ಉಗ್ರ ದಾವುದ್ ಇಬ್ರಾಹಿಂ ಒಡೆತನದ ಮುಂಬೈನ 4 ಜಮೀನು ಹರಾಜು, ಕೇವಲ 19 ಲಕ್ಷ ರೂಪಾಯಿ!

Published : Jan 04, 2024, 08:59 PM ISTUpdated : Jan 04, 2024, 09:06 PM IST
ಉಗ್ರ ದಾವುದ್ ಇಬ್ರಾಹಿಂ ಒಡೆತನದ ಮುಂಬೈನ 4 ಜಮೀನು ಹರಾಜು, ಕೇವಲ 19 ಲಕ್ಷ ರೂಪಾಯಿ!

ಸಾರಾಂಶ

ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರ ದಾವುದ್ ಇಬ್ರಾಹಿಂ ಒಡೆತದ ನಾಲ್ಕು ಆಸ್ತಿಗಳ ಹರಾಜು ಜನವರಿ 5 ರಂದು ನಡೆಯಲಿದೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ 4 ಕೃಷಿ ಜಮೀನನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ. ಇದರ ಬೆಲೆ ಕೇವಲ 19 ಲಕ್ಷ ರೂಪಾಯಿ ಮಾತ್ರ.

ಮುಂಬೈ(ಜ.04) ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಇಬ್ರಾಹಿಂ ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾನೆ. ದಾವುದ್ ಇಹ್ರಾಹಿಂಗೆ ವಿಷವುಣಿಸಲಾಗಿದೆ, ಹತ್ಯೆಯಾಗಿದ್ದಾನೆ ಅನ್ನೋ ಊಹಾಪೋಹಗಳು ಹರಿದಾಡಿತ್ತು. ಈ ಬೆಳವಣಿಗೆ ಬಳಿಕ ಇದೀಗ ದಾವುದ್ ಇಬ್ರಾಹಿಂ ಪಿತ್ರಾರ್ಜಿತ ಆಸ್ತಿಗಳ ಪೈಕಿ ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ 4 ಕೃಷಿ ಜಮೀನು ನಾಳೆ(ಜ.05) ಹರಾಜು ಮಾಡಲಾಗುತ್ತದೆ. ದಾವುದ್ ಒಡೆತದನ ಈ ಆಸ್ತಿಗಳನ್ನು ಸರ್ಕಾರ ಹರಾಜು ಮಾಡುತ್ತಿದೆ.

ದಾವುದ್ ಇಬ್ರಾಹಿಂ ಬಾಲ್ಯವನ್ನು ಕಳೆದ ಮನೆ, ಕೃಷಿ ಜಮೀನು ನಿವೇಷನ ಸೇರಿದಂತೆ 4 ಪ್ರಮುಖ ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗಿಟ್ಟಿದೆ. ಈ ಆಸ್ತಿಗಳನ್ನು ಉಗ್ರ ದಾವುದ್ ಇಬ್ರಾಹಿಂ ಅವರ ಅಕ್ರಮ ವಿದೇಶಿ ವಿನಿಮಯ, ಕಳ್ಳ ಸಾಗಾಣಿಕೆ ಪ್ರಕರಣದಡಿಯಲ್ಲಿ ಆ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಈ ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ಹರಾಜಿಗೆ ಇಟ್ಟಿದೆ.

ವಿಷವುಣಿಸಿ ಮೋಸ್ಟ್ ವಾಂಟೆಡ್ ಉಗ್ರ ದಾವುಡ್ ಇಬ್ರಾಹಿಂ ಹತ್ಯೆ, ಸುದ್ದಿ ಖಚಿತಪಡಿಸಿದ ಪಾಕ್ ಮಾಧ್ಯಮ!

4 ನಿವೇಷನದ ಒಟ್ಟು ಮೌಲ್ಯ ಕೋಟಿ ಕೋಟಿ ರೂಪಾಯಿ. ಆದರೆ ಹರಾಜಿನ ಆರಂಭಿಕ ಬೆಲೆ ಕೇವಲ 19 ಲಕ್ಷ ರೂಪಾಯಿ. ಇದಕ್ಕೆ ಮುಖ್ಯ ಕಾರಣ ಉಗ್ರ ದಾವುದ್ ಇಬ್ರಾಹಿಂ ಆಸ್ತಿಯಾಗಿರುವ ಕಾರಣ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹರಾಜಿನ ನೋಟಿಫೈ ಮಾಡಿದ ಬಳಿಕ ಯಾರೊಬ್ಬರು ಹರಾಜಿನಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿರಲಿಲ್ಲ. ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳುವರ ಸಂಖ್ಯೆ ಅತೀ ವಿರಳವಾಗಿತ್ತು. ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದರೂ, ಆತನ ಸಹಚರರು, ಸ್ಲೀಪರ್ ಸೆಲ್ ತಂಡಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳು ಹೊಸದೇನಲ್ಲ. ದಾವುದ್ ಆಸ್ತಿ ಖರೀದಿಸಿದ ಬಳಿಕ ಸಮಸ್ಯೆ ಎದುರಾಗುವ ಆತಂಕ ಸಾಧ್ಯತೆ ಕಾರಣ ಖರೀದಿಗೆ ಯಾರೂ ಮಂದೆ ಬರುತ್ತಿಲ್ಲ.

ದಾವುದ್ ಇಬ್ರಾಹಿಂ ಆಸ್ತಿಗಳನ್ನು ಹರಾಜಿಗಿಡುವುದು ಇದೇ ಮೊದಲಲ್ಲ. ಕಳೆದ 9 ವರ್ಷಗಳಲ್ಲಿ ದಾವುದ್ ಇಬ್ರಾಹಿಂ ಒಢೆತನಕ್ಕೆ ಸೇರಿದ 11 ಆಸ್ತಿಗಳನ್ನು ಮಾರಾಟ ಮಾಡಲಾಗಿದೆ. ಸುಮಾರು 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. 

ಉಗ್ರ ದಾವುದ್ ಇಬ್ರಾಹಿಂ ನಿಧನ ಸುದ್ದಿ, ಪಾಕಿಸ್ತಾನದಲ್ಲಿ ಇಂಟರ್ನೆಟ್, ಸೋಶಿಯಲ್ ಮೀಡಿಯಾ ಬಂದ್!

ಇತ್ತೀಚೆಗೆ ದಾವುದ್ ಹತ್ಯೆಯಾಗಿದೆ ಅನ್ನೋ ವದಂತಿ ಜೋರಾಗಿ ಹಬ್ಬಿತ್ತು. ‘ಪಾಕಿಸ್ತಾನದ ಕರಾಚಿಯಲ್ಲಿರುವ ಭಾರತದ ಮೋಸ್ಟ್‌ ವಾಂಟೆಡ್‌ ಪಾತಕಿ ದಾವೂದ್‌ ಇಬ್ರಾಹಿಂಗೆ ಯಾರೋ ಅಜ್ವ್ತ ವ್ಯಕ್ತಿಗಳು ವಿಷವುಣಿಸಿದ್ದಾರೆ. ಹೀಗಾಗಿ ಕರಾಚಿಯ ಆಸ್ಪತ್ರೆಯೊಂದಕ್ಕೆ ಬಿಗಿ ಭದ್ರತೆಯ ನಡುವೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ’ ಎಂದು ಎಂಬ ವದಂತಿಗಳು ಭಾನುವಾರ ಹರಿದಾಡಿವೆ. ಈ ಬಗ್ಗೆ ಪಾಕಿಸ್ತಾನದ ಮಾಧ್ಯಮವಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್