ಬಾಯಾರಿದಾಗ ಮೂತ್ರ ಕುಡಿದೆ, ಕೈ ಕಾಲು ನೆಕ್ಕಿದೆ: ಲಿಫ್ಟಲ್ಲಿ 42 ಗಂಟೆ ನರಕ ಯಾತನೆ ಬಿಚ್ಚಿಟ್ಟ ವ್ಯಕ್ತಿ!

By Mahmad Rafik  |  First Published Jul 16, 2024, 3:33 PM IST

ಮೊದಲನೆ ಮಹಡಿಗೆ ಹೋಗಬೇಕೆಂದು ಲಿಫ್ಟ್‌ ಹತ್ತಿದ್ದರೂ ಅದು ಕೆಳಗೆ ಬಂದು ನಂತರ ತೆರೆದುಕೊಳ್ಳಲಿಲ್ಲ. ಈ ವೇಳೆ ಸೈರೆನ್ ಒತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ


ತಿರುವನಂತಪುರಂ: ಲಿಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿ ರವೀಂದ್ರ ನಾಯರ್, 42 ಗಂಟೆಗಳ ಕಾಲ ನೀರು, ಬೆಳಕು, ಆಹಾರವಿಲ್ಲದೇ ಕಳೆದ ದಿನಗಳನ್ನು ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದಾರೆ. ಬದುಕುತ್ತೇನೆ ಎಂಬ ವಿಶ್ವಾಸ ಮಾತ್ರ ನನ್ನ ಜೊತೆಯಲ್ಲಿತ್ತು ಎಂದಿದ್ದಾರೆ. ಹಸಿವು ಆದಾಗ ನನ್ನ ಮೂತ್ರವನ್ನೇ ಕುಡಿದೆ. ಹಸಿವು ಆದಾಗ ನನ್ನ ಕೈ ಕಾಲುಗಳನ್ನು ನೆಕ್ಕಿದೆ ಎಂಬ ಆಘಾತಕಾರಿ ವಿಷಯವನ್ನು ರವೀಂದ್ರ ನಾಯರ್ ತಿಳಿಸಿದ್ದಾರೆ. ಲಿಫ್ಟ್‌ನಲ್ಲಿ ಸಿಲುಕಿದ ಬಳಿಕ ಅಲ್ಲಿರುವ ತುರ್ತು ಸಂಖ್ಯೆಗಳಿಗೆಲ್ಲಾ ಕರೆ ಮಾಡಿದೆ. ಯಾರೂ ಉತ್ತರಿಸಲಿಲ್ಲ. ಅಲಾರಾಂ ಮಾಡಿದೆ. ಆಗಲೂ ಯಾರೂ ಬರಲಿಲ್ಲ. ನಾನು ಸಿಕ್ಕಿಬಿದ್ದ ದಿನ 2ನೇ ಶನಿವಾರವಾಗಿತ್ತು. ಭಾನುವಾರ ಬೇರೆ ರಜೆ ಇತ್ತು. ಹೀಗಾಗಿ ಕಾಯುತ್ತಾ ಕೂತು ಬಿಟ್ಟೆ. ಸಮಯ ಎಷ್ಟಾಗಿದೆ ಎಂದೂ ಗೊತ್ತಾಗಲಿಲ್ಲ. ಸೋಮವಾರ ಬೆಳಗ್ಗೆ ಆಪರೇಟರ್ ಬಂದರು. ಅಲಾರಾಂ ಬಟನ್ ಒತ್ತಿದೆ. ಬಳಿಕ ಆಪರೇಟರ್‌ ಜತೆಗೂಡಿ ಬಾಗಿಲನ್ನು ತೆರೆದೆವು. ಜಿಗಿದು ಹೊರಬಂದೆ ಎಂದು ರವೀಂದ್ರ ನಾಯರ್ ತಿಳಿಸಿದ್ದಾರೆ. 

ಕೇರಳದ ಉಳ್ಳೂರಿನ ನಿವಾಸಿ ರವೀಂದ್ರ ನಾಯರ್, ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದರು. ಮೊದಲನೆ ಮಹಡಿಗೆ ಹೋಗಬೇಕೆಂದು ಲಿಫ್ಟ್‌ ಹತ್ತಿದ್ದರೂ ಅದು ಕೆಳಗೆ ಬಂದು ನಂತರ ತೆರೆದುಕೊಳ್ಳಲಿಲ್ಲ. ಈ ವೇಳೆ ಸೈರೆನ್ ಒತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ.

Latest Videos

undefined

ತನ್ನ ಥೈಲ್ಯಾಂಡ್ ಟ್ರಿಪ್ ಬಗ್ಗೆ ಪತ್ನಿಗೆ ಗೊತ್ತಾಗುತ್ತೆ ಅಂತ ಪಾಸ್ಪೋರ್ಟ್ ಪೇಜ್ ಹರಿದ ವ್ಯಕ್ತಿಯ ಬಂಧನ

ಲಿಫ್ಟ್‌ನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ರವೀಂದ್ರ ನಾಯರ್ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದರಿಂದ ಯಾರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸೋಮವಾರ ಆಸ್ಪತ್ರೆ ಸಿಬ್ಬಂದಿ ಬಂದಾಗ ಲಿಫ್ಟ್‌ನಲ್ಲಿ ಸಿಲುಕಿರುವ ವಿಷಯ ತಿಳಿದ ನಂತರ ತಕ್ಷಣ ರಕ್ಷಣೆ ಮಾಡಲಾಗಿದೆ. ಎರಡು ದಿನ ಲಿಫ್ಟ್‌ ನಲ್ಲಿ ಸಿಲುಕಿದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಈ ನಡುವೆ, ನಾಯ‌ರ್ ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಕುಟುಂಬ ಭಾನುವಾರ ರಾತ್ರಿ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನೂ ದಾಖಲಿಸಿತು. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪ ಹೊರಿಸಿ ಇಬ್ಬರು ಲಿಫ್ಟ್ ಆಪರೇಟರ್ ಗಳು ಸೇರಿ ಮೂವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಯಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. 

ಇನ್ಮೇಲೆ ಆನ್‌ಲೈನ್‌ನಲ್ಲಿ ಎಣ್ಣೆನೂ ಆರ್ಡರ್‌ ಮಾಡ್ಬಹುದು: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಮನೆ ಬಾಗಿಲಿಗೆ ಬರಲಿದೆ ಅಲ್ಕೋಹಾಲ್

click me!