Mann Ki Baat@100: ದೇಶದ ಜನರ ಜೊತೆ ಬೆರೆಯುವ ಮೋದಿ ಭಾಷಣದ ತೆರೆಯ ಹಿಂದಿನ ದೃಶ್ಯ!

Published : Apr 29, 2023, 05:41 PM IST
Mann Ki Baat@100: ದೇಶದ ಜನರ ಜೊತೆ ಬೆರೆಯುವ ಮೋದಿ ಭಾಷಣದ ತೆರೆಯ ಹಿಂದಿನ ದೃಶ್ಯ!

ಸಾರಾಂಶ

2014ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಮನ್‌ ಕೀ ಬಾತ್‌ ಮೂಲಕ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಆಲ್‌ ಇಂಡಿಯಾ ರೇಡಿಯೋದಲ್ಲಿ ಮಾತನಾಡಲು ಆರಂಭಿಸಿದರು. ಒಂದು ತಿಂಗಳೂ ಬಿಡದಂತೆ ನಡೆದ ಈ ಕಾರ್ಯಕ್ರಮಕ್ಕೀಗ ಈಗ ನೂರು ಸಂಚಿಕೆಯ ಸಂಭ್ರಮ. ಇದರ ನಡುವೆ ಈ ಕಾರ್ಯಕ್ರಮದ ತೆರೆಮರೆಯ ದೃಶ್ಯಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.  

ನವದೆಹಲಿ (ಏ.29): ಪ್ರಧಾನಿ ನರೇಂದ್ರ ಮೋದಿ ರಾಜಕೀಯದ ಹೊರತಾಗಿ ದೇಶದ ಜನರೊಂದಿಗೆ ಪ್ರತಿ ತಿಂಗಳ ಆಗುಹೋಗುಗಳ ಬಗ್ಗೆ ವಿಚಾರ ನಡೆಸಿ, ದೇಶದ ಪ್ರಜೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಕಾರ್ಯಕ್ರಮವಾದ ಮನ್‌ ಕೀ ಬಾತ್‌ಗೆ ಏಪ್ರಿಲ್‌ 30ರ ಭಾನುವಾರಕ್ಕೆ ನೂರು ಸಂಚಿಕೆಯ ಸಂಭ್ರಮ. 2014ರ ಅಕ್ಟೋಬರ್‌ 3 ರಂದು ಆರಂಭವಾಗಿದ್ದು ಈ ಮಹತ್ವದ ಕಾರ್ಯಕ್ರಮದಲ್ಲಿ ಈವರೆಗೂ ಹಲವಾರುೇಗೆ ನ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪರಿಸರ, ಸ್ವಚ್ಛತೆ, ಭಾರತೀಯರಿಗೆ ಸ್ಫೂರ್ತಿ ನೀಡುವಂತೆ ವಿಚಾರಗಳು, ಪ್ರಮುಖ ಸಾಮಾಜಿಕ ವಿಚಾರಗಳನ್ನು ಸ್ವತಃ ಮೋದಿಯೇ ಜನರಿಗೆ ತಿಳಿಸಿದ್ದಾರೆ. ಆಲ್‌ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮವನ್ನು ಪ್ರತಿ ಹಳ್ಳಿಹಳ್ಳಿಗೂ ತಲುಪಿಸಲಾಗಿದೆ. 100ನೇ ಸಂಚಿಕೆಯ ಪ್ರಸಾರವಾಗುವ ಹಂತದಲ್ಲಿ ಮೋದಿಯವರ ಪ್ರಮುಖ ಭಾಷಣದ ತೆರೆಮರೆಯ ದೃಶ್ಯಗಳು ಇದೇ ಮೊದಲ ಬಾರಿಗೆ ಬಿತ್ತರವಾಗಿದೆ.

ಮನ್ ಕಿ ಬಾತ್‌ನ ಸಂಪೂರ್ಣ ಸೆಟಪ್ ಅನ್ನು ವೀಕ್ಷಿಸಿ ಮತ್ತು ಇಲ್ಲಿ ಪ್ರಧಾನಿ ಮೋದಿ ಭಾಷಣವನ್ನು ಹೇಗೆ ನಡೆಸುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ:

ಖಾಸಗಿ ಎಫ್‌ಎಂ ಕೇಂದ್ರಗಳು, ಸಮುದಾಯ ರೇಡಿಯೋಗಳು ಮತ್ತು ವಿವಿಧ ಟಿವಿ ಚಾನೆಲ್‌ಗಳು ಸೇರಿದಂತೆ 1000 ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳು ಈ ಪ್ರಮುಖ ಕಾರ್ಯಕ್ರಮದ 100 ನೇ ಸಂಚಿಕೆಯನ್ನು ಪ್ರಸಾರ ಮಾಡುತ್ತವೆ. ಪ್ರಧಾನಮಂತ್ರಿಯವರ ಭಾಷಣವನ್ನು ಐತಿಹಾಸಿಕವಾಗಿ ಯಶಸ್ಸುಗೊಳಿಸಿಲು, ರಾಷ್ಟ್ರದಾದ್ಯಂತ ಸುಮಾರು ನಾಲ್ಕು ಲಕ್ಷ ಸ್ಥಳಗಳಲ್ಲಿ ಜನರು ಅದನ್ನು ಕೇಳಲು ವ್ಯವಸ್ಥೆಗಳನ್ನು ಸ್ಥಾಪಿಸುವುದಾಗಿ ಬಿಜೆಪಿ ಹೇಳಿದೆ. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸಂಪೂರ್ಣ ಕಾರ್ಯಾಚರಣೆಯ ಉಸ್ತುವಾರಿ ವಹಿಸಲಿದ್ದಾರೆ. ಕಳೆದ ವಾರ ತಮ್ಮ ರೇಡಿಯೋ ಕಾರ್ಯಕ್ರಮದ 100 ನೇ ಆವೃತ್ತಿಯನ್ನು "ಉತ್ಸಾಹದಿಂದ ಕಾಯುತ್ತಿದ್ದೇನೆ" ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಸಂದರ್ಭಕ್ಕಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಮಹಿಳಾ ಸಬಲೀಕರಣ, ಆರೋಗ್ಯದಲ್ಲಿ ಸುಧಾರಣೆ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಬಿಲ್ ಗೇಟ್ಸ್ ಮೆಚ್ಚುಗೆ!

ಈ ಸಂದರ್ಭದ ಸ್ಮರಣಾರ್ಥವಾಗಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) "ಮನ್ ಕಿ ಬಾತ್ @100" ಎಂಬ ರಾಷ್ಟ್ರೀಯ ಸಮಾವೇಶವನ್ನು ಸಹ ಆಯೋಜನೆ ಮಾಡಿತ್ತು. ಇದರಲ್ಲಿ ರಾಷ್ಟ್ರದಾದ್ಯಂತದ 100 ಕ್ಕೂ ಹೆಚ್ಚು ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು.

ಮನ್‌ ಕೀ ಬಾತ್‌' 100ನೇ ಸಂಚಿಕೆ: ವಿವಿಧ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಯ ಸುರಿಮಳೆ

"ಅಕ್ಟೋಬರ್ 3, 2014 ರಂದು ಪ್ರಾರಂಭವಾದಾಗಿನಿಂದ, 'ಮನ್ ಕಿ ಬಾತ್' ರಾಷ್ಟ್ರೀಯ ಸಂಪ್ರದಾಯವಾಗಿ ಮಾರ್ಪಟ್ಟಿದೆ, ಪ್ರಧಾನಿ ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದಾರೆ. ಪ್ರತಿ ತಿಂಗಳು ತಮ್ಮ ಪ್ರಧಾನ ಸೇವಕರನ್ನು ತಲುಪುತ್ತಿರುವ ಭಾರತದವರು, ತಮ್ಮ ಸಾಧನೆಗಳು, ಆತಂಕಗಳು, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ, ”ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. 'ಮನ್ ಕಿ ಬಾತ್' ಅನ್ನು ಆಲ್ ಇಂಡಿಯಾ ರೇಡಿಯೊದಿಂದ 22 ಭಾರತೀಯ ಭಾಷೆಗಳು, 29 ಉಪಭಾಷೆಗಳು ಮತ್ತು 11 ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ