ಹಿಂದೂ-ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ: ಪ್ರಧಾನಿ ಮೋದಿ

Published : May 15, 2024, 06:10 AM IST
ಹಿಂದೂ-ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ: ಪ್ರಧಾನಿ ಮೋದಿ

ಸಾರಾಂಶ

'ನನ್ನ ದೇಶದ ಜನ ನನಗೆ ಮತ ಹಾಕುವರು ಎಂಬ ವಿಶ್ವಾಸವಿದೆ. ಯಾವತ್ತು ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುತ್ತೇನೋ ಅಂದಿನಿಂದ ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುವುದಿಲ್ಲ. ಇದು ನನ್ನ ಸಂಕಲ್ಪ' ಎಂದ ಪ್ರಧಾನಿ ನರೇಂದ್ರ ಮೋದಿ 

ವಾರಾಣಸಿ(ಮೇ.15):  'ನಾನು ಎಂದು ಹಿಂದೂ-ಮುಸ್ಲಿಂ ರಾಜಕೀಯ ಮಾಡಲು ಪ್ರಾರಂಭ ಮಾಡುವನೋ ಅದೇ ದಿನ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಎಂದೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲ್ಲ. ಇದು ನನ್ನ ಸಂಕಲ್ಪ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಗಂಗಾ ನದಿಯಲ್ಲಿ ದೋಣಿ ವಿಹಾರ ನಡೆಸುತ್ತ ಟೀವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಮೋದಿ, ತಾವು ಇತ್ತೀಚೆಗೆ ನೀಡಿದ 'ಹೆಚ್ಚು ಮಕ್ಕಳ ಹೆರುವವರಿಗೆ ಕಾಂಗ್ರೆಸ್ ಪಕ್ಷವು ದೇಶದ ಜನರ ಆಸ್ತಿ ಜಪ್ತಿ ಮಾಡಿಕೊಂಡು ಪಾಲು ನೀಡಲಿದೆ' ಎಂಬ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು ಹಾಗೂ ಆ ಮಾತು ಹೇಳುವಾಗ ಈ ಮೇಲಿನಂತೆ ನುಡಿದರು.

ಭಾರತದ ಪ್ರಧಾನಿಗೆ ಕಾರಿಲ್ಲ, ಮನೆ ಇಲ್ಲ, 3 ಕೋಟಿ ಆಸ್ತಿ!

'ಹೆಚ್ಚು ಮಕ್ಕಳ ಹೆರುವವರಿಗೆ ದೇಶದ ಆಸ್ತಿ ಹಂಚಿಕೆಯಾಗಲಿದೆ ಎಂದು ನಾನು ಹೇಳುವಾಗ ಎಲ್ಲೂ ಮುಸ್ಲಿಂ ಎಂಬ ಪದ ಬಳಸಿಲ್ಲ. ಮುಸ್ಲಿಮರನ್ನು ಉದ್ದೇಶಿಸಿಯೇ ನಾನು ಹೇಳಿಕೆ ನೀಡಿದೆ ಎಂಬ ವರದಿಗಳನ್ನು ನೋಡಿ ನಾನು ಅವಾಕ್ಕಾಗಿ ದ್ದೇನೆ. 11 ಮಕ್ಕಳಿದ್ದಾರೆ ಎಂಬ ಹೇಳಿಕೆ ಬಂದಾಗ ಏಕೆ ಅದನ್ನು ಮುಸ್ಲಿಮರಿಗೇ ಜೋಡಿಸುತ್ತೀರಿ? ಏಕೆ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತೀರಿ ನೀವು? ಇಲ್ಲಿನ ಬಡ ಕುಟುಂಬಗಳಲ್ಲೂ ಇದೇ ಪರಿಸ್ಥಿತಿ ಇದೆ. ಅವರಿಗೆ ಮಕ್ಕಳನ್ನು ಓದಿಸಲೂ ಆಗುತ್ತಿಲ್ಲ, ಯಾವುದೇ ಸಮಾಜ ಇರಲಿ. ಎಲ್ಲಿ ಬಡತನ ಇದೆಯೋ ಅಲ್ಲಿ ಮಕ್ಕಳೂ ಹೆಚ್ಚಿದ್ದಾರೆ. ನಾನು ಎಲ್ಲೂ ಹಿಂದೂ-ಮುಸ್ಲಿಂ ಎಂದಿಲ್ಲ. ನಾನು ಹೇಳಿದ್ದೇನು ಎಂದರೆ ಎಷ್ಟು ಮಕ್ಕಳನ್ನು ನೀವು ಹೊಂದಿದ್ದೀರೋ ಆ ಮಕ್ಕಳ ಪಾಲನೆ-ಪೋಷಣೆ ಮಾಡಬೇಕು. ಸರ್ಕಾರವು ಆಮಕ್ಕಳನ್ನು ಪಾಲನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಸಬಾರದು' ಎಂಬುದಾಗಿತ್ತು' ಎಂದರು.

ಪತ್ರಕರ್ತೆಯು, 'ನಿಮಗೆ ಮುಸ್ಲಿಮರು ಮತ ಹಾಕುತ್ತಾರಾ?' ಪ್ರಶ್ನಿಸಿದಾಗ ಉತ್ತರಿಸಿದ ಮೋದಿ, 'ನನ್ನ ದೇಶದ ಜನ ನನಗೆ ಮತ ಹಾಕುವರು ಎಂಬ ವಿಶ್ವಾಸವಿದೆ. ಯಾವತ್ತು ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುತ್ತೇನೋ ಅಂದಿನಿಂದ ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುವುದಿಲ್ಲ. ಇದು ನನ್ನ ಸಂಕಲ್ಪ' ಎಂದರು.

'ಒಂದು ಊರಿನಲ್ಲಿ 200 ಮನೆಗಳಿವೆ ಎಂದುಕೊ ಳ್ಳೋಣ. ಆಗ ಸರ್ಕಾರದ ಯೋಜನೆ ಎಲ್ಲರಿಗೂ ಮುಟ್ಟಬೇಕು ಎಂದು ನಾನು ಕೆಲಸ ಮಾಡುತ್ತೇನೇವಿನಾ, ಆಗ ಆ ಧರ್ಮದವ ಯಾರು? ಈ ಧರ್ಮದವ ಯಾರು ಎಂದು ನೋಡಲು ಹೋಗುವುದಿಲ್ಲ. ಅಲ್ಲಿ 60 ಲಾಭಾರ್ಥಿಗಳು ಇದ್ದರೆ ಎಲ್ಲರಿಗೂ ಜಾತಿ ಭೇದವಿಲ್ಲದೇ ಯೋಜನೆಗಳ ಲಾಭ ತಲುಪಿಸುತ್ತೇನೆ' ಎಂದರು.

'ನಾನು ಯಾವತ್ತೂ ಮುಸ್ಲಿಮರ ಮೇಲೆ ಪ್ರೀತಿ ಹೊಂದಿದ್ದೇನೆ ಎಂಬ ಹೇಳಿಕೆ ನೀಡುತ್ತ ಅದನ್ನು ಮಾರ್ಕೆಟಿಂಗ್ (ಪ್ರಚಾರ) ಮಾಡಲು ಇಷ್ಟಪಡುವುದಿಲ್ಲ. ಯಾವತ್ತು ಪ್ರಚಾರ ಮಾಡಲು ಇಷ್ಟಪಡುವನೋ ಅಂದು ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯ ಎನ್ನಿಸಿಕೊಳ್ಳಲ್ಲ. ನಾನು ಮತ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ನಾನು ಸಟ್ಕಾ ಸಾಥ್, ಸಬ್ಬಾ ವಿಕಾಸ್ ಅನ್ನು ನಂಬುತ್ತೇನೆ' ಎಂದು ಮೋದಿ

ನನ್ನ ಮನೆಗೆ ಮುಸ್ಲಿಮರ ಊಟ: 'ನೀವು ಮುಸ್ಲಿಮರ ವಿರುದ್ಧ ಇಲ್ಲ ಎಂಬ ಗ್ರಹಿಕೆಯನ್ನು ಮುರಿಯುವಲ್ಲಿ ಏಕೆ ಯಶಸ್ವಿಯಾಗಲಿಲ್ಲ?' ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಇದು ಮುಸಲ್ಮಾನರ ಪ್ರಶ್ನೆಯಲ್ಲ, 2002ರ ನಂತರ ನನ್ನ ಇಮೇಜ್ ಗೆ ಧಕ್ಕೆಯಾಯಿತು' ಎಂದು ಹೇಳಿದರು ಹಾಗೂ ತಾವು ಮತ್ತು ತಮ್ಮ ಕುಟುಂಬ ಹೇಗೆ ಬಾಲ್ಯದಲ್ಲಿ ಮುಸ್ಲಿಮರ ಜತೆ ಅನ್ನೋನ್ಯವಾಗಿತ್ತು ಎಂಬ ಕೆಲವು ಪ್ರಸಂಗಗಳನ್ನು ವಿವರಿಸಿದರು.

'ನನ್ನ ಮನೆಯಲ್ಲಿ, ನನ್ನ ಸುತ್ತಲೂ ಎಲ್ಲಾ ಮುಸ್ಲಿಂ ಕುಟುಂಬಗಳಿದ್ದವು. ನಮ್ಮ ಮನೆಯಲ್ಲೂ ಈದ್ ಆಚರಿಸುತ್ತಿದ್ದರು. ಈದ್ ದಿನದಂದು ನಮ್ಮ ಮನೆಯಲ್ಲಿ ಆಡುಗೆ ಮಾಡುತ್ತಿರಲಿಲ್ಲ, ನನ್ನ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಆಹಾರ ಬರುತ್ತಿತ್ತು. ಮೊಹರಂ ಪ್ರಾರಂಭವಾದಾಗ, ನಾವು ತಾಜಿಯಾ ಅಡಿಯಲ್ಲಿ ನಡೆದುಕೊಂಡು ಸಾಗಲು ನಮಗೆ ಕಲಿಸಲಾಗಿತ್ತು. ನಾನು ಆ ಜಗತ್ತಿನಲ್ಲಿ ಬೆಳೆದೆ. ಇಂದಿಗೂ ನನ್ನ ಅನೇಕ ಸ್ನೇಹಿತರು ಮುಸ್ಲಿಮರಾಗಿದ್ದಾರೆ' ಎಂದು ಹೇಳಿದರು.

ಏರ್‌ ಇಂಡಿಯಾ ವಿಮಾನ ರದ್ದು, ಸಾಯುವ ಕೊನೆ ಕ್ಷಣದಲ್ಲಿ ಪತಿ ಜೊತೆಗಿರುವ ಭಾಗ್ಯ ತಪ್ಪಿಸಿಕೊಂಡ ಪತ್ನಿ!

'2002ರ ನಂತರ (ಗುಜರಾತ್ ಗಲಭೆ ನಂತರ) ನನ್ನ ಇಮೇಜ್‌ಗೆ ಧಕ್ಕೆಯಾದಾಗ ನೆಲದ ವಾಸ್ತವತೆಯನ್ನು ಅರಿಯಲು ಸಮೀಕ್ಷೆ ನಡೆಸಿದ್ದೆ' ಎಂದ ಪ್ರಧಾನಿ ಆ ಸಮೀಕ್ಷೆಯಲ್ಲಿ ಏನಾಯಿತೆಂಬ ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟರು.

'ಅಹಮದಾಬಾದ್‌ನಲ್ಲಿ ಮಾಣೆಕ್ ಚೌಕ್ ಎಂಬ ಸ್ಥಳವಿದೆ. ಅಲ್ಲಿ ಜನರು ಸಂಜೆ ತಿಂಡಿ ತಿನ್ನಲು ಹೋಗುತ್ತಾರೆ. ಅಲ್ಲಿನ ಎಲ್ಲ ವ್ಯಾಪಾರಿಗಳು ಮುಸ್ಲಿಮರು ಮತ್ತು ಎಲ್ಲಾ ಖರೀದಿದಾರರು ಹಿಂದೂಗಳು, 2002ರಲ್ಲಿ ಆ ಮಾರುಕಟ್ಟೆಯಲ್ಲಿ ಸಮೀಕ್ಷೆ ನಡೆಸಲು ಕೆಲವರನ್ನು ಕಳುಹಿಸಿದ್ದೆ. ಸಮೀಕ್ಷೆ ಮಾಡುವವರಲ್ಲಿ ಒಬ್ಬ ವ್ಯಕ್ತಿ ನನ್ನ ವಿರುದ್ಧ ಮಾತನಾಡಿದ.ಆಗ ಅಂಗಡಿಯವನು ಅವನನ್ನು ತಡೆದು 'ಮೋದಿ ವಿರುದ್ದ ಒಂದು ಮಾತು ಹೇಳಬೇಡಿ. ಇಂದು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎಂದರೆ ಅದು ಮೋದಿಯವರಿಂದಾಗಿ' ಎಂದ. ಸುಮಾರು ಶೇ.90 ಅಂಗಡಿ ಮಾಲೀಕರು ಇದೇ ಮಾತು ಹೇಳಿದರು' ಎಂದು ಮೋದಿ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್
ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ, ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್‌