ಪತಿ IAS, ಪತ್ನಿ IPS: 40 ವಿಲ್ಲಾ, ವರ್ಷಕ್ಕೆ 1.8 ಕೋಟಿ ಕಮಾಯಿ; ಸಂಚಲನ ಮೂಡಿಸಿದ ಭ್ರಷ್ಟಾಚಾರ ಆರೋಪ

Published : Nov 01, 2026, 04:02 PM IST
Shikhar Agrawal and Prashakha Mathur

ಸಾರಾಂಶ

ಐಎಎಸ್‌ ಅಧಿಕಾರಿ ಶಿಖರ್ ಅಗರ್ವಾಲ್ ಮತ್ತು ಐಪಿಎಸ್‌ ಅಧಿಕಾರಿ ಪ್ರಶಾಖಾ ಮಾಥುರ್ ದಂಪತಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇವರು 6.16 ಕೋಟಿ ರೂ. ಮೌಲ್ಯದ 40 ವಿಲ್ಲಾಗಳನ್ನು ಖರೀದಿಸಿ, ಮತ್ತೆ ಅದೇ ಕಂಪನಿಗೆ ಗುತ್ತಿಗೆ ನೀಡಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿದೆ.

ನವದೆಹಲಿ: ಐಎಸ್‌ಎಸ್ ಮತ್ತು ಐಪಿಎಸ್‌ ದಂಪತಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಬೆನ್ನಲ್ಲೇ ದೇಶದಾದ್ಯಂತ ಹಿರಿಯ ಅಧಿಕಾರಿಗಳ ಕುರಿತು ಭಾರೀ ಚರ್ಚೆ ಶುರುವಾಗಿದೆ.

ಏನಿದು ಆರೋಪ?

ಕೈಗಾರಿಕಾ ಇಲಾಖೆಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಿಖರ್ ಅಗರ್ವಾಲ್, ಹಿರಿಯ ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಆರೋಪ ಏನು ಅಂತಾ ನೋಡೋದಾದರೆ.. ಈ ದಂಪತಿ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಪ್ರಸಿದ್ಧ ಅನಂತ ರೆಸಾರ್ಟ್‌ಗಳಲ್ಲಿ 40 ವಿಲ್ಲಾ ಮತ್ತು ಕಾಟೇಜ್‌ಗಳನ್ನ 6.16 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ಬಳಿಕ ಅವುಗಳನ್ನ ಕಂಪನಿಗೆ ಮತ್ತೆ ಗುತ್ತಿಗೆ ನೀಡಿ, ವಾರ್ಷಿಕವಾಗಿ 1.8 ಕೋಟಿ ರೂ. ಗಳಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದೀಗ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ ತನಿಖೆ ಶುರುಮಾಡಿದೆ. ಪ್ರಸ್ತುತ ಅಗರ್ವಾಲ್ ಮತ್ತು ಅವರ ಪತ್ನಿ ಪ್ರಶಾಖಾ ಮಾಥುರ್ ಅವರನ್ನು ಈಗಾಗಲೇ ಅವೈಟಿಂಗ್ ಪೋಸ್ಟಿಂಗ್ ಆರ್ಡರ್ಸ್ ಅಡಿಯಲ್ಲಿ ಇರಿಸಲಾಗಿದೆ. ಇವರ ವಿರುದ್ಧ ಅನಂತ ಬ್ರ್ಯಾಂಡ್ ಅಡಿಯಲ್ಲಿ ರೆಸಾರ್ಟ್‌ಗಳನ್ನು ನಿರ್ವಹಿಸುವ ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅನಗತ್ಯ ಅನುಕೂಲಗಳನ್ನು ನೀಡಿರುವ ಆರೋಪ ಇದೆ.

ಎಸಿಬಿ ಅಧಿಕಾರಿಗಳು ಅಕ್ಟೋಬರ್ 30 ರಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ, ಶಿಖರ್ ಅಗರವಾಲ್, ಗೋಯಲ್ ಫ್ಯಾಷನ್ಸ್ ನಿರ್ದೇಶಕರೊಂದಿಗೆ ಶಾಮೀಲಾಗಿ ಕಂಪನಿಗೆ ಅನಗತ್ಯ ಲಾಭಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದು ಎಸಿಬಿ ಹೇಳಿದೆ. ಕಂಪನಿಯು ರೆಸಾರ್ಟ್ ನಿರ್ಮಾಣ ಅವಶ್ಯಕತೆಗಳಲ್ಲಿ ರಿಯಾಯಿತಿಗಳು, ಕಡ್ಡಾಯ ಪ್ರಮಾಣಪತ್ರಗಳ ಸರಿಯಾದ ಪರಿಶೀಲನೆಯಿಲ್ಲದೆ ಅನುಮೋದನೆಗಳನ್ನ ನೀಡಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ರಾಜ್ಯ ಸರ್ಕಾರವು ವಿವರವಾದ ತನಿಖೆಗೆ ಅನುಮೋದನೆ ನೀಡಿದೆ.

2.5 ವರ್ಷಗಳಲ್ಲಿ 40 ಆಸ್ತಿ ಖರೀದಿ

ಸೆಪ್ಟೆಂಬರ್ 2023ರಲ್ಲಿ.. ಕುಟುಂಬವು ಉದಯಪುರದ ಬುಜ್ಡಾದಲ್ಲಿರುವ ರೆಸಾರ್ಟ್‌ನಲ್ಲಿ 20 ಕಾಟೇಜ್‌ಗಳನ್ನು ಖರೀದಿಸಿತು. ಮಾರ್ಚ್ 2026 ರಲ್ಲಿ, ಅವರು ಅಲ್ವಾರ್‌ನ ಅಜಬ್‌ಗಢದಲ್ಲಿರುವ ರೆಸಾರ್ಟ್‌ನಲ್ಲಿ ಇನ್ನೂ 20 ವಿಲ್ಲಾಗಳನ್ನು ಖರೀದಿಸಿದರು. ಗೋಯಲ್ ಫ್ಯಾಷನ್ಸ್‌ನಿಂದ ಒಟ್ಟು 6.16 ಕೋಟಿ ರೂ.ಗಳಿಗೆ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಎಸಿಬಿ ಹೇಳಿದೆ. ಅಗರ್ವಾಲ್ ಮತ್ತು ಮಾಥುರ್ ಉದಯಪುರ ರೆಸಾರ್ಟ್‌ನಲ್ಲಿ ತಲಾ 15 ಲಕ್ಷ ರೂ.ಗೆ 10 ವಿಲ್ಲಾಗಳನ್ನು ಖರೀದಿಸಿದ್ದಾರೆ. ಅಲ್ವಾರ್ ರೆಸಾರ್ಟ್‌ನಲ್ಲಿ, ಎಂಟು ವಿಲ್ಲಾಗಳನ್ನು ಅವರ ಹೆಸರಿನಲ್ಲಿ ತಲಾ 16.5 ಲಕ್ಷ ರೂ.ಗೆ ನೋಂದಾಯಿಸಲಾಗಿದೆ. ಅವರ ಇಬ್ಬರು ಪುತ್ರರು ತಲಾ 15 ಲಕ್ಷ ರೂ.ಗೆ ನಾಲ್ಕು ವಿಲ್ಲಾಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಮಾಥುರ್ ಅವರ ಪೋಷಕರ ಹೆಸರಿನಲ್ಲಿ ನಾಲ್ಕು ವಿಲ್ಲಾಗಳನ್ನು ತಲಾ 16.5 ಲಕ್ಷ ರೂ.ಗೆ ನೋಂದಾಯಿಸಲಾಗಿದೆ ಎಂದು ಎಸಿಬಿ ಹೇಳಿದೆ.

ಇನ್ನು, ಕಂಪನಿಗಳ ಜೊತೆಗಿನ ಒಪ್ಪಂದಗಳ ಪ್ರಕಾರ.. ಪ್ರತಿ ಉದಯಪುರದ ಕಾಟೇಜ್ ಅನ್ನು ವಾರ್ಷಿಕವಾಗಿ 4 ಲಕ್ಷ ರೂ.ಗಳಿಗೆ ಕಂಪನಿಗೆ ಗುತ್ತಿಗೆ ನೀಡಲಾಯಿತು. ಪ್ರತಿ ಅಲ್ವಾರ್ ವಿಲ್ಲಾವನ್ನು ವರ್ಷಕ್ಕೆ 5 ಲಕ್ಷ ರೂ.ಗಳಿಗೆ ಗುತ್ತಿಗೆ ನೀಡಲಾಯಿತು. ಒಟ್ಟಾರೆಯಾಗಿ, 40 ಆಸ್ತಿಗಳು ವಾರ್ಷಿಕ ಗುತ್ತಿಗೆ ಆದಾಯದಲ್ಲಿ 1.80 ಕೋಟಿ ರೂ.ಗಳನ್ನು ಗಳಿಸುವ ನಿರೀಕ್ಷೆಯಿತ್ತು. ಉದಯಪುರದಿಂದ 80 ಲಕ್ಷ ರೂ.ಗಳು ಮತ್ತು ಅಲ್ವಾರ್‌ನಿಂದ 1 ಕೋಟಿ ರೂ.ಗಳು ಎಂಬುದನ್ನು ಎಸಿಬಿ ಬಹಿರಂಗಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹50 ಸಾವಿರ ಕೋಟಿ ಆಸ್ತಿ ಒಡೆಯ, ಟೆಕ್ ಉದ್ಯಮಿ ಆರ್‌ಎಸ್ಎಸ್ ಗಣವೇಷ ತೊಟ್ಟು ಸಿಂಪಲ್ ನಡಿಗೆ
ಜಿರಳೆ ಹೋರಾಟದಲ್ಲಿ ಭಾಗಿಯಾಗಿದ್ದ ಆಮಿರ್ ಅಳಿಯ ಕ್ಷಮೆ, ಇಮ್ರಾನ್‌ ಖಾನ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಬಾಂಬೆ ಹೈಕೋರ್ಟ್