TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್‌: ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!

Published : Apr 17, 2026, 11:33 AM IST
Nida Khan

ಸಾರಾಂಶ

ಟಿಸಿಎಸ್‌ನ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಒತ್ತಾಯಪೂರ್ವಕ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ, ಹೆಚ್‌ಆರ್ ನಿದಾ ಖಾನ್ ತಾನು ಗರ್ಭಿಣಿ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾೆಳೆ. ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿ ಬಂಧಿತರಾಗಿದ್ದಾರೆ.

ನಾನು ಗರ್ಭಿಣಿ ನನಗೆ ರಿಲೀಫ್ ಬೇಕು: ನಾಸಿಕ್ ಟಿಸಿಎಸ್ ಮತಾಂತರ ಕೇಸ್ ಆರೋಪಿ ನಿದಾ ಖಾನ್

ಮುಂಬೈ: ಟಿಸಿಎಸ್‌ ಸಂಸ್ಥೆಯ ನಾಸಿಕ್ ಬ್ರಾಂಚ್‌ನಲ್ಲಿ ಉದ್ಯೋಗಿಗಳಿಗೆ ಒತ್ತಾಯಪೂರ್ವಕವಾಗಿ ಮತಾಂತರ ಆಗುವುದಕ್ಕೆ ಕಿರುಕುಳ ನೀಡಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಸ್ತುತ ತಲೆಮರೆಸಿಕೊಂಡಿರುವ ಐಟಿ ಸಂಸ್ಥೆ ಟಿಸಿಎಸ್‌ ಸಂಸ್ಥೆಯ ಹೆಚ್‌ಆರ್ ನಿದಾ ಖಾನ್ ಈಗ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ತಾನು ಗರ್ಭಿಣಿಯಾಗಿದ್ದು, ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!

ಆಕೆಯ ಕುಟುಂಬದವರ ಪ್ರಕಾರ ನಿದಾ ಖಾನ್ ಪ್ರಸ್ತುತ ಮುಂಬೈನಲ್ಲಿ ಇದ್ದು, ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಘಟನೆಯ ಬಳಿಕ ತಲೆ ಮರೆಸಿಕೊಂಡಿರುವ ಆಕೆ ನಾಸಿಕ್‌ನ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ತನ್ನ ವೈದ್ಯಕೀಯ ಸ್ಥಿತಿಯನ್ನೇ ಆಕೆ ಈ ಅರ್ಜಿಯಲ್ಲಿ ಪ್ರಮುಖ ವಿಷಯವಾಗಿ ಆಕೆ ಉಲ್ಲೇಖಿಸಿದ್ದಾಳೆ ಎಂದು ವರದಿಯಾಗಿದೆ.

2021ರಲ್ಲಿ ಟಿಸಿಎಸ್‌ ಸೇರಿದ 25ರ ಹರೆಯದ ನಿದಾ ಖಾನ್

ಅಧಿಕಾರಿಗಳು ಆಕೆ ಗರ್ಭಿಣಿ ಎಂಬ ವಿಚಾರದ ಸತ್ಯಾಸತ್ಯತೆಯನ್ನು ವಿಶೇಷ ತನಿಖಾ ತಂಡದ ವೈದ್ಯಕೀಯ ಪರೀಕ್ಷೆಗಳ ಮೂಲಕ ಪರಿಶೀಲಿಸಲು ನಿರ್ಧರಿಸಿದ್ದು, ಆಕೆಯನ್ನು ಕಸ್ಟಡಿಗೆ ಪಡೆಯುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. 25 ವರ್ಷದ ನಿದಾ ಖಾನ್ 2021ರಲ್ಲಿ ಟಿಸಿಎಸ್‌ನ ನಾಸಿಕ್‌ನಲ್ಲಿರುವ ಬಿಪಿಒ ಘಟಕಕ್ಕೆ ಸೇರಿಕೊಂಡಿದ್ದಳು.

ಪ್ರಕರಣದಲ್ಲಿ 7 ಮಂದಿಯ ಬಂಧನ

ಇಲ್ಲಿ ನಡೆದ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಹಾಗೂ ಒತ್ತಾಯಪೂರ್ವಕ ಮತಾಂತರದ ಬಗ್ಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 9 ಉದ್ಯೋಗಿಗಳು ನೀಡಿದ ದೂರಿನ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಇದುವರೆಗೆ ಈ ಪ್ರಕರಣದಲ್ಲಿ ಒಟ್ಟು 7 ಉದ್ಯೋಗಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಆರು ಜನ ಪುರುಷರು ಹಾಗೂ ಓರ್ವ ಮಹಿಳಾ ಹೆಚ್‌ಆರ್‌ ಮುಖ್ಯಸ್ಥೆ ಆಗಿದ್ದಾರೆ.

ಉದ್ಯೋಗಿಗಳು ನೀಡಿದ ದೂರಿನ ಬಗ್ಗೆ ನಿರ್ಲಕ್ಷ್ಯ

8 ಮಹಿಳಾ ಉದ್ಯೋಗಿಗಳು ನೀಡಿದ ದೂರನ್ನು ಆಧರಿಸಿ ಘಟನೆ ಬಗ್ಗೆ ತನಿಖೆಗೆ ಕಳೆದ ವಾರ ವಿಶೇಷ ತನಿಖಾ ತಂಡವನ್ನು ಪೊಲೀಸರು ರಚಿಸಿದ್ದಾರೆ. ಮಹಿಳಾ ಉದ್ಯೋಗಿಗಳ ದೂರಿನ ಪ್ರಕಾರ, ಅವರ ಹಿರಿಯ ಸಹೋದ್ಯೋಗಿಗಳು ಅವರನ್ನು ಮಾನಸಿಕವಾಗಿ ಲೈಂಗಿಕವಾಗಿ ಕಿರುಕುಳ ನೀಡಿ ಹಿಂಸಿಸಿದ್ದಾರೆ. ಈ ಬಗ್ಗೆ ಹೆಚ್‌ಆರ್‌ಗಳಿಗೆ ದೂರು ನೀಡಿದಾಗ ಹೆಚ್‌ಆರ್‌ಗಳು ಅವರ ದೂರಿನ ಬಗ್ಗೆ ವಿಚಾರಣೆ ಮಾಡದೇ ನಿರ್ಲಕ್ಷಿಸಿದ್ದಾರೆ. ಫೆಬ್ರವರಿ 2022 ಹಾಗೂ ಮಾರ್ಚ್ 2026ರ ನಡುವೆ ಈ ಘಟನೆ ನಡೆದಿದೆ.

ಇದನ್ನೂಓದಿ: ತನಗೆ GAY Lord ಅಂತ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಯುವಕ

ಅವರಲ್ಲಿ ಒಬ್ಬರ ಆರೋಪಿ ನಿರಂತರವಾಗಿ ಮಹಿಳಾ ಉದ್ಯೋಗಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಜೊತೆಗೆ ಆಕೆಗೆ ಮದುವೆಯ ಭರವಸೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ ಒಬ್ಬ ಆರೋಪಿ ಮಹಿಳಾ ಉದ್ಯೋಗಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಲ್ಲವೇ ಆಕೆಯ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ರಿಮಾರ್ಕ್ ಮಾಡಿದ್ದಾನೆ.

ಕಚೇರಿಯಲ್ಲೇ ಇದ್ದ ಈ ಕಾಮುಕರ ಬಗ್ಗೆ ಮಹಿಳಾ ಉದ್ಯೋಗಿಗಳು ಕಂಪನಿಯ ಮುಖ್ಯ ಅಧಿಕಾರಿಗೆ ಅಲಿಖಿತ / ಮೌಖಿಕವಾಗಿ ದೂರು ನೀಡಿದಾಗ ಅವರು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಕ್ಕೆ ವಿಫಲರಾಗಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ಆ ಮುಖ್ಯ ಅಧಿಕಾರಿ ಆರೋಪಿಗಳ ಕೃತ್ಯಕ್ಕೆ ಕುಮ್ಮಕ್ಕು ನೀಡಿ ಆರೋಪಿಗಳನ್ನು ಬೆಂಬಲಿಸಿದ್ದಾನೆ. ಅಲ್ಲದೇ ಆರೋಪಿಗಳಲ್ಲಿ ಓರ್ವ ಒಬ್ಬ ಪುರುಷ ಉದ್ಯೋಗಿಗೆ ನಮಾಜ್ ಮಾಡುವಂತೆ ಒತ್ತಾಯ ಮಾಡಿದ್ದಲ್ಲದೇ ಅವನ ಮೂಲ ಧರ್ಮವನ್ನು ಅವಮಾನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂಓದಿ: ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯನ್ನು ತಬ್ಬಿ ಹಠ ಹಿಡಿದ ಪುಟಾಣಿ ಸೊಸೆ; ಎಲ್ಲರ ಕಣ್ಣಾಲಿಗಳು ತೇವ!

ಈ ಪ್ರಕರಣದಲ್ಲಿ ಬಂಧಿತರಾಗಿ ಉದ್ಯೋಗದಿಂದ ಅಮಾನತಾಗಿರುವ ಉದ್ಯೋಗಿಗಳನ್ನು ದಾನಿಶ್ ಶೇಖ್, ತೌಸಿಫ್ ಅತ್ತರ್, ರಾಝಾ ಮೆಮನ್, ಶಾರುಖ್ ಖುರೇಶಿ, ಶಾಫಿ ಶೇಖ್, ಅಸೀಫ್ ಅಫ್ತಾಬ್ ಅನ್ಸಾರಿ ಹಾಗೂ ಹೆಚ್‌ ಆರ್ ಮುಖ್ಯಸ್ಥೆಅಶ್ವಿನಿ ಚೈನಾನಿ ಎಂದು ಗುರುತಿಸಲಾಗಿದೆ.

ತನ್ನ ಸಂಸ್ಥೆಯೊಳಗೆ ನಡೆದಂತಹ ಈ ಆಘಾತಕಾರಿ ಘಟನೆಯ ಬಗ್ಗೆ ಟಿಸಿಎಸ್ ಭಾನುವಾರ ಹೇಳಿಕೆ ನೀಡಿದ್ದು, ಇಂತಹ ಕಿರುಕುಳದ ಬಗ್ಗೆ ಯಾವುದೇ ಸಹನೆ ಇಲ್ಲ, ಇಂತಹ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನಿಯಮವನ್ನು ಪಾಲಿಸಲಾಗುವುದು ಎಂಬ ಹೇಳಿಕೆ ನೀಡಿದೆ. ಟಿಸಿಎಸ್ ತುಂಬಾ ಹಿಂದಿನಿಂದಲೂ ಇಂತಹ ಕಿರುಕುಳಗಳ ವಿರುದ್ದಧ ಶೂನ್ಯ ಸಹಿಷ್ಣುತೆ ನಿಯಮವನ್ನು ಹೊಂದಿದೆ. ಕೆಲಸದ ಸ್ಥಳದಲ್ಲಿ ನಮ್ಮ ಉದ್ಯೋಗಿಗಳ ಸಂಪೂರ್ಣ ಸುರಕ್ಷತೆ ಹಾಗೂ ಯೋಗಕ್ಷೇಮ ನಮ್ಮ ಆದ್ಯತೆಯಾಗಿದೆ ಎಂದು ಟಿಸಿಸ್ ಸಂಸ್ಥೆ ಘಟನೆಯ ಬಳಿಕ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ನಮಗೆ ನಾಸಿಕ್‌ನ ಕಚೇರಿಯಲ್ಲಿ ನಡೆದ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ನಾವು ಕೂಡಲೇ ಕ್ರಮ ಕೈಗೊಂಡಿದ್ದೇವೆ ಹಾಗೂ ಈ ಪ್ರಕರಣದಲ್ಲಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿ ಉದ್ಯೋಗಿಗಳನ್ನು ವಿಚಾರಣೆ ನಡೆಸಲಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸರೊಂದಿಗೆ ತನಿಖೆಗೆ ಸಹಕರಿಸಲಾಗುತ್ತಿದೆ. ಪೊಲೀಸರ ತನಿಖೆ ಪೂರ್ಣಗೊಂಡ ನಂತರ ಅವರ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟಿಸಿಎಸ್ ಸಂಸ್ಥೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ
ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ