ಕುಂಭಮೇಳದಿಂದ ಖ್ಯಾತಿ ಪಡೆದ ಮೋನಾಲಿಸಾ ವಯಸ್ಸೆಷ್ಟು? ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್ ಬ್ಯೂಟಿ

Published : Jan 23, 2025, 12:23 PM ISTUpdated : Jan 23, 2025, 12:32 PM IST
ಕುಂಭಮೇಳದಿಂದ ಖ್ಯಾತಿ ಪಡೆದ ಮೋನಾಲಿಸಾ ವಯಸ್ಸೆಷ್ಟು? ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್ ಬ್ಯೂಟಿ

ಸಾರಾಂಶ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ಸೌಂದರ್ಯದಿಂದಲೇ ಅಲ್ಲಿದ್ದ ಇನ್‌ಫ್ಲುಯೆನ್ಸರ್‌ಗಳನ್ನು ಸೆಳೆದು ರಾತ್ರೋರಾತ್ರಿ ಇಂಟರ್‌ನೆಟ್‌ ಸೆನ್ಸೇಷನ್ ಆದ ಮಣಿಸರಗಳನ್ನು ಮಾರುತ್ತಿದ್ದ ಮೋನಾಲಿಸಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ಸೌಂದರ್ಯದಿಂದಲೇ ಅಲ್ಲಿದ್ದ ಇನ್‌ಫ್ಲುಯೆನ್ಸರ್‌ಗಳನ್ನು ಸೆಳೆದು ರಾತ್ರೋರಾತ್ರಿ ಇಂಟರ್‌ನೆಟ್‌ ಸೆನ್ಸೇಷನ್ ಆದ ಮಣಿಸರಗಳನ್ನು ಮಾರುತ್ತಿದ್ದ ಮೋನಾಲಿಸಾ ತನ್ನ 16ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆಕೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಮಹಾಕುಂಭಮೇಳ ನಡೆಯುತ್ತಿದ್ದ ಪ್ರಯಾಗ್‌ರಾಜ್‌ನಲ್ಲಿ ಈಕೆ ಹಾಗೂ ಈಕೆಯ ಕುಟುಂಬ ಮಣಿಸರಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಬೀದಿಯಲ್ಲಿ ಮಣಿಸರ ಮಾರುವ ಈಕೆಯ ಸಹಜ ಸೌಂದರ್ಯವನ್ನು ಕಂಡ ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಈಕೆಯ ಫೋಟೋ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಈಕೆ ರಾತ್ರೋರಾತ್ರಿ ಫೇಮಸ್ ಆಗಿದ್ದಳು. ಇದಾದ ನಂತರ ಈಕೆ ಸೆಲೆಬ್ರಿಟಿ ಎನಿಸಿದ್ದು, ಈಕೆಯ ಫೋಟೊ ವೀಡಿಯೋಗಾಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಜನ ಮುಗಿಬಿದ್ದಿದ್ದರು. ಇದರಿಂದಾಗಿ ಈಕೆಯ ಸುರಕ್ಷತೆಯ ಆತಂಕ ಸೃಷ್ಟಿಯಾಗಿತ್ತು.

ರಾತ್ರೋರಾತ್ರಿ ಬಂದ ಖ್ಯಾತಿಯೇ ಆಕೆಗೆ ಸುರಕ್ಷತೆಯ ಭಯ ಹುಟ್ಟಿಸಿತ್ತು, ಇದಾದ ನಂತರ ಆಕೆಯ ಸಾಕಷ್ಟು ವೀಡಿಯೋಗಳು ವೈರಲ್ ಆಗಿದ್ದವು, ಕೆಲವು ವೀಡಿಯೋಗಳಲ್ಲಿ ಕೆಲವು ಇನ್‌ಫ್ಲುಯೆನ್ಸರ್‌ಗಳು ಆಕೆಯ ಹಿಂದೆ ಬಿದ್ದು ಫೋಟೋಗಾಗಿ ಹಿಂಬಾಲಿಸುತ್ತಿರುವ ವೀಡಿಯೋಗಳು ವೈರಲ್ ಆಗಿದ್ದರೆ, ಅತ್ತ ಆಕೆ ಅವರ ಮೊಬೈಲ್‌ ಫೋನ್‌ಗಳನ್ನು ಕಿತ್ತೆಸೆದ ವೀಡಿಯೋಗಳು ವೈರಲ್ ಆಗಿದ್ದವು.  ಇಂದೋರ್ ಮೂಲದವರಾದ ಇವರು ದೇಶದೆಲ್ಲೆಡೆ ನಡೆಯುವ ಜಾತ್ರೆ ದೊಡ್ಡ ದೊಡ್ಡ ಸಮಾರಂಭಗಳಿಗೆ ಸಾಗುತ್ತಾ ಈ ರೀತಿ ಸರ ಮಾರುತ್ತಾ ಸಾಗುವ ಅಲೆಮಾರಿಗಳಾಗಿದ್ದು, ಇವರ ಮೂಲ ಮೂಲತಃ ಮಧ್ಯಪ್ರದೇಶದ ಇಂದೋರ್ ಆಗಿದೆ. ಆದರೆ ರಾತ್ರೊರಾತ್ರಿ ಸಿಕ್ಕ ಖ್ಯಾತಿಯಿಂದ ಮಗಳು ಮಾಡುವ ಸರ ವ್ಯಾಪಾರದಲ್ಲಿ ಭಾರಿ ಇಳಿಕೆ ಕಂಡು ಬಂದಿತ್ತು. ಜೊತೆಗೆ ಆಕೆಯ ಸುರಕ್ಷತೆಯ ಭಯವೂ ಕಾಡಿದ್ದರಿಂದ ಆಕೆಯ ಕುಟುಂಬದವರು ಆಕೆಯನ್ನು ಇಂದೋರ್‌ಗೆ ಕರೆಸಿಕೊಂಡಿದ್ದರು.

ಈ ಮಧ್ಯೆ ಆಕೆ ಕೇಕ್ ಕತ್ತರಿಸಿ ಅದ್ದೂರಿ ಹುಟ್ಟುಹಬ್ಬ  ಆಚರಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಜನವರಿ 21ರಂದು ಮೋನಾಲಿಸಾ ಭೋಂಸ್ಲೆ ತನ್ನ 16ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆಕೆಯ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಆಕೆಗೆ ಹುಟ್ಟುಹಬ್ಬದ ಶುಭ ಕೋರಿದ್ದು, ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ. ಅನೇಕರು ಆಕೆಗೆ ಕುಂಭ ಮೇಳಕ್ಕೆ ಬಂದು ಖ್ಯಾತಿ ಬಂತು ದೇವರು ಕೊಟ್ರೆ ಒಮ್ಮೆಗೆ ತುಂಬಾ ಕೊಡ್ತಾನೆ ಎಂದು ಈ ವೀಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.  ವೀಡಿಯೋದಲ್ಲಿ ಮೋನಾಲಿಸಾ ಕೇಕ್ ಕತ್ತರಿಸುತ್ತಿದ್ದರೆ ಆಕೆಯ ಜೊತೆಗಿರುವವರು ಆಕೆಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ. 

ಇತ್ತ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವೂ ಜನವರಿ 13 ರಿಂದ ಆರಂಭವಾಗಿದ್ದು, ಜನವರಿ 26ರವರೆಗೆ ನಡೆಯಲಿದೆ. ಇದು 144 ವರ್ಷಗಳ ನಂತರ ನಡೆಯುತ್ತಿರುವ ವಿಶ್ವದ ಅತೀದೊಡ್ಡ ಧಾರ್ಮಿಕ ಸಮಾಗಮವಾಗಿದ್ದು, ವಿಶ್ವದೆಲ್ಲೆಡೆಯಿಂದ ಸಾಧುಗಳು ಸಂತರು ಸಾಮಾನ್ಯ ಜನರು ಸೇರಿದಂತೆ ಕೋಟ್ಯಾಂತರ ಜನ ಇಲ್ಲಿಗೆ ಆಗಮಿಸಿ ಗಂಗೆಯಲ್ಲಿ ಮುಳುಗಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಿಲ್ಲಿ ಸಮಾಗಮಗೊಂಡ ಭಿನ್ನ ವಿಭಿನ್ನ ಸಾಧು ಸಂತರುಗಳ ವೀಡಿಯೋಗಳು ಇನ್‌ಫ್ಲುಯೆನ್ಸರ್‌ಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕುಂಭ ಮೇಳದಲ್ಲಿ ಮೊನಾಲಿಸಾ ಪ್ರಸಿದ್ಧಿಗೆ ಜಾತಕದ ಈ ಗ್ರಹ ಕಾರಣ

ಮೊನಾಲಿಸಾಳ ಮೇಕಪ್‌ ರಹಿತ ವಿಡಿಯೋ ವೈರಲ್‌: ಎರ್‍ರಾ ಬಿರ್‍ರಿ ಹೊಗಳ್ದೋರೇ ಉಲ್ಟಾ ಹೊಡೀಯೋದಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ