ಖರ್ಗೆ ಜನ್ಮದಿನದ ನೆಪದಲ್ಲಿ ಕಾಂಗ್ರೆಸ್‌ ನಾಯಕರ ಮಾಸ್ಟರ್ ಪ್ಲಾನ್! ಭದ್ರತಾ ಪಡೆಗಳಿಗೂ ಸುಳಿವು ನೀಡದೆ ದಿಢೀರ್ ಪ್ರತಿಭಟನೆ

Kannadaprabha News   | Kannada Prabha
Published : Jul 22, 2026, 07:43 AM IST
How Congress used M Kharge s birthday as cover for flash protest near PMs house

ಸಾರಾಂಶ

ಮಲ್ಲಿಕಾರ್ಜುನ ಖರ್ಗೆಯವರ ಜನ್ಮದಿನದಂದು ಶುಭ ಕೋರುವ ನೆಪದಲ್ಲಿ ಅವರ ನಿವಾಸದಲ್ಲಿ ಸೇರಿದ ಕಾಂಗ್ರೆಸ್ ನಾಯಕರು, ಭದ್ರತಾ ಪಡೆಗಳಿಗೂ ಸುಳಿವು ನೀಡದೆ ದಿಢೀರನೆ ಪ್ರಧಾನಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಗೌಪ್ಯ ನಡೆಯ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುಳಿವೇ ಕೊಡದೆ ಪ್ರಧಾನಿ ನಿವಾಸದತ್ತ ದೌಡು

ನವದೆಹಲಿ (ಜು.22): ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 84ನೇ ಜನ್ಮದಿನ(Mallikarjun kharge Birthday)ವಾದ ಮಂಗಳವಾರ ಶುಭ ಕೋರಲೆಂದು ಅವರ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕರು, ಬಳಿಕ ದಿಢೀರನೆ ಅಲ್ಲಿಂದ ಪ್ರಧಾನಿಗಳ ನಿವಾಸದತ್ತ ತೆರಳಿದರು. ಅಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಆಗ್ರಹಿಸಲು ಶುರು ಮಾಡಿದರು. ಈ ನಡೆಯ ಬಗ್ಗೆ ಭದ್ರತಾ ಪಡೆಗಳಿಗೂ ಸುಳಿವಿರಲಿಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಇಂಥ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮುನ್ನ ಪಕ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿರುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನ ಗೌಪ್ಯವಾಗಿ ವಿಜಯ್‌ ಚೌಕ್‌ ವರೆಗೆ ಮೆರವಣಿಗೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ಸೋರಿಕೆಯಾದ ಕಾರಣ ಅದನ್ನು ಕೈಬಿಡಲಾಯಿತು. ಮಧ್ಯಾಹ್ನ 3ರ ಹೊತ್ತಿಗೆ ಕೆಲ ಹಿರಿಯ ನಾಯಕರು ಖರ್ಗೆ ಅವರ ನಿವಾಸಕ್ಕೆ ಹೋದಾಗ, ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ಎಂದುಕೊಳ್ಳಲಾಗಿತ್ತು. ಆದರೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿಯವರಂತಹ ಪ್ರಮುಖ ನಾಯಕರು ಒಟ್ಟಾಗುತ್ತಿದ್ದಂತೆ ಪ್ರಧಾನಿ ನಿವಾಸದತ್ತ ಹೊರಟುಬಿಟ್ಟರು.

ಸಿಜೆಪಿ ಪ್ರತಿಭಟನೆಯಿಂದ ದೇಶದಲ್ಲಿ ಕೋಲಾಹಲವೆದ್ದಿದ್ದರೂ ಸರ್ಕಾರದ ವಿರುದ್ಧ ಪ್ರತಿಭಟಿಸದಿದ್ದರೆ, ಕಾಂಗ್ರೆಸ್‌ ವಿದ್ಯಾರ್ಥಿಗಳ ಪರವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಇದನ್ನು ತಪ್ಪಿಸಲು ಈ ಪ್ರತಿಭಟನೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಖರ್ಗೆ ಜನ್ಮದಿನದ ಶುಭ ಕೋರುವ ನೆಪದಲ್ಲಿ ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆಯ ಪ್ಲಾನ್ ಹೇಗಿತ್ತು?
ಎಲ್‌ಪಿಜಿ ಇನ್ನು ಮುಗಿದ ಅಧ್ಯಾಯ! ಕಾರು ಬಳಿಕ ಅಡುಗೆ ಮನೆಗೂ ಬಂತು ಎಥೆನಾಲ್?