ಹಾರಿಹೋದ ಫಾರಿನ್ ಹಕ್ಕಿಯ ಮರಳಿ ಮಾಲೀಕರ ಮಡಿಲು ಸೇರಿಸಿದ ಪೊಲೀಸರು

By Suvarna NewsFirst Published Oct 4, 2023, 4:18 PM IST
Highlights

ನಾಪತ್ತೆಯಾಗಿದ್ದ  ಆಸ್ಟ್ರೇಲಿಯನ್‌ ಗಿಳಿಯೊಂದು ಮರಳಿ ಮಾಲೀಕರ ಮಡಿಲು ಸೇರಿದ್ದು, ಇದರಿಂದ ಖುಷಿಯಾದ ಮಾಲೀಕರು ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಹೈದರಾಬಾದ್‌: ನಾಪತ್ತೆಯಾಗಿದ್ದ  ಆಸ್ಟ್ರೇಲಿಯನ್‌ ಗಿಳಿಯೊಂದು ಮರಳಿ ಮಾಲೀಕರ ಮಡಿಲು ಸೇರಿದ್ದು, ಇದರಿಂದ ಖುಷಿಯಾದ ಮಾಲೀಕರು ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಹೈದರಾಬಾದ್‌ನ ಜ್ಯುಬಿಲಿಹಿಲ್ಸ್‌ನ ನಿವಾಸಿಯೊಬ್ಬರು ಆಸ್ಟ್ರೇಲಿಯನ್‌ ಗಿಳಿಯೊಂದನ್ನು ಸಾಕುತ್ತಿದ್ದು, 4 ತಿಂಗಳ ಈ ಗಿಣಿ ಇತ್ತೀಚೆಗೆ ನಾಪತ್ತೆಯಾಗಿತ್ತು. 

ಜ್ಯುಬಿಲಿಹಿಲ್ಸ್‌ ಪೊಲೀಸರ ಪ್ರಕಾರ, ಜ್ಯುಬಿಲಿಹಿಲ್ಸ್‌ನಲ್ಲಿ ಕಾಫಿ ಶಾಪ್ ಇರಿಸಿಕೊಂಡಿದ್ದ ನರೇಂದ್ರ ಚಾರಿ (Narender Chary)ಎಂಬುವವರು ಆಸ್ಟ್ರೇಲಿಯಾದಿಂದ (Australia) ಗಿಳಿಯೊಂದನ್ನು ಖರೀದಿಸಿದ್ದರು.  ಈ ಗಿಳಿಗೆ ಮೈರು ಎಂದು ಹೆಸರಿಟ್ಟಿದ್ದರು. ಕೆಲ ದಿನಗಳ ಹಿಂದೆ ಈ ಮೈರುಗೆ ಊಟ ತಿನ್ನಿಸುತ್ತಿದ್ದ ವೇಳೆ ಈ ಗಿಳಿ ಹಾರಿ ಹೋಗಿತ್ತು. ಹೀಗಾಗಿ ಗಿಳಿಯ ಮಾಲೀಕ ತನ್ನ ಮುದ್ದಿನ ಅರಗಿಣಿಯನ್ನು ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದರು. 

Latest Videos

ಲೇಸರ್‌ ಫೇಶಿಯಲ್‌ ಎಫೆಕ್ಟ್‌: ಸೀದೋದ ದೋಸೆಯಂತಾಯ್ತು ಮುದ್ದಾದ ಯುವತಿ ಮುಖ

ಅದರಂತೆ ಈ ಸುಂದರವಾದ ಗಿಳಿಯ (Australian Parrot) ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡ ಪೊಲೀಸರು ಈ ವಿದೇಶಿ ತಳಿಯ ಹಕ್ಕಿಗಳನ್ನು ಇಲ್ಲಿ ಮಾರಾಟ ಮಾಡುವ ವ್ಯಾಪಾರಿಯೊಂದಿಗೂ ಈ ಚಿತ್ರವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಬಳಿಕ ಯುವಕನೋರ್ವನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಹಕ್ಕಿಯ ಫೋಟೋ ಹಾಕಿ ಮಾರಾಟಕ್ಕೆ ಇಟ್ಟಿರುವುದನ್ನು ನೋಡಿದ  ವ್ಯಾಪಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್‌ ಹೊಟೇಲ್‌ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್‌

ಅದರಂತೆ ಪೊಲೀಸರು (Jubilee Hills Police) ಆ ಯುವಕನನ್ನು ಪತ್ತೆ ಮಾಡಿದ್ದು, ಆತನನ್ನುಈರಗಡ್ಡಾದ ಮುಜಾಹೀದ್ ಎಂದು ಗುರುತಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಈತ ತಾನು ಮತ್ತೊಬ್ಬ ವ್ಯಕ್ತಿಯಿಂದ ಈ ಹಕ್ಕಿಯನ್ನು ಖರೀದಿಸಿದ್ದಾಗಿ ಹೇಳಿದ್ದಾನೆ. ನಂತರ ಪೊಲೀಸರು ಆತನಿಂದ ಹಕ್ಕಿಯನ್ನು ವಶಕ್ಕೆ ಪಡೆದು ಅದರ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. 

ಆಕಸ್ಮಿಕವಾಗಿ 'ಮಮ್ಮಿ' ಆದವನಿಗೆ 128 ವರ್ಷಗಳ ಬಳಿಕ ಅಂತ್ಯಕ್ರಿಯೆ ಭಾಗ್ಯ

click me!