ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ, ಭವಿಷ್ಯದಲ್ಲಿ ಹೆಚ್ಚಿನ ಜೈಶಂಕರ್‌ರಂತಹ ನಾಯಕರನ್ನು ಹೇಗೆ ಸೃಷ್ಟಿಸುವುದು ಎಂದು ಕೇಳಲಾಯಿತು. ಅದಕ್ಕೆ ಅವರ ಉತ್ತರ ಏನು ಇಲ್ಲಿದೆ ನೋಡಿ.
ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಜೈಶಂಕರ್ ರಾಜಕೀಯದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು ಭಾರತ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಅವರು ಕೈಗೊಳ್ಳುವ ದಿಟ್ಟ ನಿಲುವುಗಳು ಅವರಿಗೆ ಸಾಕಷ್ಟು ಯುವ ಅಭಿಮಾನಿಗಳನ್ನು ಸೃಷ್ಟಿಸಿದೆ ಹೀಗಿರುವಾಗ ಸಂವಾದವೊಂದರಲ್ಲಿ ಜೈ ಶಂಕರ್ ಅವರಿಗೆ ಸಂದರ್ಶಕರು ಕುತೂಹಲಕಾರಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆ ಬಗ್ಗೆ ಅವರ ಉತ್ತರ ಇಲ್ಲಿದೆ.
ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು, ಯುವ ವೃತ್ತಿಪರರು ಇದ್ದಾರೆ ಅವರೆಲ್ಲರೂ ನಿಮ್ಮಿಂದ ಸಲಹೆ ಬಯಸಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತಕ್ಕೆ ಈಗ ಒಬ್ಬರೇ ಒಬ್ಬರು ಜೈಶಂಕರ್ ಇದ್ದಾರೆ. ಹೇಗೆ ಭವಿಷ್ಯದಲ್ಲಿ ಕನಿಷ್ಠ ಪಕ್ಷ ಐವರಾದರು ಜೈಶಂಕರ್ ಅವರಂತಹವರನ್ನು ಸೃಷ್ಟಿ ಮಾಡುವುದು ಹೇಗೆ ಎಂದು ಸಂದರ್ಶಕರು ಜೈಶಂಕರ್ ಅವರ ಬಳಿ ಕೇಳಿದ್ದಾರೆ. ಈ ಪ್ರಶ್ನೆಗೆ ಅಲ್ಲಿ ಸೇರಿದ ಸಭಿಕರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಈ ವೇಳೆ ನಕ್ಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಇದಕ್ಕೆ ಅವರಿಗೆ ಉತ್ತರ ಬೇಕಿಲ್ಲ, ಅವರಿಗೆ ಉತ್ತರ ಗೊತ್ತಿದೆ ಅವರು ನಮಗಿಂತಲೂ ತುಂಬಾ ಮುಂದಿದ್ದಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಪ್ರಾಮಾಣಿಕವಾಗಿ ಹೇಳುವುದಾದರೆ ಯಾರು ಸಾರ್ವಜನಿಕ ಜೀವನದಲ್ಲಿ ಸ್ವಲ್ಪ ಸಮಯ ಕಾರ್ಪೋರೇಟ್ ಜೀವನದಲ್ಲಿ ಸ್ವಲ್ಪ ಸಮಯ, ರಾಜತಾಂತ್ರಿಕ ಜೀವನದಲ್ಲಿ ಸ್ವಲ್ಪ ಕಳೆಯಲು ಬಯಸಿದ್ದರೆ, ಅವರಿಗೆ ನಾನು ಹೇಳುವುದಿಷ್ಟೇ, ನಾನು ನನ್ನ ದೇಶದ ಬಗ್ಗೆ ಬಹಳ ಅಶಾವಾದಿಯಾಗಿದ್ದೇನೆ. ನನ್ನ ದೇಶದ ಬಗ್ಗೆ ತುಂಬಾ ಆತ್ಮವಿಶ್ವಾಸವನ್ನು ಹೊಂದಿದ್ದೇನೆ. ಅದಕ್ಕೆ ಮುಖ್ಯ ಕಾರಣ ಯುವ ಜನತೆ ಅವರ ಆತ್ಮವಿಶ್ವಾಸ, ಅವರ ಸಾಮರ್ಥ್ಯ ನನ್ನ ಈ ಆತ್ಮವಿಶ್ವಾಸಕ್ಕೆ ಕಾರಣ ಎಂದು ಹೇಳಿದ್ದಾರೆ ಡಾಕ್ಟರ್ ಎಸ್ ಜೈಶಂಕರ್.