
ಅಹಮ್ಮದಾಬಾದ್(ಜ.04) ಆಯೋಧ್ಯೆ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮನ ದರ್ಶನ ಮಾಡಲು ಕೋಟ್ಯಾಂತರ ಹಿಂದೂಗಳು ಕಾಯುತ್ತಿದ್ದಾರೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ರಾಮ ಮಂದಿರ ಉದ್ಘಾಟನೆಗೂ ಮೊದಲು ರಾಮಲಲ್ಲಾ ದರ್ಶನ ಮಾಡಲು ಆಯೋಧ್ಯೆಗೆ ರೈಲು ಹತ್ತಿದ ಕುಟುಂಬಕ್ಕೆ ಆಘಾತವಾಗಿದೆ. ಪತಿ, ಪತ್ನಿ ಹಾಗೂ ಮಕ್ಕಳು ಆಯೋಧ್ಯೆ ರೈಲು ಹತ್ತಿದ್ದಾರೆ. ಆದರೆ ರೈಲು ಹತ್ತಿದ ಕೆಲ ಹೊತ್ತಲ್ಲಿ ಪತಿ ನಿದ್ರೆಗೆ ಜಾರಿದ್ದಾರೆ. ಸುಮಾರು 4 ಗಂಟೆ ಬಳಿಕವೂ ಪತಿ ಏಳದ ಕಾರಣ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ.ಆದರೆ ಪತಿ ನಿದ್ರೆಯಲ್ಲಿ ಪ್ರಾಣಬಿಟ್ಟ ಘಟನೆ ನಡೆದಿದೆ. ಅದಾಗಲೇ ಕೆಲ ದೂರ ಸಂಚರಿಸಿದ್ದ ಕುಟುಂಬ, ಕೊನೆಗೆ ಮೃತದೇಹದ ಜೊತೆ 13 ಗಂಟೆ ಕಾಲ ಪ್ರಯಾಣ ಮಾಡಿದ್ದಾರೆ.
ಸೂರತ್‌ನಿಂದ ಕುಟುಂಬವೊಂದು ಸಬರಮತಿ ಎಕ್ಸ್‌ಪ್ರೆಸ್ ರೈಲು ಹತ್ತಿದೆ. ಆಯೋಧ್ಯೆಗೆ ತೆರಳುವ ರೈಲು ಹತ್ತಿದ ಕುಟುಂಬ ಅತೀವ ಸಂತಸದಲ್ಲಿತ್ತು. ರೈಲು ಹತ್ತಿದ ಕೆಲ ಹೊತ್ತಿನ ಬಳಿಕ ಪತಿ ನಿದ್ರೆಗೆ ಜಾರಿದ್ದಾರೆ. ಪತ್ನಿಯ ಪಕ್ಕದ ಸೀಟಿನಲ್ಲೇ ಕುಳಿತಿದ್ದ ಪತಿ ನಿದ್ರೆ ಜಾರಿ 4 ಗಂಟೆ ಕಳೆದರೂ ಎದ್ದಿಲ್ಲ. ಇತ್ತ ಪತಿ ಹಾಗೂ ಮಕ್ಕಳು ತಂದೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಂದೆ ಏಳಲೇ ಇಲ್ಲ.
ಜನಸಾಮಾನ್ಯರಿಗೆ ಕೇಂದ್ರದ ಬಂಪರ್, ಶ್ರೀರಾಮ ಮಂದಿರ ದರ್ಶನಕ್ಕೆ ಪ್ರತಿ ದಿನ ಆಯೋಧ್ಯೆಗೆ 35 ರೈಲು!
ಸಹ ಪ್ರಯಾಣಿಕರು ನೀರು ಚುಮುಕಿಸಿದ್ದಾರೆ. ಆದರೂ ಪತಿ ಎದ್ದಿಲ್ಲ. ಇದೇ ವೇಳೆ ಸಹಪ್ರಯಾಣಿಕರು ನಾಡಿ ಮಿಡಿತ ಪರಿಶೀಲಿಸಿದಾಗ ಅಚ್ಚರಿ ಕಾದಿದೆ. ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಈ ಮಾತನ್ನು ನಂಬರು ಪತಿ ಹಾಗೂ ಮಕ್ಕಳು ಮಾತ್ರವಲ್ಲ, ಇತರ ಪ್ರಯಾಣಿಕರು ತಯಾರಿಲ್ಲ. ತಮ್ಮ ಪಕ್ಕದಲ್ಲಿ ನಿದ್ರಿಸುತ್ತಾ ಪ್ರಯಾಣಿಸುತ್ತಿರುವ ವ್ಯಕ್ತಿ ಸತ್ತಿದ್ದಾರೆ ಅನ್ನೋದನ್ನು ನಂಬಲು ಸಾಧ್ಯವಾಗಲೇ ಇಲ್ಲ.
ತುರ್ತ ಕರೆ ಮೂಲಕ ರೈಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸತತ 13 ಗಂಟೆಗಳ ಪ್ರಯಾಣದ ಬಳಿಕ ಜಾನ್ಸಿ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು, ವೈದ್ಯರ ತಂಡ ಆಗಮಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ದೃಢಪಡಿಸಿದ್ದಾರೆ. ಬಳಿಕ ಜಾನ್ಸಿ ರೈಲು ನಿಲ್ದಾಣದಲ್ಲಿ ಮೃತದೇಹ ಇಳಿಸಲಾಗಿದೆ. ಆಯೋಧ್ಯೆ ಹೊರಟ ಕುಟುಂಬ ತಂದೆಯ ಮೃತದೇಹದೊಂದಿಗೆ ಮರಳಿ ಸೂರತ್‌ಗೆ ಆಗಮಿಸಿದೆ.
ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ: ರಾಜ್ಯಕ್ಕೂ 3 ರೈಲುಗಳ ಗಿಫ್ಟ್ ನೀಡಿದ ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ