ಎಲ್‌ಪಿಜಿ ಇನ್ನು ಮುಗಿದ ಅಧ್ಯಾಯ! ಕಾರು ಬಳಿಕ ಅಡುಗೆ ಮನೆಗೂ ಬಂತು ಎಥೆನಾಲ್?

Kannadaprabha News   | Kannada Prabha
Published : Jul 22, 2026, 07:15 AM IST
ethanol for the kitchen too just like LPG

ಸಾರಾಂಶ

ಕೇಂದ್ರ ಸರ್ಕಾರವು ಅಡುಗೆಗೆ ಬಳಸುವ ಎಲ್‌ಪಿಜಿ ಬದಲಿಗೆ ಎಥನಾಲ್ ಬಳಕೆಯನ್ನು ಉತ್ತೇಜಿಸಲು ಚಿಂತನೆ ನಡೆಸಿದೆ. ವಿದೇಶಿ ಅವಲಂಬನೆ ತಗ್ಗಿಸಿ, ದೇಶೀಯವಾಗಿ ಹೆಚ್ಚುವರಿ ಉತ್ಪಾದನೆಯಾಗುತ್ತಿರುವ ಎಥನಾಲ್‌ ಅನ್ನು ಮನೆಮನೆಗೆ ತಲುಪಿಸುವ ಯೋಜನೆ ಇದಾಗಿದ್ದು, ಶೀಘ್ರದಲ್ಲೇ ಸಬ್ಸಿಡಿ ಸಹಿತ ನೀತಿ ಜಾರಿ ನಿರೀಕ್ಷೆ.

  • ಎಲ್‌ಪಿಜಿ ರೀತಿಯಲ್ಲೇ ಮನೆಮನೆಗೂ ಪೂರೈಕೆ ಪ್ಲ್ಯಾನ್‌
  • ವಿದೇಶಗಳ ಮೇಲಿನ ಅವಲಂಬನೆ ತಗ್ಗಿಸುವ ಉದ್ದೇಶ

ನವದೆಹಲಿ (ಜು.22): ವಾಹನಗಳಿಗೆ ಎಥನಾಲ್‌ ಮಿಶ್ರಿತ ಇಂಧನ ಬಳಕೆ ಆರಂಭವಾಗಿ, ಅದರ ಬಗ್ಗೆ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಭಾರತದ ಅಡುಗೆ ಮನೆಗಳಿಗೂ ಎಥನಾಲ್‌ ಪೂರೈಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಸದ್ಯ ಬಹುತೇಕ ಮನೆಗಳಲ್ಲಿ ಅಡುಗೆಗೆ ಬಳಸಲಾಗುತ್ತಿರುವ ಎಲ್‌ಪಿಜಿ ಬದಲು ಎಥನಾಲ್‌ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ ಈ ನವೀಕರಿಸಬಹುದಾದ ಇಂಧನ ಒಲೆಗಳ ಪರೀಕ್ಷೆ ನಡೆದಿದೆ.

ಸೆಪ್ಟೆಂಬರ್‌ ವೇಳೆಗೆ ಅಡುಗೆಗೆ ಎಥನಾಲ್‌ ಬಳಕೆಗೆ ಸಂಬಂಧಿಸಿದ ನೀತಿ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ. ಇದಕ್ಕಾಗಿ ಸಬ್ಸಿಡಿಯನ್ನೂ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ದೇಶವೇನು?:

ದೇಶಕ್ಕೆ ಅಗತ್ಯವಿರುವ ಶೇ.60ರಷ್ಟು ಎಲ್‌ಪಿಜಿಯನ್ನು ವಿದೇಶಗಳಿಂದ ತರಿಸಲಾಗುತ್ತಿದೆ. ಇದಕ್ಕಾಗಿ ವ್ಯಯಿಸಲಾಗುತ್ತಿರುವ ವಿದೇಶಿ ವಿನಿಮಯವನ್ನು ಉಳಿತಾಯ ಮಾಡುವುದು ಸರ್ಕಾರದ ಗುರಿ. ಜತೆಗೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಸಿಲಿಂಡರ್‌ಗಳಿಗೆ ಹಾಹಾಕಾರ ಶುರುವಾದ ಬಳಿಕ ಇದರ ಅನಿವಾರ್ಯತೆಯೂ ಹೆಚ್ಚಿದೆ.

ಜತೆಗೆ ದೇಶದಲ್ಲಿ ಎಥನಾಲ್‌ ಉತ್ಪಾದನೆ ಹೆಚ್ಚುತ್ತಲೇ ಸಾಗಿದೆ. ಸದ್ಯ ಭಾರತದಲ್ಲಿ ವಾರ್ಷಿಕ 2 ಸಾವಿರ ಕೋಟಿ ಲೀ. ಎಥನಾಲ್‌ ಉತ್ಪಾದಿಸಲಾಗುತ್ತಿದ್ದು, ಈ ಆರ್ಥಿಕ ವರ್ಷದಲ್ಲಿ ಇದಕ್ಕೆ ಹೆಚ್ಚುವರಿ 400 ಕೋಟಿ ಲೀ. ಸೇರ್ಪಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು 1 ಸಾವಿರ ಕೋಟಿ ಲೀ.ನಷ್ಟು ಇ-20 ಪೆಟ್ರೋಲ್‌ಗೆ ಹೋಗುತ್ತಿದ್ದರೆ, ಮದ್ಯ, ಔಷಧಿ, ರಾಸಾಯನಿಕ ತಯಾರಿಕೆಗೆ 350 ಕೋಟಿ ಲೀ. ಅಷ್ಟೇ ಬಳಕೆಯಾಗುತ್ತಿದೆ. ಉಳಿದ 700 ಕೋಟಿ ಲೀ.ಅನ್ನು ರಫ್ತು ಮಾಡುವುದರ ಜತೆಗೆ ಅಡುಗೆಗೆ ಬಳಸುವ ಆಯ್ಕೆಯಿದೆ. ಇದರಿಂದ ಹಣವು ಸರ್ಕಾರದ ಬೊಕ್ಕಸ ಹಾಗೂ ಅಲ್ಲಿಂದ ನೇರವಾಗಿ ರೈತರ ಜೇಬನ್ನು ತಲುಪಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ನೀಟ್‌ ಅಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೊನೆಗೂ ಒಪ್ಪಿಕೊಂಡ ಕೇಂದ್ರ ಸರ್ಕಾರ
Delhi Protest: ಸುಮ್ಮನೆ ಹೊರಟಿದ್ದೆ, ಬೈದು ಫೋನ್ ಒಡೆದ್ರು! ಜಂತರ್ ಮಂತರ್‌ನಲ್ಲಿ ಕಣ್ಣೀರಿಟ್ಟ ಯುವಕನ ಕರುಣಾಜನಕ ಕಥೆ!