ಪ್ರೀತಿ ಮಾಡುವವರಿಗೆ ಪಾಠ: ಕೈ ಕೊಟ್ಟ ಹುಡುಗಿ ನೆನಪಲ್ಲಿ ಟೀ ಸ್ಟಾಲ್ ಆರಂಭಿಸಿದ ಬೇಟಾ

By Anusha KbFirst Published Nov 25, 2022, 2:46 PM IST
Highlights

ಇತ್ತೀಚೆಗೆ ಪ್ರೇಮ ವೈಫಲ್ಯಕ್ಕೊಳಗಾದ ಪ್ರೇಮಿಗಳು ತಮ್ಮ ಪ್ರೇಮವನ್ನು ಮರೆಯಲು ಸ್ವಲ್ಪ ಕ್ರಿಯೇಟಿವ್ ಅದಂತಹ ಐಡಿಯಾ ಮಾಡುತ್ತಾರೆ. ಅದೇ ರೀತಿ ಮೋಸಕ್ಕೊಳಗಾದ ಪ್ರೇಮಿಯೊಬ್ಬನ ಕ್ರಿಯೇಟಿವಿಟಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶ: ಪ್ರೀತಿಯಲ್ಲಿ ಬೀಳುವುದು ಸಹಜ. ಆದರೆ ಮೇಲೆಳುವುದು ಬಲು ಕಷ್ಟದ ಕೆಲಸ. ಪ್ರೀತಿಯಲ್ಲಿ ಬಿದ್ದವರೆಲ್ಲರೂ ಚಿರಕಾಲ ಇರಲಿ ಈ ಪ್ರೀತಿ ಅಂತ ಬೇಡಿಕೊಳ್ಳುತ್ತಾರಾದರೂ ಇತ್ತೀಚೆಗೆ ಪ್ರೀತಿ ಕ್ಷಣಿಕ ಎನಿಸಿದೆ. ಪ್ರೀತಿಯಲ್ಲಿ ಮೋಸ ಸಹಜ ಎನಿಸಿದ್ದು, ಹುಡುಗ ಹುಡುಗಿಗೆ ಹುಡುಗಿ ಹುಡುಗನಿಗೆ ಕೈ ಕೊಡುವುದು ಸಾಮಾನ್ಯವಾಗಿದೆ. ಪ್ರೀತಿಸಿದವರು ಕೈ ಕೊಟ್ಟ ಬಳಿಕ ವಿರಹವೂ ಸಾಮಾನ್ಯವಾಗಿದೆ. ಕೆಲವರು ಪ್ರೀತಿಯ ಮರೆಯಲಾಗದೇ ಖಿನ್ನತೆಗೆ ಜಾರಿದರೆ, ಮತ್ತೆ ಕೆಲವರು ಹೊಸಬರನ್ನು ಅರಸುತ್ತಾ ಅವರಲ್ಲಿ ಹಳೆ ಹುಡುಗ/ಹುಡುಗಿಯ ಪ್ರೇಮವನ್ನು ಹುಡುಕುವ ಯತ್ನ ಮಾಡುತ್ತಾರೆ. ಹಳೆಯ ಪ್ರೇಮವನ್ನು ಮರೆಯಲು ದೂರದೂರಿಗೆ ಟ್ರಿಪ್ ಹೋಗ್ತಾರೆ ವಾಸಸ್ಥಾನ ಬದಲಾಯಿಸುತ್ತಾರೆ. ದೇಶ ಬಿಟ್ಟು ಹೋಗುತ್ತಾರೆ, ಮತ್ತೆ ಕೆಲವರು ಈ ಪ್ರೀತಿ ಪ್ರೇಮದ ಸಹವಾಸವೇ ಬೇಡ ಎಂದು ಪೋಷಕರು ತೋರಿಸಿದ ಹುಡು/ಹುಡುಗಿಯ ಮದುವೆಯಾಗುತ್ತಾರೆ. ಹೀಗೆ ಏನೇನೋ ಮಾಡುವವರು ಇದ್ದಾರೆ. ಮತ್ತೆ ಕೆಲವರು ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಾರೆ. ಸೇಡು ತೀರಿಸಿಕೊಂಡರಷ್ಟೇ ಮನಸ್ಸಿಗೆ ಸಮಾಧಾನ ಎಂದು ತಮ್ಮ ಬದುಕನ್ನು ನರಕ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಪ್ರೇಮ ವೈಫಲ್ಯಕ್ಕೊಳಗಾದ ಪ್ರೇಮಿಗಳು ತಮ್ಮ ಪ್ರೇಮವನ್ನು ಮರೆಯಲು ಸ್ವಲ್ಪ ಕ್ರಿಯೇಟಿವ್ ಅದಂತಹ ಐಡಿಯಾ ಮಾಡುತ್ತಾರೆ. ಅದೇ ರೀತಿ ಮೋಸಕ್ಕೊಳಗಾದ ಪ್ರೇಮಿಯೊಬ್ಬನ ಕ್ರಿಯೇಟಿವಿಟಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮದಲ್ಲಿ ಮೋಸವನ್ನು ಅನೇಕರಿಗೆ ಸಹಿಸಿಕೊಳ್ಳಲಾಗದು. ಆದರೆ ಇಲ್ಲೊಬ್ಬ ವಿಭಿನ್ನ ವಿಧಾನದ ಮೂಲಕ ತನ್ನ ಮುರಿದು ಹೋದ ಪ್ರೇಮದಿಂದ ಹೊರ ಬರಲು ಯತ್ನಿಸಿದ್ದಾನೆ. ಈತನ ವಿವಾಹವಾಗಲು ತನ್ನ ಮಾಜಿ ಗೆಳತಿ ನಿರ್ಲಕ್ಷಿಸಿದ ನಂತರ ಈತ ಆ ನೋವನ್ನು ಮರೆಯಲು ವಿಭಿನ್ನ ಮಾರ್ಗ ಹಿಡಿದಿದ್ದಾನೆ. ಟೀ ಸ್ಟಾಲೊಂದನ್ನು ತೆರೆದ ಆತ ಅದಕ್ಕೆ ತನ್ನ ಮಾಜಿ ಗೆಳತಿಯ ಹೆಸರಿಟ್ಟಿದ್ದಾನೆ. ಆಕೆಯ ಹೆಸರಿನ ಮೊದಲಕ್ಷರವನ್ನು ತನ್ನ ಟೀ ಸ್ಟಾಲ್‌ಗೆ ಇಟ್ಟ ಈ ಚಾಯ್‌ವಾಲಾನ ಈ ಕ್ರಿಯೇಟಿವಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮಧ್ಯಪ್ರದೇಶದ (Madhya Pradesh) ರಾಜ್‌ಘರ್‌ನ (Rajgarh) ಅಂತರ್ ಗುಜ್ಜರ್ (Antar Gujjar) ಎಂಬಾತನೇ ಈ ಟೀ ಸ್ಟಾಲ್‌ನ ಮಾಲೀಕ. 

 

ಇದೇ ವೇಳೆ ಆತ ತನ್ನ ಪ್ರೇಮ ಹೇಗೆ ಶುರುವಾಯ್ತು ಎಂಬುದನ್ನು ಹೇಳಿಕೊಂಡಿದ್ದು, ಈತ ಐದು ವರ್ಷಗಳ ಹಿಂದೆ ಸಂಬಂಧಿಯೊಬ್ಬರ ಮದುವೆಯಲ್ಲಿ ತನ್ನ ಮಾಜಿ ಗೆಳತಿಯನ್ನು ನೋಡಿದ್ದನಂತೆ ಇಬ್ಬರ ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದ್ದು, ವರ್ಷಗಳ ಕಾಲ ಮಾತನಾಡುತ್ತಿದ್ದರಂತೆ. ಇದಾಗಿ ಒಂದು ವರ್ಷದ ನಂತರ ಅವರು ಪರಸ್ಪರ ಭೇಟಿಯಾಗಿದ್ದು, ಕೆಲ ಸಮಯದ ನಂತರ ಅಂತರ್‌ ಗೆಳತಿಗೆ ವಿವಾಹವಾಗುವಂತೆ (marriage) ಕೇಳಿದ್ದಾರೆ. ಅದಕ್ಕೆ ಆಕೆ ನೋ ಎಂದಿದ್ದಾಳೆ. ನಿರುದ್ಯೋಗಿಯಾದ ಕಾರಣ ಆಕೆ ನನ್ನನ್ನು ನಿರಾಕರಿಸಿದಳು. ತನ್ನೊಂದಿಗೆ ಪ್ರೇಮವನ್ನು ಮುರಿದ ಆಕೆ ನಂತರ ಬದುಕಿನಲ್ಲಿ ಸೆಟಲ್ಡ್ ಆಗಿದ್ದ ಸಂಬಂಧಿಯೂ ಆಗಿದ್ದ ಶ್ರೀಮಂತನನ್ನು ವಿವಾಹವಾದಳು. 

ಕೈಕೊಟ್ಟ ಬಾಯ್‌ಫ್ರೆಂಡ್‌ : ಮುಖದ ಮೇಲೆ ಟ್ಯಾಟೋ ಹಾಕಿಸಿಕೊಂಡ ಯುವತಿ

ಆದರೆ ಆಕೆಯ ನೆನಪಿನಿಂದ ಹೊರ ಬರಲಾಗದೇ ಆತ್ಮಹತ್ಯೆ ಮಾಡಕೊಳ್ಳಬೇಕು ಎಂದೆನಿಸುತ್ತಿತ್ತು. ಆದರೆ ಆತನ ಸ್ನೇಹಿತರು ಇದಕ್ಕೆ ಅವಕಾಶ ನೀಡಲಿಲ್ಲ. ಈತನ ಕಷ್ಟದ ಸಮಯದಲ್ಲಿ ಜೊತೆಗಿದ್ದ ಸ್ನೇಹಿತರು ಆಕೆಯ ಪ್ರೇಮದಿಂದ ಹೊರಬರಲು ಸಹಾಯ ಮಾಡಿದರು. ತಮ್ಮ ಬ್ರೇಕ್‌ ಅಪ್‌ನ ಎರಡು ವರ್ಷಗಳ ನಂತರ ತನ್ನ ಮಾಜಿ ಗೆಳತಿಯ ಅಣಕಿಸಲು ಆಕೆಯ ಹೆಸರಿನ ಮೊದಲ ಅಕ್ಷರವನ್ನು ಇರಿಸಿಕೊಂಡು ಟೀ ಸ್ಟಾಲ್ (Tea stall) ಸ್ಥಾಪಿಸಿದ್ದಾನೆ. ಅಲ್ಲದೇ ಆಕೆ ಜೊತೆಯಲ್ಲಿದ್ದಾಗ ಮುಂದೆಂದಾದರು ಏನಾದರೂ ಅಂಗಡಿ ಇಡುವುದಾದರೆ ತನ್ನ ಹೆಸರು ಇಡುವಂತೆ ಆತನಿಗೆ ಸಲಹೆ ನೀಡಿದ್ದಳಂತೆ ಹೀಗಾಗಿ ಈತ ತಾನು ಸ್ಥಾಪಿಸಿದ ಅಂಗಡಿಗೆ ಗೆಳತಿ ಹೆಸರಿಟ್ಟಿದ್ದಾನೆ. 

ಪತಿಯೊಂದಿಗೆ ಬಳೆ ಖರೀದಿಗೆಂದು ಹೋಗಿ ಕೈ ಕೊಟ್ಟ ಪತ್ನಿ: ಮದುವೆಯಾದ ಒಂದೇ ವಾರಕ್ಕೆ ಪ್ರಿಯಕರನೊಂದಿಗೆ ಎಸ್ಕೇಪ್‌

ಇನ್ನು ವಿಶೇಷ ಎಂದರೆ ಅಂತರ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಮಾರಾಟ ಮಾಡುತ್ತಾನೆ. ಜೋಡಿಗಳಿಗೆ 10 ರೂಪಾಯಿಗೆ ಒಂದು ಕಪ್ ಟೀ ನೀಡಿದರೆ ಪ್ರೇಮ ವೈಫಲ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಐದು ರೂಪಾಯಿಗೆ ಒಂದು ಕಪ್ ಟೀ ನೀಡ್ತಾನೆ. ಒಟ್ಟಿನಲ್ಲಿ ಬ್ರೇಕ್‌ಅಪ್ ಆದ ಮೇಲೆ ವ್ಯವಹಾರದ ಮೇಲೆ ಗಮನಹರಿಸಿ ಬದುಕಿನಲ್ಲಿ ಯಶಸ್ವಿಯಾದ ಅನೇಕರು ಈ ಪ್ರಪಂಚದಲ್ಲಿ ಇದ್ದಾರೆ. ಹಾಗಾಗಿ ಒಂದು ವೇಳೆ ಬ್ರೇಕ್ ಅಪ್ ಆದ ಕೂಡಲೇ ಆತ್ಮಹತ್ಯೆಯಂತಹ ಯೋಚನೆಯನ್ನು ಯಾರೂ ಎಂದಿಗೂ ಮಾಡದಿರಿ..
 

click me!