ನಟ ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆ‌ರ್ ದಾಖಲು 

By Kannadaprabha News  |  First Published Nov 7, 2024, 8:21 AM IST

ನಟ ಮಿಥುನ್ ಚಕ್ರವರ್ತಿ ವಿರುದ್ಧ ಬಿದಾನ್ನಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನು ಬಿಜೆಪಿ ಖಂಡಿಸಿದೆ.


ಕೋಲ್ಕತಾ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊರಿಸಿ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಬಿದಾನ್ನಗರ್ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸಭೆಯಲ್ಲಿ ಮಿಥುನ್, 2026ರಲ್ಲಿ ಪಶ್ಚಿಮ ಬಂಗಾಳದ ಸಿಂಹಾಸನ ಬಿಜೆಪಿಗೆ ಸೇರಲಿದ್ದು, ಅದನ್ನು ಸಾಧಿಸಲು ಸಾಧ್ಯವಾದುದನ್ನೆಲ್ಲಾ ಮಾಡುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾ ಯಿಸದಂತೆ ಬಿಜೆಪಿ ಮತದಾರರಿಗೆ ಯಾರೂ ಬೆದರಿಸಬಾರದು' ಎಂದು ಟಿಎಂಸಿಗೆ ಎಚ್ಚರಿಸಿದ್ದರು. 

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಸೇಡಿನ ರಾಜಕೀಯ ಎಂದು ಕರೆದಿರುವ ಕೇಂದ್ರ ಸಚಿವ ಸುಕಾಂತ್ ಮಜುಂದಾರ್, 'ಮಿಥುನ್ ಭಾಷಣದಲ್ಲಿ ಪ್ರಚೋದನಕಾರಿ ಎನಿಸುವಂಥದ್ದು ಏನೂ ಇರಲಿಲ್ಲ. ಇದು ಪೊಲೀಸರನ್ನು ರಾಜಕೀಯ ಅಸ್ತ್ರವಾಗಿ ಬಳಸಿ ಅವರನ್ನು ಬೆದರಿಸುವ ಸಂಚು' ಎಂದರು.

Tap to resize

Latest Videos

click me!