
ಬದಾಯೂಂ(ಸೆ.21): ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಐವರು ಹೆಣ್ಣುಮಕ್ಕಳ ತಂದೆಯೊಬ್ಬ ಗರ್ಭಿಣಿ ಪತ್ನಿಯ ಹೊಟ್ಟೆಯನ್ನೇ ಹರಿತವಾದ ಆಯುಧದಿಂದ ಸೀಳಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಅವಧಿಗೂ ಪೂರ್ವ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
35 ವರ್ಷದ ಸಂತ್ರಸ್ತ ಗರ್ಭಿಣಿಯನ್ನು ಸಂಬಂಧಿಕರು, ಸ್ಥಳೀಯರು ಸೇರಿ ಕೂಡಲೇ ಬರೇಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿರಾತಕ ಪತಿಯು ಉದರವನ್ನೇ ಸೀಳಿರುವ ಪರಿಣಾಮ ಆಕೆಯ ಆರೋಗ್ಯ ತೀರಾ ಗಂಭೀರ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಸಲಕ್ಕೆ 108 ಸೂರ್ಯ ನಮಸ್ಕಾರ ಮಾಡಿದ ನಟಿ ಸಮಂತಾ..!
ಈ ದುಷ್ಕೃತ್ಯ ಎಸಗಿದ ಪಾಪಿ ಪತಿ ಪನ್ನಲಾಲ್‌ನನ್ನು ಪೊಲೀಸರು ಬಂಧಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯ ಹಿಂದಿರುವ ಕಾರಣವನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ. ಮಹಿಳೆಯ ಕುಟುಂಬಸ್ಥರ ಪ್ರಕಾರ, ಪನ್ನಲಾಲ… ಗಂಡು ಮಗುವಿಗಾಗಿ ಹವಣಿಸುತ್ತಿದ್ದ. ಈಗಾಗಲೇ ಐದು ಹೆಣ್ಣುಮಕ್ಕಳನ್ನು ಪತ್ನಿ ಹೆತ್ತಿದ್ದರಿಂದ, ಈ ಬಾರಿಯ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಭ್ರೂಣ ಪತ್ತೆ ಅಪರಾಧ ಎಂದು ಸರ್ಕಾರವೇ ಘೋಷಿಸಿದ್ದರೂ ಪುತ್ರ ವಾಮೋಹಕ್ಕೆ ಬಿದ್ದು ಇಂಥ ಹೀನ ಕೃತ್ಯ ಎಸಗಿದ್ದಾನೆ ಆರೋಪಿಸಿದ್ದಾರೆ. ಸಂತ್ರಸ್ತ ಮಹಿಳೆಯು ಸರಿಸುಮಾರು 6ರಿಂದ 7 ತಿಂಗಳ ಗರ್ಭಿಣಿ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ