
ಬೆಂಗಳೂರು: 1981ರಲ್ಲಿ 7 ಎಂಜಿನಿಯರ್‌ಗಳು ಜೊತೆಯಾಗಿ ಸೇರಿ ನಿರ್ಮಾಣ ಮಾಡಿದ ಭಾರತೀಯ ಬಹುರಾಷ್ಟ್ರೀಯ ಕಂಪನಿ ಇನ್‌ಫೋಸಿಸ್ ಆರಂಭವಾಗಿ ಬರೋಬ್ಬರಿ 44 ವರ್ಷಗಳೇ ಕಳೆದಿವೆ. ಆದರೆ ಸುಮಾರು 35 ವರ್ಷಗಳ ಹಿಂದಿನ ಇನ್‌ಫೋಸಿಸ್ ಕ್ಯಾಂಪಸ್ ಹೇಗಿತ್ತು? ಅಲ್ಲಿನ ಉದ್ಯೋಗಿಗಳು ಹೇಗಿದ್ದರು? ಎಂದು ತೋರಿಸುವ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದ್ದು, ಅನೇಕರನ್ನು ಈ ವೀಡಿಯೋ ಭಾವುಕರನ್ನಾಗಿಸಿದೆ. ಹಾಗೂ ಹಲವು ದಶಕಗಳ ಹಿಂದಿನ ನೆನಪಿಗೆ ಈ ವೀಡಿಯೋ ತಳ್ಳಿದ್ದು, ಕೆಲ ಕಾಲ ಗತದಲ್ಲಿ ಜೀವಿಸುವಂತೆ ಮಾಡಿದೆ. ಹಾಗಿದ್ದರೆ ಅಂತಹದ್ದು ಏನು ದೊಡ್ಡ ದೃಶ್ಯಗಳು ಆ ವೀಡಿಯೋದಲ್ಲಿ ಇಲ್ಲ. ಆದರೆ ಎಲ್ಲರೂ ಇನ್‌ಪೋಸಿಸ್‌ನ ಕ್ಯಾಂಟಿನ್‌ನಲ್ಲಿ ಕುಳಿತುಕೊಂಡು ಜೊತೆಯಾಗಿ ಹರಟುತ್ತಿರುವ ದೃಶ್ಯ ಅಲ್ಲಿದ್ದು, ಈಗಿನ ಕಾಲಕ್ಕೂ ಆಗಿನ ಕಾಲಕ್ಕೂ ಈ ದೃಶ್ಯದಲ್ಲಿ ಅಜಗಜಾಂತರ ವ್ಯತ್ಯಾಸವಿರುವುದಂತು ಮಾತ್ರ ಸತ್ಯ.
panindiaculture ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಇನ್‌ಪೋಸಿಸ್ ಕ್ಯಾಂಪಸ್‌ದು ಎನ್ನಲಾದ ಈ ವೀಡಿಯೋ ಭಾರಿ ವೈರಲ್ ಆಗ್ತಿದೆ. ಅನೇಕರು ಈ ವೀಡಿಯೋ ನೋಡಿ ಭಾವುಕರಾಗಿದ್ದಾರೆ. ಚೆನ್ನಾಗಿ ಫಿಟ್ ಆಗಿರುವ ದೇಹಗಳು, ಫೋನ್‌ಗಳಿಲ್ಲ, ಕೇವಲ ನಿಜವಾದ ನಗು ಮತ್ತು ಅಂತರ್-ಸಂಸ್ಕೃತಿಯ ಸ್ನೇಹ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಸಂಸ್ಥೆಯ ಕ್ಯಾಂಟಿನ್‌ನಲ್ಲಿ ಉದ್ಯೋಗಿಗಳು ಹರಟುತ್ತಾ ಕುಳಿತ ದೃಶ್ಯವಿದೆ. ಇಲ್ಲಿ ಫೋನ್ ಮಾತ್ರ ಕಾಣಿಸುತ್ತಿಲ್ಲ, ಆದರೆ ಫೋನ್ ಇಲ್ಲದೇ ಇದ್ದರೂ ಜನರ ಮೊಗದಲ್ಲಿ ಖುಷಿ ತಮಾಷೆ ಹರಟೆಗಳನ್ನು ಕಾಣಬಹುದಾಗಿದೆ.
ಸ್ಮಾರ್ಟ್ ಫೋನ್ ಇಲ್ಲದ ಆ ಕಾಲ ಹೇಗಿತ್ತು?
ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಆ ಸಮಯದಲ್ಲಿ ಇನ್‌ಫೋಸಿಸ್‌ನಲ್ಲಿದ್ದ ಶೇಕಡಾ 70ರಷ್ಟು ಜನ ಈಗ ಯುಎಸ್‌ನಲ್ಲಿ ಸೆಟಲ್ ಆಗಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಮಾರ್ಟ್‌ಫೋನ್ ಇಲ್ಲ, ಸಾಮಾಜಿಕ ಮಾಧ್ಯಮ ಇಲ್ಲ, ಇನ್‌ಸ್ಟಾಗ್ರಾಮ್ ಇಲ್ಲ... ಕೇವಲ ಮನುಷ್ಯರಿಂದ ಮನುಷ್ಯರ ಸಂಪರ್ಕ. ಯಾವುದೇ ತಂತ್ರಜ್ಞಾನವಿಲ್ಲದ ಕೊನೆಯ ಯುಗ ಇದು ಎಂದು ಒಬ್ಬರು ವೀಡಿಯೋ ನೋಡಿ ಬರೆದಿದ್ದಾರೆ.
ಈ ವೀಡಿಯೋದಲ್ಲಿ ಜನರು ಉತ್ತಮವಾಗಿ ಬಟ್ಟೆ ಧರಿಸಿದ್ದಾರೆ ಮತ್ತು ಸಂತೋಷದಿಂದ ಕಾಣುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ನಗುವುದು ಅಪರೂಪ, ಪಾಶ್ಚಿಮಾತ್ಯರಂತೆ ಜಿಗುಟಾದ ಉಡುಗೆ ತೊಡುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಎಷ್ಟು ಸೊಗಸಾಗಿ ಕಾಣುತ್ತಾರೆ ನೋಡಿ. ಮಹಿಳೆಯರು ಕೂಡ ಜೋರಾಗಿ ಮತ್ತು ಧೈರ್ಯಶಾಲಿಗಳಾಗಿರುತ್ತಾರೆ, ಈ ಮಹಿಳೆಯರು ತುಂಬಾ ಸೊಗಸಾಗಿ ಕಾಣುತ್ತಾರೆ ಮತ್ತು ವರ್ತಿಸುತ್ತಾರೆ. ಪುರುಷರಿಗೂ ಉತ್ತಮ ಕೇಶವಿನ್ಯಾಸವಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಸಣ್ಣದೊಂದು ಯಂತ್ರ(ಫೋನ್) ಎಲ್ಲವನ್ನು ಬದಲಾಯಿಸಿತು, ಮನುಷ್ಯನ ಸಂವಹನವನ್ನೇ ಅದು ಬದಲಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೊಬೈಲ್ ಫೋನ್‌ಗಳು ಜನರ ನಡುವೆ ಅಂತರ ಸೃಷ್ಟಿಸಿದವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಎಕ್ಸ್ ತಲೆಮಾರು ಅತ್ಯಂತ ಕೂಲಾಗಿದ್ದಂತಹ ತಲೆಮಾರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು 90 ದಶಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ತಿಂಗಳಲ್ಲಿ ಒಂದು ದಿನ ಸ್ಮಾರ್ಟ್‌ಫೋನ್ ಇಲ್ಲದ ದಿನ ಆಚರಿಸಬೇಕು ಎಂದು ನನಗನಿಸುತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯಾರ ಬಳಿಯೂ ಸ್ಮಾರ್ಟ್‌ಫೋನ್ ಇಲ್ಲ, ಆದರೆ ಎಲ್ಲರ ಮೊಗದಲ್ಲಿ ನಗು ಇದೆ. 35 ವರ್ಷದ ಹಿಂದೆ ಜಗತ್ತು ಬಹಳ ಸುಂದರವಾಗಿತ್ತು. ಹಾಗೆಯೇ ಇಲ್ಲಿ ಯಾರೂ ಗಡ್ಡ ಬಿಟ್ಟವರಿಲ್ಲ, ಈ ಗಡ್ಡದ ಟ್ರೆಂಡ್ 2010-15ರ ಸಮಯದಲ್ಲಿ ಆರಂಭವಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಗತದ ನೆನಪುಗಳಿಗೆ ಜಾರಿಸಿರುವುದರ ಜೊತೆಗೆ ಸ್ಮಾರ್ಟ್ ಫೋನ್ ಇಲ್ಲದ ಆ ಜೀವನ ಎಷ್ಟು ಖುಷಿಯಿಂದ ಕೂಡಿತ್ತು ಎಂಬುದನ್ನು ತೋರಿಸಿದ್ದು, ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಟಿಕೆಟ್ ಕೇಳಿದ್ದಕ್ಕೆ 2.7 ಕೋಟಿ ಕೇಳಿದ್ರು: ಆರ್‌ಜೆಡಿ ಟಿಕೆಟ್ ಆಕಾಂಕ್ಷಿಯ ಗಂಭೀರ ಆರೋಪ
ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಸಮೋಸಾ ಮಾರಾಟಗಾರನ ರೌಡಿಸಂ: 2 ಸಮೋಸಾಗಾಗಿ ಸ್ಮಾರ್ಟ್ ವಾಚ್ ಬಿಚ್ಚಿ ಕೊಟ್ಟ ಪ್ರಯಾಣಿಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ