ಅಮೆರಿಕ, ಬ್ರೆಜಿಲ್‌ಗಿಂದ ಭಾರತದಲ್ಲೇ ಸೋಂಕು ವೇಗ ಹೆಚ್ಚು!

By Kannadaprabha NewsFirst Published Aug 11, 2020, 7:17 AM IST
Highlights

ಅಮೆರಿಕ, ಬ್ರೆಜಿಲ್‌ಗಿಂದ ಭಾರತದಲ್ಲೇ ಸೋಂಕು ವೇಗ ಹೆಚ್ಚು| ಭಾರತದಲ್ಲಿ 21 ದಿನದಲ್ಲಿ 10 ಲಕ್ಷ ಜನಕ್ಕೆ ಕೊರೋನಾ| ಅಮೆರಿಕದಲ್ಲಿ 43, ಬ್ರೆಜಿಲ್‌ನಲ್ಲಿ 27 ದಿನಕ್ಕೆ 10 ಲಕ್ಷ ಸೋಂಕು

ನವದೆಹಲಿ(ಆ.11): ವಿಶ್ವದ ಹಲವು ದೇಶಗಳಲ್ಲಿ ಕೊರೋನಾ ತಾಂಡವವಾಡುತ್ತಿದ್ದಾಗ ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಸಾಧನೆ ಮಾಡಿದ್ದ ಭಾರತ ಇದೀಗ ಮಾರಕ ವೈರಾಣುವಿನ ಅಬ್ಬರಕ್ಕೆ ಅತಿ ಹೆಚ್ಚಾಗಿ ನಲುಗುತ್ತಿರುವ ದೇಶವಾಗಿ ಹೊರಹೊಮ್ಮಿದೆ. ಕೊರೋನಾ ಸೋಂಕಿತರ ಸಂಖ್ಯೆ ದಾಖಲೆಯ 21 ದಿನಗಳಲ್ಲಿ 10 ಲಕ್ಷದಿಂದ 20 ಲಕ್ಷ ಗಡಿಯನ್ನು ತಲುಪಿದೆ. ಮತ್ತೊಂದೆಡೆ, ಅತ್ಯಧಿಕ ಸಂಖ್ಯೆಯ ಸೋಂಕಿತರು ಇರುವ ಅಮೆರಿಕ, ಬ್ರೆಜಿಲ್‌ಗಿಂತ ಹೆಚ್ಚಿನ ಕೊರೋನಾಪೀಡಿತರು ಪ್ರತಿನಿತ್ಯ ಭಾರತದಲ್ಲಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ ಸಮಾಧಾನದ ವಿಷಯವೆಂದರೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದಂತೆಲ್ಲಾ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ.

ವರ್ಷಾಂತ್ಯಕ್ಕೆ ಕೊರೋನಾಗೆ ಲಸಿಕೆ, ಶೀಘ್ರ ದರ ನಿಗದಿ!

ಕೊರೋನಾ ಪ್ರಕರಣಗಳು 10ರಿಂದ 20 ಲಕ್ಷಕ್ಕೆ ಏರಿಕೆ ಆಗಲು ಅಮೆರಿಕದಲ್ಲಿ 43 ದಿನಗಳು, ಬ್ರೆಜಿಲ್‌ನಲ್ಲಿ 27 ದಿನಗಳು ಬೇಕಾಗಿದ್ದವು. ಅಮೆರಿಕ ಹಾಗೂ ಬ್ರೆಜಿಲ್‌ಗೆ ಹೋಲಿಸಿದರೆ ಭಾರತದಲ್ಲಿ ಕೇವಲ 21 ದಿನಗಳಲ್ಲಿ ಕೊರೋನಾ ಪ್ರಕರಣಗಳು 10ರಿಂದ 20 ಲಕ್ಷಕ್ಕೆ ಏರಿಕೆ ಆಗಿವೆ.

ದೈನಂದಿನ ಕೇಸಲ್ಲಿ ಭಾರತವೇ ನಂ.1:

ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳು ಸದ್ಯ ಭಾರತದಲ್ಲೇ ಅತಿ ಹೆಚ್ಚು ದಾಖಲಾಗುತ್ತಿವೆ. ಅಮೆರಿಕದಲ್ಲಿ ಭಾನುವಾರ 47,849 ಕೊರೋನಾ ಕೇಸ್‌ ದಾಖಲಾದರೆ, ಬ್ರೆಜಿಲ್‌ನಲ್ಲಿ 22,213 ಹೊಸ ಪ್ರಕರಣಗಳು ದಾಖಲಾಗಿವೆ. ಆದರೆ, ಭಾರತದಲ್ಲಿ 63,623 ಪ್ರಕರಣಗಳು ದಾಖಲಾಗಿವೆ.

ಮತ್ತೊಂದೆಡೆ, ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು 10 ಲಕ್ಷ ತಲುಪಿದ ಸಂದರ್ಭದಲ್ಲಿ 25,611 ಮಂದಿ ಸಾವಿಗೀಡಾಗಿದ್ದರು. ಮೊದಲ 10 ಲಕ್ಷ ಕೇಸಿಗೆ ಸಾವಿನ ಪ್ರಮಾಣ ಶೇ.2.55ರಷ್ಟಿತ್ತು. ನಂತರದ 10 ಲಕ್ಷ ಪ್ರಕರಣಗಳಲ್ಲಿ 16,042 ಮಂದಿ ಸಾವಿಗೀಡಾಗಿದ್ದು, ಸಾವಿನ ಪ್ರಮಾಣ ಶೇ.2.06ಕ್ಕೆ ಇಳಿಕೆ ಕಂಡಿದೆ.

ದಕ್ಷಿಣ ಕನ್ನಡದಲ್ಲಿ ಒಂದೇ ದಿನ 533 ಮಂದಿ ಡಿಸ್ಚಾರ್ಜ್‌

10ರಿಂದ 20 ಲಕ್ಷಕ್ಕೆ ಹೆಚ್ಚಳ

ಭಾರತ- 21 ದಿನ

ಬ್ರೆಜಿಲ್‌- 27 ದಿನ

ಅಮೆರಿಕ- 43 ದಿನ

click me!