನ ಮೂಲಕವೇ ಉತ್ತರ ನೀಡಿದೆ.  ಇದೇ ವೇಳೆ ಶ್ರೀನಗರದಿಂದ ಹಂದ್ವಾರಗೆ ಮೊಮ್ಮಗನೊಂದಿಗೆ ಕಾರಿನ ಮೂಲಕ ತೆರಳುತ್ತಿದ್ದ 65ರ ವೃದ್ಧ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ನೆಲಕ್ಕುರಳಿದ ಅಜ್ಜನ ಮೃತದೇಹದ ಮೇಲೆ ಮೊಮ್ಮಗ ಕುಳಿತ ಅಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರೊಂದಿಗೆ CRPF ನಾಗೀರಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಅನ್ನೋ ಆರೋಪ, ಟೀಕೆ ಕೇಳಿ ಬಂದಿದೆ.

ಗಡಿಯಲ್ಲಿ ಯುದ್ಧದ ಕಾರ್ಮೋಡ: ಭಾರತದ 30,000 ಯೋಧರು, ಟ್ಯಾಂಕ್‌ಗಳು ಗಾಲ್ವಾನ್‌ಗೆ!.

ಆರೋಪಗಳಿಗೆ ಪ್ರತಿಕ್ರಿಯಿಸಿದ CRPF ಎಸ್‌ಎಚ್ಒ ಅಜೀಮ್ ಖಾನ್, ನಾಗರೀಕರ ರಕ್ಷಣೆಗಾಗಿ CRPF ಕಾರ್ಯಚರಣೆ ನಡೆಸುತ್ತಿದೆ. ಈ ಘಟನೆ ದುರದೃಷ್ಟಕರ. ಭಯೋತ್ಪಾದಕರ ಗುಂಡು ನಾಗರೀಕನ ದೇಹದೊಳಕ್ಕೆ ಹೊಕ್ಕಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಪ್ರತಿಯೊಬ್ಬರ ನಾಗರೀಕರು ಯಾವುದೇ ಭಯವಿಲ್ಲದೆ, ಆತಂಕವಿಲ್ಲದೆ ಇರುವ ವಾತಾವರಣ ನಿರ್ಮಿಸಲು CRPF ಪ್ರಯತ್ನಿಸುತ್ತಿದೆ. ಈಗ ಕೇಳಿ ಬಂದ ಆರೋಪಗಳು ಸತ್ಯಕ್ಕೆ ದೂರ ಎಂದು CRPF ಹೇಳಿದೆ.

Read Exclusive COVID-19 Coronavirus News updates, from Karnataka, India and World at Asianet News Kannada.

Last Updated 2, Jul 2020, 5:28 PM