ಹಾಲು ಕುಡಿಯಲು ಪತ್ನಿಗೆ ಬಿಗ್ ಆಫರ್ ಕೊಟ್ಟ ಗಂಡ, ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾದ್ರು!

ಹಾಲು ಇಷ್ಟಪಡದ ಪತ್ನಿಗೆ ಗಂಡ ಹಣ ಕೊಟ್ಟು ಹಾಲು ಕುಡಿಸಿದ್ದಾಳೆ. ಹಾಲು ಕುಡಿಯಲು ಗಂಡ ಕೊಟ್ಟ ಆಫರ್ ನೋಡಿ ಪತ್ನಿ ಶಾಕ್ ಆಗಿದ್ದಾಳೆ. ಆದರೆ ಗಂಡನ ಉದ್ದೇಶವೇ ಬೇರೆಯಾಗಿತ್ತು.


ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋ ಈ ವಿಡಿಯೋ ನೋಡಿದ್ರೆ ಖಂಡಿತ ನಕ್ಕು ನಕ್ಕು ಸುಸ್ತು ಆಗ್ತೀರಿ. ಈ ವಿಡಿಯೋದಲ್ಲಿ ಪತ್ನಿಗೆ ಹಾಲು ಕುಡಿಸಲು ಗಂಡ ಪ್ರಯತ್ನಿಸುತ್ತಿರೋದನ್ನು ಗಮನಿಸಬಹುದು. ಆದ್ರೆ ಮಹಿಳೆ ಮಾತ್ರ ಆ ಒಂದು ಗ್ಲಾಸ್ ಹಾಲು ಕುಡಿಯಲ ಒಪ್ಪುತ್ತಿರಲಿಲ್ಲ. ಆದ್ರೆ ಈ ವಿಡಿಯೋದಲ್ಲಿ ಕೊನೆಗೆ ಟ್ವಿಸ್ಟ್ ನೋಡಿ  ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಹಾಲು ಕುಡಿಯಲು ಪತಿ ಮನವೊಲಿಕೆ ಮಾಡ್ತಿರೋದನ್ನ ಕಂಡು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಗಂಡ ಒಂದು ಗ್ಲಾಸ್‌ನಲ್ಲಿ ಹಾಲು ತೆಗೆದುಕೊಂಡು ಪತ್ನಿ ಬಳಿ ಬರುತ್ತಾಳೆ. ಪತ್ನಿಯ ಕೈಗೆ ಗ್ಲಾಸ್ ನೀಡಿ ಅದರಲ್ಲಿರುವ ಹಾಲನ್ನು ಕುಡಿಯುವಂತೆ ಹೇಳುತ್ತಾನೆ. ನನಗೆ ಹಾಲು ಇಷ್ಟವಿಲ್ಲ ಅಂತ ನಿಮಗೆ ಗೊತ್ತಿದೆ ಅಲ್ಲವಾ? ಯಾಕೆ ಹಾಲು ಕುಡಿಯಲು ಒತ್ತಾಯ ಮಾಡುತ್ತಿದ್ದೀರಿ. ಪ್ಲೀಸ್ ಹಾಲು ತೆಗೆದುಕೊಂಡು ಹೋಗಿ ಎಂದು ಮಹಿಳೆ ಕೋಪದಿಂದ ಹೇಳುತ್ತಾಳೆ. ಆದ್ರೆ ಆಕೆಯ ಗಂಡ ಮಾತ್ರ ಅಲ್ಲಿಂದ ಹೋಗಲ್ಲ. ಹಾಲು ಕುಡಿದ್ರೆ ಹಣ ಕೊಡುತ್ತೇನೆ ಎಂದು ಹೇಳಿ 500 ರೂಪಾಯಿ ಎರಡು ನೋಟ್‌ಗಳನ್ನು ನೀಡುತ್ತಾನೆ.

Latest Videos

ಗಂಡ ಹಣ ಕೊಡುತ್ತಿದ್ದಂತೆ ಖುಷಿಯಾದ ಮಹಿಳೆ, ಎರಡು ನೋಟ್ ತೆಗೆದುಕೊಳ್ಳುತ್ತಾಳೆ. ಹಾಲು ಕುಡಿಯುತ್ತಾ, ನಾನು ಈ ಹಣ ನಿಮಗೆ ಯಾವುದೇ ಕಾರಣಕ್ಕೂ ಹಣ ವಾಪಸ್ ಕೊಡಲ್ಲ ಎಂದು ಹೇಳುತ್ತಾಳೆ. ಆನಂತರ ಪತ್ನಿ ಅನುಮಾನದಿಂದ ಹಾಲು ಕುಡಿಯಲು ಇಷ್ಟು ಹಣ ಕೊಡುತ್ತಿರೋದು ಯಾಕೆ ಎಂದು ಗಂಡನಿಗೆ ಕೇಳುತ್ತಾಳೆ. ಇದಕ್ಕೆ ಗಂಡ, ಇಂದು ನಾಗ ಪಂಚಮಿ. ನಾಗಿಣಿಗೆ ಹಾಲು ಕುಡಿಸಿದ್ರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಹಾಗಾಗಿ ನಿನಗೆ ಹಾಲು ಕುಡಿಸುತ್ತಿದ್ದೇನೆ ಎಂದು ಹೇಳುತ್ತಾನೆ. ಪತಿಯ ಮಾತು ಕೇಳಿ ಪತ್ನಿ ಶಾಕ್‌ನಿಂದ ನೋಡುತ್ತಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗುತ್ತಿದೆ. 

ಹೆದ್ದಾರಿ ಪಕ್ಕದಲ್ಲಿಯೇ ಕಾರ್ ನಿಲ್ಲಿಸಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್; ಓಯೋ ರೂಮ್‌ಗೆ ಹೋಗಿ ಎಂದ ಜನರು

ಇದೇ ರೀತಿಯ ಕಂಟೆಂಟ್‌ವುಳ್ಳ ಮತ್ತೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳಾ ಉದ್ಯೋಗಿ ತನ್ನ ಮ್ಯಾನೇಜರ್‌ಗೆ ಹಾಲು ಕೊಡುತ್ತಾಳೆ. ಮ್ಯಾನೇಜರ್ ಯಾಕೆ ಎಂದು ಕೇಳಿದಾಗ ಇವತ್ತು ನಾಗರ ಪಂಚಮಿಯಾಗಿದ್ದು, ನೀವೇ ನಮ್ಮ ನಾಗಿಣಿ ಅಲ್ಲವೆ ಎಂದು ಕಾಲೆಳೆಯುತ್ತಾರೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕರ್ನಾಟದಲ್ಲಿ ಟ್ರೆಂಡ್‌ಗೆ ಬಂದ ಜನಪದ ಹಾಡುಗಳು

ನಾಗರ ಪಂಚಮಿ ಹಬ್ಬ ಬರುತ್ತಿದ್ದಂತೆ ಕರ್ನಾಟಕದಲ್ಲಿ ಕೆಲವು ಹಾಡುಗಳು ವೈರಲ್ ಆಗುತ್ತಿರುತ್ತವೆ. ಇದೇ ಹಾಡಿನ ವಿಡಿಯೋಗಳನ್ನು ಜನರು ವಾಟ್ಸಪ್ ಸ್ಟೇಟಸ್‌ನಲ್ಲಿರಿಸಿಕೊಳ್ಳುತ್ತಾರೆ. ಪಂಚಮಿಗೆ ಬಂದಾಕಿ ನನ್ನ ಭೇಟಿಗೆ ಬರಲಿಲ್ಲ ಯಾಕೆ ಎಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಜೊತೆ 'ಇನ್ನು ಯಾಕೆ ಅಣ್ಣ ಹಬ್ಬಕ್ಕೆ ಕರಿಯಾಕೆ ಬಂದಿಲ್ಲ, ಹಾಲುಂಡೆ ಹೋಗೆ ನಾಗಮ್ಮ ಹಾಡುಗಳು ವೈರಲ್ ಆಗಿವೆ.

ಸರಸರನೇ ಬಂದು ಚಪ್ಪಲಿ ಕದ್ದೊಯ್ದ ಹಾವು

click me!