ಮಾನಸಿಕ ಅಸ್ವಸ್ಥ ಭಿಕ್ಷುಕಿ ಬಳಿ ಲಕ್ಷಕ್ಕೂ ಅಧಿಕ ಹಣ ಪತ್ತೆ

Published : Oct 27, 2025, 06:02 PM IST
lakhs found with Beggar in uttarakhand

ಸಾರಾಂಶ

beggar savings: ದಶಕದಿಂದ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕ ಮಹಿಳೆಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಆಕೆಯನ್ನು ಸ್ಥಳಾಂತರಿಸಲು ಯತ್ನಿಸಿದಾಗ, ಆಕೆ ಬಳಿ ಇದ್ದ ಎರಡು ಚೀಲಗಳಲ್ಲಿ ಅಪಾರ ಪ್ರಮಾಣದ ಹಣ ಇರುವುದು ಬೆಳಕಿಗೆ ಬಂದಿದೆ.

ಭಿಕ್ಷುಕಿ ಬಳಿ ಇತ್ತು ಲಕ್ಷಕ್ಕೂ ಅಧಿಕ ಮೊತ್ತ:

ಉತ್ತರಾಖಂಡ: ಒಂದು ದಶಕಕ್ಕೂ ಹೆಚ್ಚು ಕಾಲ ಉತ್ತರಾಖಂಡದ ರೂರ್ಕಿಯ ಬೀದಿಗಳಲ್ಲಿ ವಾಸಿಸುತ್ತಿದ್ದ ಭಿಕ್ಷುಕ ಮಹಿಳೆಯೊಬ್ಬರ ಬಳಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣ ಪತ್ತೆಯಾದಂತಹ ಘಟನೆ ನಡೆದಿದೆ. ಈಕೆ ಭೀಕ್ಷಕಿ ಮನೆ ಮಠ ಆಸ್ತಿ ಸಂಪತ್ತು ಯಾವುದೂ ಇಲ್ಲದ ನಿರ್ಗತಿಕಳು ಎಂದು ಅಲ್ಲಿನ ಜನ ಭಾವಿಸಿದ್ದರು. ಅದರೆ ಆಕೆಯ ಬಳಿ ಇಷ್ಟೊಂದು ಮೊತ್ತದ ಹಣ ನೋಡಿ ಅಚ್ಚರಿಪಡುವ ಸರದಿ ಅಲ್ಲಿನ ಸ್ಥಳೀಯ ಜನರದ್ದಾಗಿತ್ತು.

ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆ

ಉತ್ತರಾಖಂಡ್‌ನ ರೂರ್ಕಿಲ್ಲಿ ಈ ಘಟನೆ ನಡೆದಿದೆ. ಕಳೆದ 12 ವರ್ಷಗಳಿಂದ ಈ ಮಹಿಳೆ ಇಲ್ಲಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಆಕೆಯನ್ನು ಸ್ಥಳೀಯರು ಆಕೆ ಇದ್ದ ಸ್ಥಳದಿಂದ ಏಳಿಸುವ ಪ್ರಯತ್ನ ಮಾಡಿದಾಗ ಈಕೆಯ ಬಳಿ ಇಷ್ಟು ಮೊತ್ತದ ಹಣ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಪಟ್ಟಣಪುರ ಪ್ರದೇಶದ ಮಂಗಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈಕೆ ಬಳಿ ಎರಡು ಚೀಲಗಳಲ್ಲಿ ಅಪಾರ ಪ್ರಮಾಣದ ಹಣ ಇತ್ತು. ಒಂದು ರೂಪಾಯಿಯಿಂದ ಹಿಡಿದು 100 ರೂಪಾಯಿಯವರೆಗೆ ನಾಣ್ಯ ಹಾಗೂ ನೋಟುಗಳಿದ್ದಿದ್ದರಿಂದ ಹಣವನ್ನು ಅಧಿಕಾರಿಗಳು ಬೆಳಗ್ಗಿನಿಂದ ಸಂಜೆಯವರೆಗೂ ಎಣಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಆಕೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಣ ಇರುವ ವಿಚಾರ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅಧಿಕಾರಿಗಳು ಈ ಹಣವನ್ನು ಎಣಿಕೆ ಮಾಡಿದ್ದಾರೆ.

ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಈಗಾಗಲೇ ₹1 ಲಕ್ಷಕ್ಕೂ ಹೆಚ್ಚು ಹಣ ಈಗಾಗಲೇ ಎಣಿಕೆಯಾಗಿದೆ ಎಂದು ತಿಳಿದು ಬಂದಿದ್ದು, ಇದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಏಕೆಂದರೆ ಆಕೆಯನ್ನು ದಿನವೂ ನೋಡುತ್ತಿದ್ದವರು ಆಕೆಯನ್ನು ಏನು ಇಲ್ಲದ ನಿರ್ಗತಿಕಳಂತೆಯೇ ನೋಡುತ್ತಿದ್ದರು. ಆಕೆಯ ಬಳಿಯಿಂದ ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯು ಉಳಿತಾಯ ಮಾಡುವ ನಮ್ಮ ಅಭ್ಯಾಸದ ಬಗ್ಗೆ ಚಿಂತನೆಗೆ ನಾಂದಿ ಹಾಡಿದೆ. ಆರ್ಥಿಕ ತಜ್ಞರು ಹೇಳುವಂತೆ, ಹೆಚ್ಚಿನ ಆದಾಯವಲ್ಲ ಸ್ಥಿರವಾದ ಶಿಸ್ತು ಸಂಪತ್ತಿನ ಶೇಖರಣೆಗೆ ಪ್ರಮುಖ ಕಾರಣ. ಕೇವಲ ಭಿಕ್ಷೆ ಬೇಡಿ ಉಳಿಸುವ ಮೂಲಕ ಈಕೆ ಇಷ್ಟೊಂದು ಸಂಪಾದನೆ ಮಾಡಿದ್ದಾಳೆ ಎಂದಾದರೆ ದಿನವು ದುಡಿಯುವುದರಲ್ಲೇ ತುಸು ಉಳಿಸಿದರೆ ಎಲ್ಲರೂ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.

ಇದನ್ನೂ ಓದಿ: ಸಿವಶ್ರೀ ನಿರರ್ಗಳವಾದ ಕನ್ನಡದ ಹಿಂದಿರೋದು ಪತಿ ತೇಜಸ್ವಿ ಸೂರ್ಯ ಅಲ್ಲ: ಮತ್ತಿನ್ಯಾರು?

ಇದನ್ನೂ ಓದಿ:  ಕಪ್ಪೆ ಕರ ಕರ ತುಪ್ಪ ಜಲಿ ಜಲಿ ಹಾಡಿಗೆ ಎನಿಮೇಷನ್ ಟಚ್: ಈಗ ಈ ಹಾಡಿಗೆ ಕಳೆ ಬಂತು ನೋಡಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್