ನದಿಗಳ ಉಗಮ ಹೇಗೆ : ಐಎಫ್‌ಎಸ್ ಅಧಿಕಾರಿ ಶೇರ್ ಮಾಡಿದ ವೀಡಿಯೋ ವೈರಲ್

Published : Jul 05, 2023, 01:20 PM IST
ನದಿಗಳ ಉಗಮ ಹೇಗೆ : ಐಎಫ್‌ಎಸ್ ಅಧಿಕಾರಿ ಶೇರ್ ಮಾಡಿದ ವೀಡಿಯೋ ವೈರಲ್

ಸಾರಾಂಶ

ನದಿ ಹರಿಯಲಾರಂಭಿಸಿದ ವೀಡಿಯೋವನ್ನು ಅಧಿಕಾರಿ ಪರ್ವಿನ್ ಕಸ್ವಾನ್ (Parveen Kaswan) ಪೋಸ್ಟ್ ಮಾಡಿದ್ದು, ಈ ವೀಡಿಯೋ ಎಲ್ಲರನ್ನು ಅಚ್ಚರಿಗೊಳಿಸಿದೆ. ನದಿಗಳು ಸೃಷ್ಟಿಯಾಗಿದ್ದು ಹೇಗೆ ಎಂಬುದು ಇಲ್ಲಿದೆ.

ಸ್ತ್ರೀ ಮೂಲ, ಋಷಿ ಮೂಲ ಹಾಗೂ ನದಿ ಮೂಲವನ್ನು ಕೆದಕಬಾರದು ಅರಸಬಾರದು ಎಂಬ ಮಾತನ್ನು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು.  ಆದರೆ ನದಿಗಳು ಹೇಗೆ ಹುಟ್ಟುತ್ತವೆ ಎಂಬ ಕೆಟ್ಟ ಕುತೂಹಲ ಅನೇಕರಿಗೆ ಇದೆ. ಹಾಗೆಯೇ ನದಿ ಸೃಷ್ಟಿಯಾದ ಕ್ಷಣವನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ಪೋಸ್ಟ್ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ನಿಮಿಷದ ಈ ವೀಡಿಯೋದಲ್ಲಿ ನದಿ ಹುಟ್ಟಿ ಖಾಲಿ ಜಾಗದಲ್ಲಿ ದಾರಿ ಮಾಡುತ್ತಾ ಹರಿದು  ದೂರ ಸಾಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಪ್ರಕೃತಿಯ ವೈವಿಧ್ಯತೆ, ರೋಚಕ ಅತೀ ಅಪರೂಪದ ಕೌತುಕಗಳ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗಾಗ ವೈರಲ್ ಆಗುತ್ತಿರುತ್ತವೆ.  ನದಿ, ಆಕಾಶ, ಸಾಗರ, ಮರ, ಪರ್ವತ ಹೀಗೆ ಎಲ್ಲವೂ ಅನಾವರಣಗೊಳಿಸುವ ಪ್ರಾಕೃತಿಕ ಸೌಂದರ್ಯವನ್ನು ಬೇರೆ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ, ಅವುಗಳ ಸೌಂದರ್ಯಕ್ಕೆ ಸಾಟಿ ಬೇರಿಲ್ಲ, ಅದೇ ರೀತಿ ಈಗ ನದಿ ಹರಿಯಲಾರಂಭಿಸಿದ ವೀಡಿಯೋವನ್ನು ಅಧಿಕಾರಿ ಪರ್ವಿನ್ ಕಸ್ವಾನ್ (Parveen Kaswan) ಪೋಸ್ಟ್ ಮಾಡಿದ್ದು, ಈ ವೀಡಿಯೋ ಎಲ್ಲರನ್ನು ಅಚ್ಚರಿಗೊಳಿಸಿದೆ. ನದಿಗಳು ಸೃಷ್ಟಿಯಾಗಿದ್ದು ಹೇಗೆ ಎಂಬುದು ಇಲ್ಲಿದೆ. ಕಾಡುಗಳು ನದಿಗಳ ತಾಯಿ,  ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ತಂಡದೊಂದಿಗೆ ಪಟ್ರೋಲಿಂಗ್ ಮಾಡುತ್ತಿದ್ದಾಗ  ಕಂಡು ಬಂದ ಕ್ಷಣ ಎಂದು ಅವರು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ತನ್ನತ್ತ ಎಸೆದ ಚಪ್ಪಲಿನ ಹೊತ್ಕೊಂಡೇ ಹೋಯ್ತು ಹಾವು: ಹಳೆ ವೀಡಿಯೋ ಮತ್ತೆ ವೈರಲ್

ವೀಡಿಯೋದಲ್ಲಿ ನದಿಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬ ದೃಶ್ಯವಿದೆ.  ಕಾಡಿನ ಮಧ್ಯೆ ನದಿಯೊಂದು ಆಗಷ್ಟೇ ಹರಿಯಲು ಶುರುವಾಗಿ ಮುಂದೆ ಸಾಗುತ್ತಿದೆ.  ಅನೇಕ ಅರಣ್ಯ ಅಧಿಕಾರಿಗಳು  ಆಗಷ್ಟೆ ಹರಿಯಲು ಆರಂಭವಾದ ನದಿಯ ಜೊತೆ ಜೊತೆಗೆ ಪಕ್ಕದಲ್ಲೇ ಮುಂದೆ ಸಾಗುತ್ತಿದ್ದಾರೆ.  ಮತ್ತೊಂದು ಫೋಟೋ ಪೋಸ್ಟ್ ಮಾಡಿರುವ ಅವರು ಅದರಲ್ಲಿ ಕುರಿಗಳ ಹಿಂಡು ನದಿ ಹರಿದು ಬರುವ ಮಾರ್ಗದಲ್ಲಿ ನಿಂತು ಕಾಯುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. 

ವೀಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು,  ಕಾಡು ನದಿಗಳ ತಾಯಿಯಾಗಿದ್ದು, ಕಾಡಿನ (Forest) ಮಡಿಲಲ್ಲಿ ಹುಟ್ಟಿ ಹರಿಯುವ ನದಿಗಳು ನಂತರ ವಿಸ್ತಾರ ರೂಪ ತಾಳಿ ಸಾಘರ ಸೇರುತ್ತವೆ.  ಇದರೊಂದಿಗೆ ಅವು ಅದೆಷ್ಟೋ ನೀರಿನ ಮೂಲಗಳಿಗೆ ಜಲಾಶಯಗಳಿಗೆ ಜನ್ಮ ನೀಡುತ್ತವೆ. ಈ ನೀರಿನ ಹರಿವೆ ಮುಂದೆ ಸಾಗಿ ವಿಸ್ತಾರವಾಗಲಾರಂಭಿಸಿದಾಗ ಅದು ನದಿಯಾಗುತ್ತದೆ  ಎಂದು ಒಬ್ಬರು ಬಳಕೆದಾರರು ಈ ವೀಡಿಯೋವನ್ನು ವಿವರಿಸಿದ್ದಾರೆ. 

ನಾಲ್ಕು ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಅನೇಕರು ಐಎಫ್ಎಸ್ ಅಧಿಕಾರಿಯ (IFS Officer) ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ. ನಾವು ಮರಗಳನ್ನೆಲ್ಲಾ ಕಡಿಯುತ್ತಾ ಪ್ರಕೃತಿಯನ್ನು ನಾಶ ಮಾಡುತ್ತಾ ನೋವು ನೀಡುತ್ತಿದ್ದೇವೆ, ಆದರೆ ಮತ್ತೆ ಹೇಗೆ ಎದ್ದು ನಿಲ್ಲಬೇಕು ಎಂಬ ವಿಚಾರ ಪ್ರಕೃತಿಗೆ ತಿಳಿದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಸದಾಕಾಲ ಹರಿಯುವ ನದಿಯಲ್ಲ, ಎಲ್ಲಾ ನದಿಗಳು ಈ ರೀತಿ ರಚನೆ ಆಗುವುದಿಲ್ಲ, ನದಿಗಳ ಭೌಗೋಳಿಕ ಮಾರ್ಗದ ನೈಸರ್ಗಿಕ ಹರಿವಿನಿಂದ ಪರ್ವತಗಳು ರೂಪುಗೊಳ್ಳುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಆದರೆ ಇದು ಯಾವ ಪ್ರದೇಶದಲ್ಲಿ ಸೆರೆ ಹಿಡಿದ ದೃಶ್ಯ ಎಂಬುದನ್ನು ಅಧಿಕಾರಿ ಖಚಿತಪಡಿಸಿಲ್ಲ. 

ಹುಲ್ಲಲ್ಲಾ ಹಾವು... ಹಾವು ತಿನ್ತಿರುವ ಜಿಂಕೆ :IFS ಅಧಿಕಾರಿಗಳನ್ನೆ ದಂಗುಬಡಿಸಿದ Viral Video 

This is how rivers are made. Forest is the mother of river. Today morning at 6 AM. Foot patrolling with team. pic.twitter.com/Nfdtqy8dSr

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?