ಮೂವರು ಕಾಂಗ್ರೆಸ್‌ ಶಾಸಕರಿದ್ದ ಕಾರಲ್ಲಿ ಪತ್ತೆಯಾಯ್ತು ಕಂತೆ ಕಂತೆ ನೋಟು..!

By BK AshwinFirst Published Jul 31, 2022, 11:33 AM IST
Highlights

ಪಶ್ಚಿಮ ಬಂಗಾಳದ ಹೌರಾದಲ್ಲಿ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರಿದ್ದ ಕಾರಿನಲ್ಲಿ ಕಂತೆ ಂತೆ ಹಣ ಪತ್ತೆಯಗಿದೆ. ಇದು ಆಪರೇಷನ್‌ ಕಮಲದ ಭಾಗ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಪಶ್ಚಿಮ ಬಂಗಾಳದ ಕೋಲ್ಕತ್ತದ ಅವಳಿ ನಗರವಾದ ಹೌರಾ ಪೊಲೀಸರು ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ. ಆ ಕಾಂಗ್ರೆಸ್‌ ಶಾಸಕರಿದ್ದ ಕಾರಿನಲ್ಲಿ ಕಂತೆ ಕಂತೆ ಹಣವಿದ್ದ ಬಗ್ಗೆ ಪೊಲೀಸರಿಗೆ ಸುಳಿವು ದೊರೆತ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕರಿದ್ದ ಕಾರನ್ನು ಪೊಲೀಸರು ಪ್ರಶ್ನೆ ಮಾಡಿದ್ದು ,ನಂತರ ಶಾಸಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಜಾರ್ಖಂಡ್‌ ಪೊಲೀಸರಿದ್ದ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು, ಕಾರಿನಲ್ಲಿ ಹೆಚ್ಚು ಹಣವನ್ನು ಪತ್ತೆ ಹಚ್ಚಿದ್ದಾರೆ. ನಂತರ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕರನ್ನು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ತುಂಬಾ ಹಣವಿತ್ತು, ಈ ಹಿನ್ನೆಲೆ ಅದನ್ನು ಎಣಿಸಲು ಕೌಂಟಿಂಗ್ ಮಷಿನ್‌ನ ಅಗತ್ಯವಿದೆ, ಈ ಬಗ್ಗೆ ಬ್ಯಾಂಕ್‌ವೊಂದಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದೂ ಹೌರಾ ಎಸ್‌ಪಿ ಸ್ವಾತಿ ಭಂಗಾಲಿಯಾ ಮಾಹಿತಿ ನೀಡಿದ್ದಾರೆ.

Howrah,West Bengal| We've nabbed 3 MLAs of Congress from Jharkhand namely Irfan Ansari, MLA from Jamtara, Rajesh Kachhap, MLA from Khijri & Naman Bixal, MLA from Kolebira with huge amounts of cash. We would only be able to count it once counting machines come: SP Swati Bhangalia pic.twitter.com/yo8VYyW9Yq

— ANI (@ANI)

4 ಕಾರಿನಲ್ಲಿ ಹಣ ತುಂಬಿಕೊಂಡು ಎಸ್ಕೇಪ್, ಅರ್ಪಿತಾ ಚಟರ್ಜಿ ಭ್ರಷ್ಟಾಚಾರ ರಹಸ್ಯ ಬಿಚ್ಚಿಟ್ಟ ಇಡಿ!

ಕಾಂಗ್ರೆಸ್‌ ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಚ್ಛಾಪ್‌ ಹಾಗೂ ನಮನ್‌ ಬಿಕ್ಸಾಲ್‌ ಕೊಂಗಾರಿ ಹೌರಾದ ರಾಣಿಹಟಿಯ ರಾಷ್ಟ್ರೀಯ ಹೆದ್ದಾರಿ - 16 ರಲ್ಲಿ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆ ಕಾರಿನಲ್ಲಿ ಮೂವರು ಶಾಸಕರನ್ನು ಹೊರತುಪಡಿಸಿ ಇತರೆ ಇಬ್ಬರು ಎಂದೂ ತಿಳಿದುಬಂದಿದೆ. ಅನ್ಸಾರಿ ಜಮ್ತಾರಿಯ ಶಾಸಕರಾಗಿದ್ದರೆ, ಕಚ್ಛಾಪ್‌ ರಾಂಚಿ ಜಿಲ್ಲೆಯ ಖಿಜ್ರಿಯ ಶಾಸಕ ಹಾಗೂ ಕೊಂಗಾರಿ ಸಿಮ್ಡಾಗಾ ಜಿಲ್ಲೆಯ ಕೊಲೆಬಿರಾದ ಶಾಸಕ ಎಂದು ತಿಳಿದುಬಂದಿದೆ. 
 
ಬಿಜೆಪಿಯ ‘ಆಪರೇಷನ್‌ ಕಮಲ’ದ ಹಣ ಎಂದ ಕಾಂಗ್ರೆಸ್‌..!

ಇನ್ನು, ಪಶ್ಚಿಮ ಬಂಗಾಳದ ಹೌರಾದಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ಶಾಸಕರು ಹಣದೊಂದಿಗೆ ಸಿಕ್ಕಿಬಿದ್ದಿರುವ ಬಗ್ಗೆ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದ್ದು, ಇದು ಆಪರೇಷನ್‌ ಕಮಲದ ಹಣ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಾಡಿದಂತೆ ಜಾರ್ಖಂಡ್‌ನಲ್ಲೂ ಸರ್ಕಾರವನ್ನು ಪತನ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದು, ಜಾರ್ಖಂಡ್‌ನಲ್ಲಿ ಬಿಜೆಪಿಯ ‘ಆಪರೇಷನ್‌ ಕಮಲ’ ಇಂದು ರಾತ್ರಿ ಬಹಿರಂಗಗೊಂಡಿದೆ ಎಂದು ಶನಿವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ. 

झारखंड में भाजपा का 'ऑपरेशन लोटस' आज की रात हावड़ा में बेनकाब हो गया। दिल्ली में 'हम दो' का गेम प्लान झारखंड में वही करने का है जो उन्होंने महाराष्ट्र में एकनाथ-देवेंद्र(E-D) की जोड़ी से करवाया।

— Jairam Ramesh (@Jairam_Ramesh)

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆಯಲ್ಲಿ ಮತ್ತೆ ಸಿಕ್ತು 28 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಈಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್‌, ಬಿಜೆಪಿ ಅನೈತಿಕವಾಗಿ ಅಧಿಕಾರ ಪಡೆದಿದೆ. ದೆಹಲಿಯ ನಾಯಕರು E - D (Eknath Shinde - Devendra Fadnavis) ಯನ್ನು ಮಹಾರಾಷ್ಟ್ರದಲ್ಲಿ ನೇಮಿಸಿದ್ದಾರೆ ಎಂದು ಆರೋಪಿಸಿತ್ತು. ಜಾರ್ಖಂಡ್‌ನ ಹೇಮಂತ್‌ ಸೊರೇನ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿರುವ ಯತ್ನದ ಭಾಗವಿದು ಎಂದು ಸಹ ಜಾರ್ಖಂಡ್‌ ಕಾಂಗ್ರೆಸ್‌ ಆರೋಪಿಸಿದೆ.  

ಹೌರಾ ಎಸ್‌ಪಿ ಹೇಳಿದ್ದೇನು..?
ಕಪ್ಪು ಕಾರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಬಗ್ಗೆ ನಮಗೆ ಸುಳಿವು ದೊರೆತಿತ್ತು. ಈ ಹಿನ್ನೆಲೆ ನಾವು ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದವು, ಈ ವೇಳೆ ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರಿದ್ದ ಎಸ್‌ಯುವಿಯನ್ನು ಪರಿಶೀಲನೆ ನಡೆಸಿದೆವು. ಆ ವೇಳೆ ದೊಡ್ಡ ಮೊತ್ತದ ಹಣ ದೊರೆತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಎಷ್ಟು ಮೊತ್ತದ ಹಣವಿದೆ ಎಂಬುದನ್ನು ಪತ್ತೆ ಹಚ್ಚಲು ಕೌಂಟಿಂಗ್ ಮಷಿನ್‌ಗಳನ್ನು ತರಿಸಲಾಗುತ್ತಿದೆ. ಈ ಹಣದ ಮೂಲದ ಬಗ್ಗೆ ನಾವು ಕಾಂಗ್ರೆಸ್‌ ಶಾಸಕರನ್ನು ಪ್ರಶ್ನೆ ಮಾಡಲಾಗುತ್ತಿದೆ ಹಾಗೂ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದನ್ನೂ ಪ್ರಶ್ನೆ ಮಾಡಿರುವುದಾಗಿಯೂ ಎಸ್‌ಪಿ ತಿಳಿಸಿದ್ದಾರೆ. 

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಅಪಾರ್ಟ್‌ಮೆಂಟ್‌ನಲ್ಲಿ 50 ಕೋಟಿಗೂ ಹೆಚ್ಚು ಹಣ ಹಾಗೂ ಕೆಜಿಗಟ್ಟಲೆ ಬಂಗಾರದ ಆಭರಣಗಳು ದೊರೆತಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲೇ ಜಾರ್ಖಂಡ್‌ ಕಾಂಗ್ರೆಸ್‌ ಶಾಸಕರ ಬಳಿ ಹಣ ಪತ್ತೆಯಾಗಿದೆ.     

click me!