ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವರ್ಚುವಲ್ ಉಪಸ್ಥಿತಿಯಲ್ಲಿ ದೇಶಾದ್ಯಂತ ಹಲವು ಪ್ರದೇಶದಲ್ಲಿ ಸುಮಾರು 30 ಸಾವಿರ ಕೇಜಿಗೂ ಹೆಚ್ಚು ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.
ನವದೆಹಲಿ (ಜು.31): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವರ್ಚುವಲ್ ಉಪಸ್ಥಿತಿಯಲ್ಲಿ ದೇಶಾದ್ಯಂತ ಹಲವು ಪ್ರದೇಶದಲ್ಲಿ ಸುಮಾರು 30 ಸಾವಿರ ಕೇಜಿಗೂ ಹೆಚ್ಚು ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಚಂಡೀಗಢದಿಂದ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದ ಶಾ ದೆಹಲಿ, ಮುಂಬೈ, ಚೆನ್ನೈ, ಗುವಾಹಟಿ ಮತ್ತು ಕೋಲ್ಕತಾಗಳಲ್ಲಿ ನಡೆದ ನಾಶ ಪ್ರಕ್ರಿಯೆಯನ್ನು ವೀಕ್ಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸುಮಾರು 75 ಸಾವಿರ ಕೇಜಿಗೂ ಹೆಚ್ಚು ಮಾದಕವಸ್ತುವನ್ನು ನಾಶ ಮಾಡುವ ಶಪಥ ಕೈಗೊಂಡಿದ್ದರು.
ಆದರೆ ಈಗಾಗಲೇ ಸುಮಾರು 82 ಸಾವಿರ ಕೇಜಿಗೂ ಹೆಚ್ಚು ಮಾದಕ ವಸ್ತುವನ್ನು ನಾಶ ಮಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಮಾದಕವಸ್ತು ನಾಶ ಪ್ರಕ್ರಿಯೆಯನ್ನು ಜೂ.1ರಿಂದ ಮಾದಕ ವಸ್ತು ನಿಯಂತ್ರಣಾ ಮಂಡಳಿ ಆರಂಭಿಸಿದ್ದು, ಜು.29ರವರೆಗೆ 11 ರಾಜ್ಯಗಳಲ್ಲಿ 51,217 ಕೇಜಿ ಡ್ರಗ್ಸ್‌ನ್ನು ನಾಶಪಡಿಸಿದೆ. ಶನಿವಾರ ದೆಹಲಿಯಲ್ಲಿ 19 ಸಾವಿರ ಕೇಜಿ, ಚೆನ್ನೈನಲ್ಲಿ 1,300 ಕೇಜಿ, ಗುವಾಹಟಿಯಲ್ಲಿ 6 ಸಾವಿರ ಕೇಜಿ ಹಾಗೂ ಕೋಲ್ಕತಾದಲ್ಲಿ 3 ಸಾವಿರ ಕೇಜಿ ಮಾದಕ ವಸ್ತು ನಾಶ ಮಾಡಲಾಗಿದೆ.
ಪಂಜಾಬ್ ಪೊಲೀಸರಿಂದ 7 ಲಕ್ಷ ಡ್ರಗ್ಸ್ ಕ್ಯಾಪ್ಸೂಲ್ ವಶ
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬೃಹತ್ ಕಾರ್ಯಾಚರಣೆ: ಸಿಲಿಕಾನ್ ಸಿಟಿಯಲ್ಲಿ ಹೈ ಎಂಡ್ ಪಾರ್ಟಿ ಅಂದಾಗ ಅಲ್ಲಿ ಮದ್ಯದ ಅಮಲಿನ ಜೊತೆ ಮಾದಕ ದ್ರವ್ಯದ ಚಟಕ್ಕೆ ಸೆಲೆಬ್ರೆಟಿಗಳು ದಾಸರಾಗಿದ್ದಾರೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಸಹ ಮಾದಕ ದವ್ಯ ವ್ಯಸನಿಗಳನ್ನ ನಿಯಂತ್ರಣ ಮಾಡಲು ಅಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಆಕ್ಟಿವ್ ಆಗಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಪ್ರತಿ ನಿತ್ಯ ಡ್ರಗ್ ಪೆಡ್ಲರ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಅಷ್ಟಕ್ಕೂ ವ್ಯಸನಿಗಳನ್ನ ನಿಯಂತ್ರಿಸುವ ಬದಲು ಮೂಲವನ್ನ ಹುಡುಕಿ ಅಂದ್ರೆ ಡ್ರಗ್ ಎಲ್ಲಿಂದ ಸಪ್ಲೈ ಆಗುತ್ತಿದೆ ಅಂತವರನ್ನೇ ಹುಡುಕಿ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ವಿದೇಶಿ ಡ್ರಗ್ ಪೆಡ್ಲರ್‌ಗಳ ಮೇಲೆ ಸಮರ ಸಾರಿರುವ ಸಿಸಿಬಿ ಅಧಿಕಾರಿಗಳು ದಾಳಿಗಳನ್ನ ನಡೆಸಿ ಬಂಧನವನ್ನ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳಾದ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ, ಡಿಸಿಪಿ ಶರಣಪ್ಪ, ಡಿಸಿಪಿ ಬಸವರಾಜ ಅಂಗಡಿ ಎಸಿಪಿ ರಾಮಚಂದ್ರ ಹಾಗೂ ಇನ್ಸ್‌ಪೆಕ್ಟರ್ ಅಶೋಕ್, ದೀಪಕ್ ಸೇರಿಂದತೆ ಹಲವು ಡ್ರಗ್ ಪೆಡ್ಲರ್‌ಗಳನ್ನ ಬಂಧಿಸಿದ್ದಾರೆ. ಜನವರಿಯಿಂದ ಜುಲೈವರೆಗೆ (ಇಲ್ಲಿವರೆಗೂ) 32 ಪ್ರಕರಣಗಳನ್ನ ದಾಖಲಿಸಿದ್ದು ಅದರಲ್ಲಿ 96 ಜನ ಡ್ರಗ್ ಪೆಡ್ಲರ್‌ಗಳನ್ನ ಬಂಧನ ಮಾಡಲಾಗಿದೆ.
ಗಾಂಜಾ ಹಾವಳಿ ಹೆಚ್ಚಳ ಹಿನ್ನೆಲೆ ಗೃಹ ಸಚಿವ ಜ್ಞಾನೇಂದ್ರ ರಾಜಿನಾಮೆ ನೀಡಲಿ
ಇದರಲ್ಲಿ 13 ನೈಜೀರಿಯನ್ನ ಪೆಡ್ಲರ್‌ಗಳನ್ನ ಬಂಧನ ಮಾಡಲಾಗಿದ್ದು ಜೈಲಿನಲ್ಲಿಟ್ಟಿದ್ದಾರೆ. ಇದರ ಒಟ್ಟು ಮೊತ್ತ 5,61,23000 (ಐದು ಕೋಟಿ ಅರವತ್ತು ಲಕ್ಷಕ್ಕೂ ಅಧಿಕ) ಇನ್ನೂ ಕಳೆದ ವರ್ಷ 2021 ಜನವರಿಯಿಂದ ಜುಲೈವರೆಗೆ 27 ಕೇಸ್ ದಾಖಲಿಸಿದ್ದು 75 ಡ್ರಗ್ ಪೆಡ್ಲರ್‌ಗಳನ್ನ ಬಂಧಿಸಿದ್ದಾರೆ. ಇದರಲ್ಲಿ 25 ನೈಜೀರಿಯನ್ ಪೆಡ್ಲರ್‌ಗಳ ಬಂಧನವಾಗಿದೆ ಒಟ್ಟು ಮೌಲ್ಯ 4,92,35000 ಬೆಲೆಬಾಳುವ ಡ್ರಗ್‌ಗಳನ್ನ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದ 6 ತಿಂಗಳಲ್ಲಿ ಡ್ರಗ್ ಪೆಡ್ಲರ್‌ಗಳ ಮೇಲೆ ಅಧಿಕವಾಗಿ ಸಮರ ಸಾರಿದ್ದಾರೆ ಅಂತಲೇ ಹೇಳಬಹುದಾಗಿದೆ.