ನನಗೆ ನನ್ನ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ: ಭಾವುಕರಾದ ಕೇಂದ್ರ ಸಚಿವರು

Published : Dec 25, 2022, 08:40 PM IST
ನನಗೆ ನನ್ನ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ: ಭಾವುಕರಾದ ಕೇಂದ್ರ ಸಚಿವರು

ಸಾರಾಂಶ

ಒಬ್ಬ ಕುಡುಕ ಅಧಿಕಾರಿಯ ಜೊತೆ ಮದುವೆ ಮಾಡಿಸುವುದಕ್ಕಿಂತ ನಿಮ್ಮ ಮಗಳನ್ನು ಓರ್ವ ಮದ್ಯಪಾನದ ವ್ಯಸನ ಇಲ್ಲದ ಆಟೋ ಚಾಲಕನೊಂದಿಗೂ, ಕೂಲಿ ಕಾರ್ಮಿಕನೊಂದಿಗೋ ವಿವಾಹ ಮಾಡಿ, ಅವರು ನಿಮ್ಮ ಮಗಳಿಗೆ ಒಳ್ಳೆಯ ಪತಿ ಎಂದು ಸಾಬೀತುಪಡಿಸುತ್ತಾರೆ ಎಂದು  ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ರಾಜ್ಯ ಸಚಿವ  ಕೌಶಲ್ ಕಿಶೋರ್ ಅವರು ಜನರಲ್ಲಿ ಮನವಿ ಮಾಡಿದರು.

ಸುಲ್ತಾನ್‌ಪುರ: ಒಬ್ಬ ಕುಡುಕ ಅಧಿಕಾರಿಯ ಜೊತೆ ಮದುವೆ ಮಾಡಿಸುವುದಕ್ಕಿಂತ ನಿಮ್ಮ ಮಗಳನ್ನು ಓರ್ವ ಮದ್ಯಪಾನದ ವ್ಯಸನ ಇಲ್ಲದ ಆಟೋ ಚಾಲಕನೊಂದಿಗೂ, ಕೂಲಿ ಕಾರ್ಮಿಕನೊಂದಿಗೋ ವಿವಾಹ ಮಾಡಿ, ಅವರು ನಿಮ್ಮ ಮಗಳಿಗೆ ಒಳ್ಳೆಯ ಪತಿ ಎಂದು ಸಾಬೀತುಪಡಿಸುತ್ತಾರೆ. ಶ್ರೀಮಂತಿಕೆ ಸ್ಥಾನಮಾನ ನೋಡಿ ನಿಮ್ಮ ಸಹೋದರಿ ಅಥವಾ ಪುತ್ರಿಯನ್ನು ಮದ್ಯವ್ಯಸನಿ ಜೊತೆ ವಿವಾಹ ಮಾಡಬೇಡಿ ಎಂದು  ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ರಾಜ್ಯ ಸಚಿವ  ಕೌಶಲ್ ಕಿಶೋರ್ ಅವರು ಜನರಲ್ಲಿ ಮನವಿ ಮಾಡಿದರು. ಉತ್ತರಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ಮದ್ಯವ್ಯಸನ ನಿರ್ಮೂಲನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ. ನಾನು ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮದ್ಯ ವ್ಯಸನಕ್ಕೊಳಗಾದ ಮಗನ ಜೀವ ಉಳಿಸಲು ಸಾಧ್ಯವಾಗದಿದ್ದ ಮೇಲೆ ಸಾಮಾನ್ಯ ಜನರು ಹೇಗೆ ಮಾಡುತ್ತಾರೆ ಎಂದು ಭಾವುಕರಾಗಿ ನುಡಿದರು.

ನನ್ನ ಮಗ ಆಕಾಶ್ ಕಿಶೋರ್ (Kaushal Kishore) ಸ್ನೇಹಿತರ ಸಹವಾಸಕ್ಕೆ ಒಳಗಾಗಿ ಮದ್ಯ ಸೇವಿಸುವ ಚಟ ಅಭ್ಯಾಸ ಮಾಡಿಕೊಂಡನು. ಆತನನ್ನು ಮದ್ಯವ್ಯಸನದಿಂದ ಹೊರ ತರಲು ಮದ್ಯವರ್ಜನ ಶಿಬಿರಕ್ಕೆ ಸೇರಿಸಲಾಯಿತು. ಆತ ತನ್ನ ಕೆಟ್ಟ ಚಟವನ್ನು ಬಿಟ್ಟಿದ್ದಾನೆ. ಮುಂದೆದೂ ಕುಡಿಯಲಾರ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆಯನ್ನು ಮಾಡಲಾಯಿತು. ಆದರೆ ಅವನ ಮದುವೆಯ ನಂತರ ಆತ ಮತ್ತೆ ಕುಡಿಯಲು ಪ್ರಾರಂಭಿಸಿದ. ಪರಿಣಾಮ ಅದು ಅಂತಿಮವಾಗಿ ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ, ಅಕ್ಟೋಬರ್ 19 ರಂದು, ಆಕಾಶ್ ಸಾವಿಗೀಡಾದಾದ ಅವನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು ಎಂದು ಕೇಂದ್ರ ಸಚಿವರು ಭಾವುಕರಾದರು. ನಾನು ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದಿದ್ದ ಮೇಲೆ ಸಾಮಾನ್ಯ ಜನರು ಹೇಗೆ ಅದರಿಂದ ಹೊರ ಬರಲು ಸಾಧ್ಯ ಎಂದು ಅವರು ಹೇಳಿದರು. 

ಲಾರಿಯಿಂದ ಬಿದ್ದ ಮದಿರೆಗಾಗಿ ಮುಗಿಬಿದ್ದ ಜನ... ವಿಡಿಯೋ ವೈರಲ್

ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ, ಇದರಿಂದ ಅವನ ಹೆಂಡತಿ ವಿಧವೆಯಳು. ಹೀಗಾಗಿ ಮದ್ಯವ್ಯಸನಿಗಳಿಗೆ ನಿಮ್ಮ ಮಕ್ಕಳು ಸಹೋದರಿಯರನ್ನು ಕೊಟ್ಟು ಮದುವೆ ಮಾಡಬೇಡಿ. ಸ್ವಾತಂತ್ರ್ಯ ಚಳವಳಿಯ ವೇಳೆ 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಆದರೆ ಮದ್ಯವ್ಯಸನದಿಂದ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಾರೆ ಎಂದು ಸಚಿವರು ಹೇಳಿದರು. 

ಸುಮಾರು 80 ಪ್ರತಿಶತದಷ್ಟು ಕ್ಯಾನ್ಸರ್ ಸಾವುಗಳು ತಂಬಾಕು, ಸಿಗರೇಟ್ ಮತ್ತು ಬೀಡಿ ಎಳೆಯುವ ಚಟದಿಂದ ಸಂಭವಿಸುತ್ತವೆ ಎಂದು ಉತ್ತರ ಪ್ರದೇಶದ ಮೋಹನ್‌ಲಾಲ್‌ಗಂಜ್ ಲೋಕಸಭಾ ಕ್ಷೇತ್ರದ (ohanlalganj Lok Sabha constituency) ಸಂಸದರು ಆಗಿರುವ  ಕೌಶಲ್ ಕಿಶೋರ್ (Kaushal Kishore) ಹೇಳಿದರು. ವ್ಯಸನಮುಕ್ತಗೊಳಿಸುವ ಕಾರ್ಯಕ್ರಮದ ಭಾಗವಾಗಿ ಪ್ರೇಕ್ಷಕರು ಮತ್ತು ಇತರ ಸಂಘ ಸಂಸ್ಥೆಗಳು ತಮ್ಮ ಕುಟುಂಬವನ್ನು ಉಳಿಸಬೇಕೆಂದು ಅವರು ಒತ್ತಾಯಿಸಿದರು. ಅಲ್ಲದೇ ಜಿಲ್ಲೆಯನ್ನು ಜಿಲ್ಲೆಯನ್ನು ವ್ಯಸನಮುಕ್ತವನ್ನಾಗಿ ಮಾಡಲು ಎಲ್ಲಾ ಶಾಲೆಗಳಿಗೆ ವ್ಯಸನಮುಕ್ತ ಅಭಿಯಾನವನ್ನು ಕೊಂಡೊಯ್ಯಬೇಕು ಮತ್ತು ಬೆಳಗ್ಗೆ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸಚಿವರು ಹೇಳಿದರು.

Davanagere: ಶಾಲೆಯ ಆವರಣ ಕುಡುಕರ ದಿನನಿತ್ಯದ ಪಾರ್ಟಿ ಹಾಲ್, 1200 ಬಿಯರ್ ಬಾಟಲ್ ಪತ್ತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್
90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!